ಎದೆ ಮೇಲೆ ಮಲಗಿ ನಗುತ್ತಿದ್ದ ದೇವತೆ: ನಿರ್ಭಯಾ ನೆನೆದು ಕಣ್ಣೀರಾದ ತಂದೆ

ನವದೆಹಲಿ: ನಾನೆಂದೂ ಮಗ-ಮಗಳೆಂಬ ಭೇದಭಾವ ಮಾಡಿಲ್ಲ. ತಂದೆಯೋರ್ವನಿಗೆ ಮಗಳೆಂದರೆ ತುಸು ಹೆಚ್ಚೇ ಪ್ರೀತಿ. ಅದರಂತೆ ನಿರ್ಭಯಾ ಮೇಲೆ ನನಗೆ ಅತೀವ ಪ್ರೀತಿ ಇತ್ತು. ಚಿಕ್ಕವಳಿದ್ದಾಗ ಯಾವಾಗಲೂ ನನ್ನ ಬಳಿಯೇ ಮಲಗುತ್ತಿದ್ದ ನಿರ್ಭಯಾ, ಎದೆ ಮೇಲೆ ಮಲಗಿ ನಗುತ್ತಿದ್ದರೆ ನನ್ನ ದಿನದ ಎಲ್ಲಾ ದು:ಖ ದುಮ್ಮಾನಗಳನ್ನು ನಾನು ಮರೆತು ಬಿಡುತ್ತಿದೆ. ದೇವತೆಯಂತೆ ಮುಗುಳ್ನಗುತ್ತಾ ಎದೆ ಮೇಲೆ ಮಲಗಿದ್ದರೆ ಅದಕ್ಕಿಂತ ಸಮಾಧಾನದ ಸಂಗತಿ ಮತ್ತೊಂದಿರಲಿಲ್ಲ... ಇದು ಪಾಪಿಗಳ ಹೀನ ಕೃತ್ಯಕ್ಕೆ ಬಲಿಯಾದ ಈ ದೇಶದ ಮಗಳು ನಿರ್ಭಯಾ ಅವರ ತಂದೆಯ ಪ್ರತಿಕ್ರಿಯೆ. ತಿಹಾರ್ ಜೈಲಿನ ಹೊರಗೆ ಹಂತಕರ ಜಾರಿಯಾದ ಕುರಿತು ಖಚಿತತೆಗಾಗಿ ಕಾಯುತ್ತಿದ್ದ ನಿರ್ಭಯಾ ಪೋಷಕರು, ಹಂತಕರಿಗೆ ಗಲ್ಲುಶಿಕ್ಷೆ ನೀಡಲಾಗಿದೆ ಎಂದು ಕೇಳುತ್ತಿದ್ದಂತೇ ಕಣ್ಣೀರಾದರು. ಈ ವೇಳೆ ಮಾತನಾಡಿದ ನಿರ್ಭಯಾ ತಂದೆ , ಮಗಳನ್ನು ನೆನೆದು ಭಾವುಕರಾದರು. ನನ್ನ ಬದುಕಾಗಿದ್ದ ಮಗಳನ್ನೇ ಕಸಿದುಕೊಂಡಿದ್ದ ಪಾಪಿಗಳುಗೆ ಗಲ್ಲುಶಿಕ್ಷೆ ಜಾರಿಯಾಗುವುದನ್ನು ಏಳು ವರ್ಷಗಳಿಂದ ಕಾಯುತ್ತಿದೆ ಎಂದು ಬದ್ರಿನಾಥ್ ಹೇಳಿದರು. ನಾನೆಂದೂ ಮಗ-ಮಗಳೆಂಬ ಭೇದಭಾವ ಮಾಡಿಲ್ಲ. ಮಗನಿಗೆ ಏನು ಸೌಲಭ್ಯ ನೀಡಿದ್ದೆವೋ ಅದೇ ಸೌಲಭ್ಯವನ್ನು ಆಕೆಗೂ ನೀಡಿದ್ದೇವು. ಆಕೆ ಕೇಳಿದ್ದನ್ನೆಲ್ಲಾ ತಂದು ಕೊಡದಿದ್ದರೆ ನನಗೆ ಸಮಾಧಾನವೇ ಆಗುತ್ತಿರಲಿಲ್ಲ ಎಂದು ಹೇಳುತ್ತಾ ಬದ್ರಿನಾಥ್ ಕಣ್ಣೀರಾದರು. ಇದೇ ವೇಳೆ ನ್ಯಾಯ ವಿಳಂಬವಾಗಿ ದೊರೆಯಿತು ಎಂದು ಹೇಳಿರುವ ನಿರ್ಭಯಾ ತಂದೆ ಬದ್ರಿನಾಥ್, ಇಂತಹ ಹೀನ ಕೃತ್ಯಗಳ ವಿಚಾರಣೆ ಅತ್ಯಂತ ತ್ವರಿತವಾಗಿ ಮಾಡಬೇಕು ಎಂದು ಆಗ್ರಹಿಸಿದರು. ನಾವೆಂದೂ ನ್ಯಾಯಾಲಯದ ಮೇಲಿನ ಭರವಸೆ ಕಳೆದಿಕೊಂಡಿರಲಿಲ್ಲ. ಆದರೆ ವಿಳಂಬ ನ್ಯಾಯ ನಮ್ಮ ದುಗುಡವನ್ನು ಹೆಚ್ಚಿಸಿತ್ತು ಎಂದು ಬದ್ರಿನಾಥ್ ಹೇಳಿದರು. ಈ ದೇಶದಲ್ಲಿ ಅತ್ಯಾಚಾರಕ್ಕೆ ನಲುಗಿರುವ ಅದೆಷ್ಟೋ ಹೆಣ್ಣುಮಕ್ಕಳು ಇನ್ನೂ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಅವರೊಂದಿಗೆ ಕೈ ಜೋಡಿಸಿ ನ್ಯಾಯಕ್ಕಾಗಿ ಹೋರಾಡುವುದು ನಮ್ಮ ಮುಂದಿನ ಗುರಿ ಎಂದು ನಿರ್ಭಯಾ ತಂದೆ ಬದ್ರಿನಾಥ್ ಸ್ಪಷ್ಟಪಡಿಸಿದರು.


from India & World News in Kannada | VK Polls https://ift.tt/2xU9jME

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...