ತುಮಕೂರು: ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರಲ್ಲಿ ಆತಂಕ ಶುರುವಾಗಿದೆ. ಈಗಾಗಲೇ ಮಕ್ಕಳಿಗೆ ಶಾಲೆಗೆ ಬರದಂತೆ ರಜೆ ನೀಡಲಾಗಿದೆ. ಆದರೆ ಶಿಕ್ಷಕರನ್ನು ಮಾತ್ರ ಅದರಿಂದ ಮುಕ್ತ ಮಾಡದಿರುವುದು ಇಡೀ ರಾಜ್ಯದ ಶಿಕ್ಷಕರ ಸಮೂಹದಲ್ಲಿ ಆತಂಕ ಉಂಟುಮಾಡಿದೆ. ಆದ್ದರಿಂದ ಶಿಕ್ಷಕರಿಗೂ ರಜೆ ವಿಸ್ತರಿಸಿ ಎನ್ನುವ ಕೂಗು ಎದ್ದಿದೆ. ಮುಂಬರುವ ಜನಗಣತಿ ವೇಳೆಯಲ್ಲಿ ನಾವು ಮನೆ ಮನೆಗಳಿಗೆ ಹೋಗಬೇಕಾಗುತ್ತದೆ. ಎಲ್ಲ ಜನರ ಬಳಿ ಕುಳಿತು ದಾಖಲೆ ಪಡೆಯಬೇಕಾಗುತ್ತದೆ. ಎಲ್ಲಾಪ್ರದೇಶಗಳಲ್ಲಿಓಡಾಡಬೇಕಾಗುತ್ತದೆ. ಆದ್ದರಿಂದ ಜನಗಣತಿ ಕಾರ್ಯ ಮುಂದೂಡಬೇಕು ಮತ್ತು 7ನೇ ತರಗತಿ ಮೆಟ್ರಿಕ್ ಪರೀಕ್ಷೆಗಳ ಬಳಿಕ ಕಡ್ಡಾಯವಾಗಿ ಶಿಕ್ಷಕರಿಗೂ ರಜೆ ನೀಡಬೇಕು ಎನ್ನುವ ಒತ್ತಾಯ ಸಹ ಕೇಳಿಬರುತ್ತಿದೆ. ಮನೆಯಲ್ಲಿಯೇ ಕೆಲಸಶಿಕ್ಷಕರಿಗೆ ಮನೆಯಲ್ಲಿಯೇ ಕೆಲಸ ಎನ್ನುವ ಆಧಾರದಲ್ಲಿ ಸರಕಾರ ನಮ್ಮಿಂದ ಕೆಲಸ ತೆಗೆದುಕೊಳ್ಳಲಿ. ಆದರೆ ದೈಹಿಕವಾಗಿ ದಿನಾಲೂ ಶಾಲೆಗಳಿಗೆ ಹೋಗುವುದು ಮತ್ತು ನಾನಾ ಮಾರ್ಗಗಳ ಮೂಲಕ ಮನೆಗಳಿಗೆ ಬರುವುದು ತುಂಬಾ ಕಷ್ಟ. ಆದ್ದರಿಂದ ಪರೀಕ್ಷೆ ನಂತರ ಹಲವು ಇಲಾಖೆಗಳ ಕೆಲಸವು ಸೇರಿ ಎಸ್‌ಎಟಿ ಮತ್ತು ಮೌಲ್ಯಮಾಪನ ಮನೆಯಲ್ಲಿ ಕುಳಿತು ಮಾಡಲು ಅವಕಾಶ ಕಲ್ಪಿಸಬೇಕು ಎನ್ನುವ ಕೂಗು ಹೆಚ್ಚಾಗುತ್ತಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಿಕ್ಷಕರು ಪಾಠ ಮಾಡಲು ಬರದಂತಹ ದಿನಗಳು ನಿರ್ಮಾಣಗೊಳ್ಳ ಬಹುದು ಎಂದು ಶಿಕ್ಷಕರ ಸಂಘ ಕಳವಳ ವ್ಯಕ್ತಪಡಿಸಿದೆ. ರಾಜ್ಯದಲ್ಲಿ 2.03 ಲಕ್ಷ ಶಿಕ್ಷಕರುರಾಜ್ಯದಲ್ಲಿ ಒಟ್ಟು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರೆಲ್ಲರೂ ಸೇರಿ ಒಟ್ಟು 2.03 ಲಕ್ಷ ಸಂಖ್ಯೆಯಿದೆ. ಇವರಲ್ಲಿ 1.68 ಲಕ್ಷ ಪ್ರಾಥಮಿಕ ಮತ್ತು 35,000 ಪ್ರೌಢಶಾಲೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರ ಜತೆಗೆ ಕಾಲೇಜು ಶಿಕ್ಷಣ ಇಲಾಖೆ ಅಧ್ಯಾಪಕರೂ ಇದಕ್ಕೆ ಧ್ವನಿಗೂಡಿಸಿದ್ದಾರೆ. ವೈರಸ್ ಹರಡಿರುವ ಈ ಋುತುವಿನಲ್ಲಿ ಸರಕಾರ ಶಿಕ್ಷಕರು ಮತ್ತು ಅಧ್ಯಾಪಕರಿಂದ ಕೆಲಸ ಮಾಡಿಸಿಕೊಳ್ಳಲಿ. ಆದರೆ ಅವರ ಆರೋಗ್ಯದ ಸುರಕ್ಷತೆಗೂ ಗಮನ ಹರಿಸಬೇಕು. ಮೆಟ್ರಿಕ್ ಫಲಿತಾಂಶ ಹೆಚ್ಚಳ ಮತ್ತು ಶಾಲೆಬಿಟ್ಟ ಮಕ್ಕಳನ್ನು ಕರೆತರುವಂಥ ಗುರುತರ ಜವಾಬ್ದಾರಿ ನಿಭಾಯಿಸುವುದು ಸೇರಿ ಸರಕಾರದ ಹೊಣೆ ಹೊತ್ತಿದ್ದೇವೆ. ಆದರೀಗ ಆಪಾಯದ ದಿನಗಳು ಎದುರಾಗಿವೆ. ಆದ್ದರಿಂದ ನಮ್ಮ ಜತೆ ಸರಕಾರ ಕೈಜೋಡಿಸಿ ನಮ್ಮ ಬೇಡಿಕೆ ಈಡೇರಿಸಬೇಕು. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ನಮ್ಮ ಕಷ್ಟ ತಿಳಿದೀತು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಮಾಡಲಾಗಿದೆ. ಕೊರೊನಾ ಭೀತಿಯಿಂದ ಈಗಾಗಲೇ ಕೆಲವು ಐಟಿ-ಬಿಟಿ ಕಂಪನಿಗಳು ಕಚೇರಿಗಳನ್ನು ಮುಚ್ಚಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಅದೇ ಮಾದರಿಯಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲಿ ತೊಡಗಿದ ಬಳಿಕ ಪ್ರಾಥಮಿಕ ಶಿಕ್ಷಕರಿಗೆ ಸರಕಾರ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಬೇಕು. - ಉಮೇಶ್, ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಿಪಟೂರು. ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿಯಿಂದ ಸಾರ್ವಜನಿಕ ಸ್ಥಳಗಳು ಮತ್ತು ಕೆಲಸದ ಸ್ಥಳಗಳಲ್ಲಿ ನಿತ್ಯ ಕೆಲಸ ಮಾಡುವ ಜನರಲ್ಲಿ ಆತಂಕ ಶುರುವಾಗಿದೆ. ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ಮುಂಬರುವ ಜನಗಣತಿ ಕಾರ್ಯವನ್ನು ಸರಕಾರ ಮುಂದೂಡಬೇಕು. ಶಿಕ್ಷಕರು ಮನೆ ಮನೆಗೆ ಬರುವುದರಿಂದ ಗಣತಿ ಸುರಕ್ಷಿತವಾಗಿಲ್ಲ. ಸರಕಾರ ನಮ್ಮ ಕೂಗಿಗೆ ಕಿವಿಕೊಡಲಿ. - ರಮೇಶ್, ಅಧ್ಯಕ್ಷರು, ಸರಕಾರಿ ನೌಕರರ ಸಂಘ, ತಿಟಪೂರು.
from India & World News in Kannada | VK Polls https://ift.tt/2x42GXK