ಇಂದಿನ ಚುಟುಕು ಸುದ್ದಿಗಳು: ಸಂಜಯ್ ನಗರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಕಾಲಿಗೆ ಗುಂಡೇಟು

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಬಂದೋಬಸ್ತ್‌ ಮಾಡಿ ಸಾರ್ವಜನಿಕರನ್ನು ಕಾಯುತ್ತಿರುವ ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ನಿನ್ನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಂಧಿತನನ್ನು ಸ್ಥಳ ಮಹಜರ್ ಗೆಂದು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆ ವೇಳೆ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಬಾಗಲಕೋಟೆ: ಕೊರೊನಾ ಭೀತಿ ಹಿನ್ನಲೇ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ವ್ಯವಸ್ಥೆಬಾಗಲಕೋಟೆ : ಕೊರೊನಾ ಭೀತಿ ಹಿನ್ನಲೇ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ಎಪಿಎಂಸಿ ಹರಾಜಿನಲ್ಲಿ ಮಾರ್ಕಿಂಗ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿದೆ. ಈ‌ ಪ್ರಯತ್ನದ ಮೂಲಕ ಜನಸಂದಣಿ ತಡೆಯಲು ಯತ್ನಿಸಲಾಗುತ್ತಿದೆ. ಎಪಿಎಂಸಿಯಿಂದ ಮಾರುಕಟ್ಟೆಗೆ ತರಕಾರಿ ಕಳಿಸುವ ಬದಲು ಬಡಾವಣೆಯಲ್ಲಿ ‌ಮಾರಾಟ‌ ಮಾಡುವಂತೆ ವ್ಯಾಪಾರಸ್ಥರಿಗೆ ಸೂಚಿಸಲಾಗಿದೆ. ಈ ಪ್ರಯೋಗದಿಂದ ಜನಸಂದಣಿ ಕಡಿಮೆಗೊಳಿಸುವ ಅವಕಾಶವಿದೆ.


from India & World News in Kannada | VK Polls https://ift.tt/39ktqkf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...