ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ, ಕೇರಳಿಗರ ಪ್ಲಾನ್‌ಗೆ ನೆಟ್ಟಿಗರು ಫಿದಾ

ತಿರುವನಂತಪುರಂ: ಕೊರೊನಾ ವೈರಸ್ ಹರಡದಂತೆ ಹೇಗೆಲ್ಲಾ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬಹುದು ಎಂಬ ಭಿನ್ನ ಭಿನ್ನವಾದ ಐಡಿಯಾಗಳು ಗಮನ ಸೆಳೆಯುತ್ತಿದೆ. ಜನರ ನಡುವೆ ಅಂತರವನ್ನು ಕಾಯ್ದುಕೊಳ್ಳಲು ವೃತ್ತಾಕಾರದಲ್ಲಿ ಗುರುತುಗಳನ್ನು ಹಾಕುವ ಐಡಿಯಾ ಸಖತ್ ಫೇಮಸ್ ಆಗಿದೆ. ಪೊಲೀಸರ ಈ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆಯುತ್ತಿದೆ. ಆದರೆ ದಿನಸಿ ಅಂಗಡಿಯ ವ್ಯಕ್ತಿಯೊರ್ವ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಭಿನ್ನವಾದ ಐಡಿಯಾವನ್ನು ತೋರಿಸಿಕೊಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದಿನಸಿ ಅಂಗಡಿ ಮಾಲೀಕನೊಬ್ಬ ಅಂಗಡಿಗೆ ಬಂದ ಗ್ರಾಹಕರಿಗೆ ಧವಸ ಧಾನ್ಯವನ್ನು ನೇರವಾಗಿ ಅವರ ಕೈಚೀಲಕ್ಕೆ ಹಾಕುವ ಬದಲಾಗಿ ಅಗಲವಾದ ಪೈಪ್‌ ಮೂಲಕ ಸುರಿಯುವ ವಿಧಾನವನ್ನು ಪರಿಚಯಿಸಿದ್ದಾರೆ. ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗೂ ನೆಟ್ಟಿಗರಿಂದ ಭಾರೀ ಮೆಚ್ಚುಗೆಗೂ ಪಾತ್ರವಾಗುತ್ತಿದೆ. ಕೋವಿಡ್‌-19 ಸೋಂಕು ಹಲವು ವಿಧಾನಗಳಿಂದ ಹರಡುತ್ತೆ. ಅದರಲ್ಲೂ ಕನಿಷ್ಠ ಆರು ಅಡಿಯಷ್ಟು ಪರಸ್ಪರ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ. ಒಬ್ಬರ ಕೈಯನ್ನು ಸೋಂಕಿತ ವ್ಯಕ್ತಿ ಮುಟ್ಟುವುದರಿಂದ ಕೊರೊನಾ ಹರಡಬಹುದು. ಅವಲ್ಲದೆ ಕೊರೊನಾ ಸೋಂಕಿತ ವ್ಯಕ್ತಿ ಮುಟ್ಟಿದ ವಸ್ತುವನ್ನು ಮತ್ತೊಬ್ಬರು ಮುಟ್ಟುವುದರಿಂದ ಈ ಸೋಂಕು ಹರಡಬಹುದು. ಈ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಅಂತರವನ್ನು ಕಠಿಣವಾಗಿ ಪಾಲನೆ ಮಾಡಬೇಕು ಎಂಬ ಒತ್ತಾಯವನ್ನು ಸರ್ಕಾರವೂ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕೇರಳದ ಈ ದಿನಸಿ ಅಂಗಡಿ ಮಾಲೀಕ ತೋರಿಸಿಕೊಟ್ಟ ಸಾಮಾಜಿಕ ಅಂತರದ ಐಡಿಯಾ ನಿಜಕ್ಕೂ ಮೆಚ್ಚತಕ್ಕದ್ದು.


from India & World News in Kannada | VK Polls https://ift.tt/33IwXr6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...