ಮಧ್ಯ ಪ್ರದೇಶ ಬಿಕ್ಕಟ್ಟು, ಸುಪ್ರೀಂ ಕೋರ್ಟ್‌ನಿಂದ ಕಮಲ್‌ನಾಥ್‌ಗೆ ನೋಟಿಸ್‌

ಹೊಸದಿಲ್ಲಿ: ಸದನದಲ್ಲಿ ವಿಶ್ವಾಸಮತಕ್ಕೆ ಅವಕಾಶ ಕೋರಿ ಬಿಜೆಪಿ ಸಲ್ಲಿಸಿರುವ ಅರ್ಜಿ ಸಂಬಂಧ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ಗೆ ನೋಟಿಸ್‌ ಜಾರಿಗೊಳಿಸಿದೆ. ನ್ಯಾಯಾಲಯ ನಾಳೆ ಅಂದರೆ ಬುಧವಾರ ಮತ್ತೆ ಈ ಪ್ರಕರಣದ ವಿಚಾರಣೆ ನಡೆಸಲಿದೆ. ನ್ಯಾ. ಡಿವೈ ಚಂದ್ರಚೂಡ್‌ ನೇತೃತ್ವದ ಪೀಠ ಮುಖ್ಯಮಂತ್ರಿಯಲ್ಲದೆ, ವಿಧಾನಸಭೆ ಕಾರ್ಯದರ್ಶಿಗೂ ನೋಟಿಸ್‌ ಜಾರಿಗೊಳಿಸಿ ಅವರ ಅಭಿಪ್ರಾಯ ಕೇಳಿದೆ. ಮತ್ತು ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಸೋಮವಾರ ಕೊರೊನಾ ವೈರಸ್‌ನ ಭೀತಿಯ ಹಿನ್ನೆಲೆಯಲ್ಲಿ ಬಜೆಟ್‌ ಅಧಿವೇಶವನ್ನು 10 ದಿನಗಳ ಕಾಲ ಮುಂದೂಡಲಾಗಿತ್ತು. ಇದರಿಂದ ಉಸಿರಾಡಲು ಒಂದಷ್ಟು ದಿನಗಳ ಕಾಲಾವಕಾಶ ಸಿಕ್ಕಿತ್ತು. ಆದರೆ ಸಂಜೆ ವೇಳೆಗೆ ರಾಜ್ಯಪಾಲ ಲಾಲ್‌ಜಿ ಟಂಡನ್‌ ಮಂಗಳವಾರದ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಒಂದೊಮ್ಮೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೇ ಇದ್ದಲ್ಲಿ ನಿಮಗೆ ಬಹುಮತ ಇಲ್ಲವೆಂದೇ ಅರ್ಥ ಎಂದು ಅವರು ಎಚ್ಚರಿಸಿದ್ದರು.

ಜೊತೆಗೆ ರಾಜ್ಯಪಾಲರನ್ನು ಟೀಕಿಸಿ ಕಮಲ್‌ನಾಥ್‌ ಬರೆದ ಪತ್ರಕ್ಕೆ ಲಾಲ್‌ಜೀ ಟಂಡನ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪತ್ರಕ್ಕೆ ಅರ್ಥವಿಲ್ಲ, ಆರೋಪ ಆಧಾರ ರಹಿತ ಮತ್ತು ಸಂವಿಧಾನದ ಮೌಲ್ಯಕ್ಕೆ ವಿರುದ್ಧವಾದದು ಎಂದು ಅವರು ಪ್ರತಿಪಾದಿಸಿದ್ದರು.

ರಾಜ್ಯಪಾಲರ ಪತ್ರದ ಬೆನ್ನಿಗೆ ತಮಗೆ ಬಹುಮತ ಇದೆ ಎಂದು ಹೇಳಿದ್ದ ಕಮಲ್‌ನಾಥ್‌, ಮಂಗಳವಾರ ಬಹುಮತ ಸಾಬೀತು ಪಡಿಸುವ ಯಾವುದೇ ಪ್ರಯತ್ನಕ್ಕೂ ಮುಂದಾಗಿಲ್ಲ. ಈ ಮೂಲಕ ರಾಜ್ಯಪಾಲರ ಪತ್ರವನ್ನು ಅವರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.


from India & World News in Kannada | VK Polls https://ift.tt/38Y6syS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...