ವಿರಾಟ್ ಕೊಹ್ಲಿ ಫುಲ್ ಶಾಟ್ ಚಿತ್ರ ಹಂಚಿದ ಐಸಿಸಿ; ರೋಹಿತ್ ಶರ್ಮಾ ಅಸಮಾಧಾನ!

ಹೊಸದಿಲ್ಲಿ: ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ಬಹುತೇಕ ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಕ್ರಿಕೆಟ್ ತಂಡದ ಸೇರಿದಂತೆ ಎಲ್ಲ ಟೂರ್ನಿಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದರಿಂದಾಗಿ ಆಟಗಾರರೆಲ್ಲ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಈ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಹಳೆಯ ಕ್ರಿಕೆಟ್ ನೆನಪುಗಳನ್ನು ಹಂಚುವ ಮೂಲಕ ಅಭಿಮಾನಿಗಳನ್ನು ಸಕ್ರಿಯವಾಗಿ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಈ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಾರ್ಚ್ 22ರಂದು ಮಾಡಿರುವ ಟ್ವೀಟ್, ಹಿಟ್‌ಮ್ಯಾನ್ ಖ್ಯಾತಿಯ ಕೋಪಕ್ಕೆ ಕಾರಣವಾಗಿದೆ. ಸಮಕಾಲೀನ ಹಾಗೂ ಮಾಜಿ ಆಟಗಾರರ ಪೈಕಿ ಅತ್ಯುತ್ತಮ ಫುಲ್ ಶಾಟ್ ಹೊಡೆಯುವ ಆಟಗಾರರನ್ನು ಹೆಸರಿಸಲು ಐಸಿಸಿ ಅಭಿಮಾನಿಗಳಿಗೆ ಸೂಚನೆ ನೀಡಿತ್ತು. ಈ ಟ್ವೀಟ್‌ನಲ್ಲಿ ನಾಲ್ವರು ಆಟಗಾರರ ಚಿತ್ರವನ್ನು ಹಂಚಿತ್ತು. ಐಸಿಸಿಯು ಮಾಜಿ ದಿಗ್ಗಜರಾದ ಸರ್ ವಿವಿಯನ್ ರಿಚರ್ಡ್ಸ್, ರಿಕಿ ಪಾಂಟಿಂಗ್ ಹಾಗೂ ಹರ್ಷಲ್ ಗಿಬ್ಸ್ ಜೊತೆಗೆ ಟೀಮ್ ಇಂಡಿಯಾ ನಾಯಕ ಚಿತ್ರಗಳನ್ನು ಹಂಚಿದೆ. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ರೋಹಿತ್ ಶರ್ಮಾ, ಇಲ್ಲಿ ಯಾರೋ ಮಿಸ್ಸಿಂಗ್ ಆಗಿದ್ದಾರೆ ? ನನಗನಿಸುತ್ತಿದೆ ಮನೆಯಿಂದ ಕೆಲಸ ಮಾಡುವುದು ಅಷ್ಟು ಸುಲಭವಲ್ಲ ಎಂದು ಕಾಲೆಳೆದಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಸ್ವತ: ಅತ್ಯುತ್ತಮ ಫುಲ್ ಶಾಟ್ ಹೊಡೆಯುವುದರಲ್ಲಿ ರೋಹಿತ್ ಶರ್ಮಾ ಹೆಸರುವಾಸಿಯಾಗಿದ್ದಾರೆ. ಇದೀಗ ತಮ್ಮ ಚಿತ್ರವನ್ನು ಹಂಚಿಕೊಳ್ಳದಿರುವುದು ರೋಹಿತ್ ಅಸಮಾಧಾನಕ್ಕೆ ಕಾರಣವಾಗಿದೆ ಎಂಬುದು ತಿಳಿದು ಬಂದಿದೆ. ಈ ಮೊದಲು ಐಸಿಸಿ ಟ್ವೀಟ್‌ಗೆ ಪ್ರತಿಯಾಗಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ರಿಕಿ ಪಾಂಟಿಂಗ್ ಜೊತೆಗೆ ರೋಹಿತ್ ಶರ್ಮಾ ಹೆಸರುಗಳನ್ನು ಹೆಸರಿಸಿದ್ದರು. ಅಷ್ಟೇ ಯಾಕೆ ಅನೇಕ ಅಭಿಮಾನಿಗಳು ಐಸಿಸಿಗೆ ಉತ್ತರವಾಗಿ ರೋಹಿತ್ ಶರ್ಮಾ ಎಂಬ ಉತ್ತರ ನೀಡಿದ್ದರು. ಈ ಮೊದಲು ರೋಹಿತ್ ಶರ್ಮಾ ಕೂಡಾ ವಿಡಿಯೋ ಸಂದೇಶದ ಮೂಲಕ ಕೊರೊನಾ ವೈರಸ್ ಭೀತಿಯ ಬಗ್ಗೆ ಜಾಗೃತಿ ಮೂಡಿಸಿದ್ದರು. ಅಲ್ಲದೆ ಪ್ರಕೃತಿ ಮಾತೆಯನ್ನು ಉಳಿಸುವಂತೆ ಸಂದೇಶವೊಂದನ್ನು ಬರೆದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39f1VZ4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...