ಹೊಸ ದಿಲ್ಲಿ: ವಿಶ್ವವ್ಯಾಪಿಯಾಗಿರುವ ಬೆನ್ನಲ್ಲೇ, ವಿಶ್ವದೆಲ್ಲೆಡೆ ಇದ್ದ ಭಾರತೀಯರನ್ನು ತವರಿಗೆ ಕರೆತರಲು ಭಾರತ ಸರ್ಕಾರ ಕೈಗೊಂಡ ಕ್ರಮಗಳು ಇದೀಗ ಭಾರೀ ಪ್ರಶಂಸೆಗೆ ಪಾತ್ರವಾಗುತ್ತಿದೆ. ವೈರಸ್‌ನಿಂದ ಕಂಗೆಟ್ಟ ದೇಶಗಳಿಂದ ಭಾರತ ತನ್ನ ನಾಗರಿಕರನ್ನು ಅತ್ಯಂತ ವೇಗವಾಗಿ ಮಾಡುವ ಮೂಲಕ ಗಮನ ಸೆಳೆದಿದೆ. ಡಿಸೆಂಬರ್ 2019ರಲ್ಲಿ ಚೀನಾದಲ್ಲಿ ಕೊರೊನಾ ವೈರಸ್ ಹರಡುತ್ತಿದೆ ಎಂಬ ಸುದ್ದಿಗಳು ಕೇಳಿ ಬಂದ ಬೆನ್ನಲ್ಲೇ ಭಾರತ ಸರ್ಕಾರ ಎಚ್ಚೆತ್ತುಕೊಂಡಿತ್ತು. ವೈರಸ್ ಪೀಡಿತ ವುಹಾನ್‌ನಿಂದ ತನ್ನ ಪ್ರಜೆಗಳನ್ನು ತೆರವುಗೊಳಿಸಿದ ಮೊದಲ ರಾಷ್ಟ್ರ ಭಾರತವಾಗಿತ್ತು. ವಿಶೇಷ ವಿಮಾನಗಳ ಮೂಲಕ, ಎಲ್ಲ ಭಾರತೀಯ ಪ್ರಜೆಗಳನ್ನೂ ಏರ್‌ಲಿಫ್ಟ್ ಮಾಡಲಾಗಿತ್ತು. ಭಾರತ ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು , ಇಟಲಿ, ಇರಾನ್ ಹಾಗೂ ಇತರ ದೇಶಗಳಿಂದ ಭಾರತಕ್ಕೆ ಕರೆಸಿಕೊಂಡಿದೆ. ವಿಶೇಷ ವಿಮಾನಗಳ ಮೂಲಕ ಏರ್‌ಲಿಫ್ಟ್ ಮಾಡಿಸಿದೆ. ಚೀನಾದಿಂದಲೇ 647 ಮಂದಿ ಏರ್‌ಲಿಫ್ಟ್ ಫೆಬ್ರವರಿ 18, 2020ರ ಒಳಗೆ ಚೀನಾದಿಂದ ಭಾರತ ತನ್ನ 647 ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ವುಹಾನ್ ಪ್ರಾಂತ್ಯದಿಂದಲೇ ವಿಶೇಷ ವಿಮಾನಗಳ ಮೂಲಕ ಏರ್‌ಲಿಫ್ಟ್ ಮಾಡಿದೆ. ಚೀನಾದ ಹುಬಿಯಲ್ಲಿ ಇರುವ ವುಹಾನ್ ನಗರ, ಕೊರೊನಾ ವೈರಸ್‌ನ ಕೇಂದ್ರ ಬಿಂದು ಅಂತಲೇ ಹೆಸರಾಗಿತ್ತು. ಈ ನಗರದಲ್ಲಿ ನೂರಾರು ಭಾರತೀಯರು ಹೊರಬರಲಾಗದೆ ಸಿಲುಕಿದ್ದರು. ಜೀವ ಭಯದಿಂದ ತತ್ತರಿಸಿಹೋಗಿದ್ದರು. ಅವರನ್ನು ಒಂದೇ ಬಾರಿಗೆ 2 ವಿಶೇಷ ಏರ್‌ಇಂಡಿಯಾ ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿತ್ತು. ಒಟ್ಟು 645 ಮಂದಿಯನ್ನು ಭಾರತ ಹಿಂದಕ್ಕೆ ಕರೆಸಿಕೊಂಡಿತ್ತು. ಈ ಪೈಕಿ 647 ಮಂದಿ ಭಾರತೀಯ ಪ್ರಜೆಗಳೇ ಇದ್ದರು. ಫೆಬ್ರವರಿ 26ರಲ್ಲಿ ಏರ್ ಇಂಡಿಯಾ ವಿಶೇಷ ವಿಮಾನ ಚೀನದ ಹುಬಿ ಪ್ರಾಂತ್ಯದಿಂದ ಮತ್ತೆ 112 ಮಂದಿಯನ್ನು ಏರ್‌ಲಿಫ್ಟ್ ಮಾಡಿತು. ಈ ಪೈಕಿ 76 ಭಾರತೀಯ ಪ್ರಜೆಗಳಿದ್ದರು. ಮಯನ್ಮಾರ್, ಬಾಂಗ್ಲಾದೇಶ, ಮಾಲ್ಡೀವ್ಸ್, ಅಮೆರಿಕ, ಮಡಗಾಸ್ಕರ್, ದಕ್ಷಿಣ ಆಫ್ರಿಕಾ ದೇಶಗಳ ಪ್ರಜೆಗಳನ್ನೂ ಭಾರತೀಯ ವಾಯುಪಡೆ ಏರ್‌ಲಿಫ್ಟ್ ಮಾಡಿದೆ. ಚೀನಾ ಸೇರಿದಂತೆ ಹಲವು ದೇಶಗಳಿಂದ ಭಾರತಕ್ಕೆ ಬಂದ ಪ್ರಜೆಗಳನ್ನು ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್‌ನ ವಸತಿ ಗೃಹದಲ್ಲಿ ತಾತ್ಕಾಲಿಕ ಕ್ಯಾಂಪ್ ನಿರ್ಮಿಸಿ ಇರಿಸಲಾಗಿತ್ತು. 14 ದಿನಗಳ ನಿರ್ಬಂಧದ ಬಳಿಕ, ಯಾರಿಗೆಲ್ಲಾ ಕೊರೊನಾ ವೈರಸ್ ತಗುಲಿಲ್ಲ ಎಂದು ದೃಢವಾಯ್ತೋ, ಎಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು. ಚೀನಾದಿಂದ ಜನರನ್ನು ತೆರವುಗೊಳಿಸುವ ಜೊತೆಯಲ್ಲೇ ಚೀನಾಗೆ ಹಾರುತ್ತಿದ್ದ ಭಾರತೀಯ ವಿಮಾನಗಳು, ಅಲ್ಲಿನ ಜನಕ್ಕೆ ಬೇಕಾದ ವೈದ್ಯಕೀಯ ಸಲಕರಣೆಗಳನ್ನು ತಲುಪಿಸುವ ಮೂಲಕ, ಮಾನವೀಯತೆಯನ್ನೂ ಮೆರೆದಿದೆ. ಇರಾನ್‌ನಿಂದ 389 ಮಂದಿ ತೆರವು ಚೀನಾ ಬಳಿಕ ಅತ್ಯಧಿಕವಾಗಿ ಕೊರೊನಾದಿಂದ ಭಾದಿತವಾದ ಇರಾನ್‌ನಲ್ಲಿ 234 ಭಾರತೀಯರನ್ನು ಭಾರತ ಹಿಂದಕ್ಕೆ ಕರೆಸಿಕೊಂಡಿದೆ. ಈ ಪೈಕಿ 131 ಮಂದಿ ವಿದ್ಯಾರ್ಥಿಗಳಿದ್ದರೆ, 103 ಮಂದಿ ತೀರ್ಥ ಯಾತ್ರೆಗೆ ಹೋಗಿದ್ದರು. ಈವರೆಗೆ ಒಟ್ಟು 389 ಮಂದಿ ಭಾರತೀಯರು ಇರಾನ್‌ನಿಂದ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. ಇಟಲಿಯಿಂದ 218 ಮಂದಿ ವಾಪಸ್ ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿ ನಲುಗಿದ ಮತ್ತೊಂದು ದೇಶ ಇಟಲಿಯಿಂದ ಒಟ್ಟು 218 ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಮಿಲನ್ ನಗರದಲ್ಲೇ ಎಲ್ಲರೂ ಇದ್ದದ್ದು ವಿಶೇಷ. ಜಪಾನ್‌ನಿಂದ 119 ಮಂದಿ ವಾಪಸ್ ಜಪಾನ್ ದೇಶದಿಂದ ಈವರೆಗೆ ಒಟ್ಟು 119ಯನ್ನು ಭಾರತ ಹಿಂದಕ್ಕೆ ಕರೆಸಿಕೊಂಡಿದೆ. ಅಷ್ಟೇ ಅಲ್ಲ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಹಾಗೂ ಪೆರು ದೇಶಗಳ ಒಟ್ಟು 5 ಪ್ರಯಾಣಿಕರನ್ನೂ ಭಾರತ ಹಿಂದಕ್ಕೆ ಕರೆಸಿಕೊಂಡಿದೆ. ಈ ಪೈಕಿ ಡೈಮೆಂಡ್ ಪ್ರಿನ್ಸಸ್ ಹಡಗಿನಲ್ಲಿ ಇದ್ದ ಪ್ರಯಾಣಿಕರೂ ಸೇರಿದ್ದಾರೆ. ಜಪಾನ್‌ನಿಂದ ಬಂದ ಎಲ್ಲರಿಗೂ ಕೂಡಾ ಬೇರೆ ದೇಶಗಳಿಂದ ಕರೆತಂದವರ ರೀತಿಯಲ್ಲೇ ಎಲ್ಲಾ ರೀತಿಯ ಆರೋಗ್ಯ ಪರೀಕ್ಷೆಗಳನ್ನೂ ಮಾಡಲಾಗಿದೆ. ಕೊರೊನಾ ವೈರಸ್ ಸೋಂಕು ಹರಡಿಲ್ಲ ಎಂಬುದು ದೃಢಪಟ್ಟ ಬಳಿಕವಷ್ಟೇ ಎಲ್ಲರನ್ನೂ ಅವರ ಸ್ವಸ್ಥಳಕ್ಕೆ ಮರಳುವಂತೆ ಆದೇಶಿಸಲಾಗಿದೆ. 1031 ಭಾರತೀಯ ಪ್ರಜೆಗಳನ್ನು ಈವರೆಗೆ ಚೀನಾ ಸೇರಿದಂತೆ ಹಲವು ದೇಶಗಳಿಂದ ಭಾರತ ಏರ್‌ಲಿಫ್ಟ್ ಮಾಡಿದೆ. ಈ ಪೈಕಿ 48 ವಿದೇಶೀಯರೂ ಇದ್ದಾರೆ. ಎಲ್ಲರನ್ನೂ 14 ದಿನಗಳ ಕಾಲ ವಿಶೇಷ ನಿಗಾ ಘಟಕಗಳಲ್ಲಿ ಇರಿಸಲಾಗಿತ್ತು. ಇದೀಗ 890 ಮಂದಿಯನ್ನು ಹೊರಗೆ ಬಿಡಲಾಗಿದೆ. ಎಲ್ಲವೂ ಸರ್ಕಾರಿ ಖರ್ಚಿನಲ್ಲೇ ನಡೆದಿದೆ ಅನ್ನೋದು ಮತ್ತೊಂದು ವಿಶೇಷ.
from India & World News in Kannada | VK Polls https://ift.tt/33tv6qd