ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಹುತಾತ್ಮ ದಿನ: ಮೋದಿ ಸೇರಿ ಗಣ್ಯರ ನಮನ

ನವದೆಹಲಿ: ಇಂದು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಅಪ್ರತಿಮ ಕ್ರಾಂತಿಕಾರಿಗಳಾದ , ಸುಖ್‌ದೇವ್ ಹಾಗು ರಾಜಗುರು ಹುತಾತ್ಮರಾದ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಮಾತೆಯ ವೀರರಿಗೆ ನಮನ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶದ ಸ್ವಾತಂತ್ರ್ಯಕ್ಕಾಗಿ ನಗುತ್ತಲೇ ನೇಣುಗಂಬಕ್ಕೇರಿದ ಭಾರತ ಮಾತೆಯ ವೀರ ಪುತ್ರರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಭಗತ್ ಸಿಂಗ್ ಅವರ ಸಂಗಾತಿಗಳ ಹುತಾತ್ಮ ದಿನದಂದು ದೇಶ ಕಂಡ ಅಪ್ರತಿಮ ಕ್ರಾಂತಿಕಾರಿಗಳನ್ನು ನೆನೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ವೀರರಿಗೆ ಕೋಟಿ ಕೋಟಿ ನಮನ ಎಂದು ಹೇಳಿದ್ದಾರೆ. ಅಪ್ರತಿಮ ಕ್ರಾಂತಿಕಾರಿಗಳನ್ನು ನೆನೆದ ರಾಜ್ಯ ನಾಯಕರು: ಅದರಂತೆ ಭಗತ್ ಸಿಂಗ್ ಹಾಗು ಅವರ ಸಂಗಾತಿಗಳ ಹುತಯಾತ್ಮ ದಿನವನ್ನು ಸ್ಮರಿಸಿಕೊಂಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಶಹೀದ್ ಭಗತ್ ಸಿಂಗ್ ಹಾಗೂ ಸಂಗಾತಿಗಳು ಚಿರಸ್ಮರಣೀಯರು ಎಂದು ಟ್ವೀಟ್ ಮಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಭಗತ್ ಸಿಂಗ್ ಅವರನ್ನು ನೆನೆದಿದ್ದು, ನಿರ್ದಿಷ್ಟ ಕ್ರಾಂತಿಕಾರಿ ಸಿದ್ದಾಂತದೊಂದಿಗೆ ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಕ್ರಾಂತಿಕಾರಿಗಳಿಗೆ ನಮನ ಎಂದು ಟ್ವೀಟ್ ಮಾಡಿದ್ದಾರೆ. ಮಾ.31, 1931: ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೆಚ್‌ಎಸ್‌ಆರ್‌ಎ ಸಂಘಟನೆಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್ ದೇವ್ ಹಾಗೂ ರಾಜ್ ಗುರು ಅವರನ್ನು ಪೊಲೀಸ್ ಅಧಿಕಾರಿ ಸಾಂಡರ್ಸ್ ಕೊಲೆ ಪ್ರಕರಣದ ಆರೋಪದ ಮೇಲೆ ಮಾ.23, 1931ರಂದು ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಗಲ್ಲುಶಿಕ್ಷೆಗೆ ಗುರಿ ಮಾಡಲಾಗಿತ್ತು. ಪ್ರಖರ ಸಮಾಜವಾದಿಯಾಗಿದ್ದ ಭಗತ್ ಸಿಂಗ್ ಹಾಗೂ ಆತನ ಸಂಗಾತಿಗಳು, ತಮ್ಮ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳದೇ, ದೇಶದ ಸ್ವಾತಂತ್ರ್ಯಕ್ಕಾಗಿ ನಗುತ್ತಲೇ ನೇಣುಗಂಬವೇರಿದ್ದು ಭಾರತದ ಇತಿಹಾಸದ ಅಚ್ಚಳಿಯದ ಪುಟಗಳಲ್ಲಿ ಒಂದು. ದೇಶ ಸ್ವಾತಂತ್ರ್ಯಗೊಂಡ ಮೇಲೆ ಪ್ರತಿ ವರ್ಷ ಮಾ.23ರನ್ನು ಬಲಿದಾನ್ ದಿವಸ್‌ನ್ನಾಗಿ ಆಚರಿಸಿಕೊಂಡು ಬರುತ್ತಿರುವುದು ವಿಶೇಷ.


from India & World News in Kannada | VK Polls https://ift.tt/2wuezpR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...