ಕೆನಡಾ ಬೆನ್ನಲ್ಲೇ ಟೋಕಿಯೊ ಒಲಿಂಪಿಕ್ಸ್‌ಗೆ 'ನೊ' ಎಂದ ಆಸ್ಟ್ರೇಲಿಯಾ

ಹೊಸದಿಲ್ಲಿ: ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಕೆನಡಾ ತೀರ್ಮಾನ ಘೋಷಿಸಿದ ಬೆನ್ನಲ್ಲೇ ಆಸ್ಟ್ರೇಲಿಯನ್ ಒಲಿಂಪಿಕ್ ಸಮಿತಿ (ಎಒಸಿ) ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಅಲ್ಲದೆ ಕ್ರೀಡಾಪಟುಗಳು 2021ಕ್ಕೆ ಮುಂದೂಡಲಾಗುವ ಗೇಮ್ಸ್‌ಗೆ (ಸದ್ಯ ಮುಂದೂಡಲಾಗಿಲ್ಲ) ಸಿದ್ಧತೆಯನ್ನು ನಡೆಸಲಿದ್ದಾರೆ ಎಂದಿದ್ದಾರೆ. ಜಪಾನ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಬೇಕೇ ಅಥವಾ ರದ್ದುಗೊಳಿಸಬೇಕೇ ಎಂಬುದರ ಕುರಿತಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ) ಇನ್ನಷ್ಟೇ ಅಂತಿಮ ನಿರ್ಧಾರ ಪ್ರಕಟಿಸಬೇಕಿದೆ. ಈ ನಡುವೆ ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಪರಿಸ್ಥಿತಿ ಹದೆಗೆಟ್ಟಿರುವ ಹಿನ್ನೆಲೆಯಲ್ಲಿ ಐಒಸಿಯ ಯಾವುದೇ ಸಲಹೆಗಳಿಗೆ ಕಾಯದೇ ಆಸ್ಟ್ರೇಲಿಯನ್ ಒಲಿಂಪಿಕ್ ಸಮಿತಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ ಎಂಬುದನ್ನು ಕಾರ್ಯ ನಿರ್ವಾಹಕ ಮ್ಯಾಟ್ ಕ್ಯಾರೊಲ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಟೋಕಿಯೊ 2020 ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಈ ಮೊದಲು ಕಳೆದ ವಾರದ ವರೆಗೂ ಒಲಿಂಪಿಕ್ ಆಯೋಜಿಸಲು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ ಎಂದು ಹೇಳಿರುವ ಜಪಾನ್ ಪ್ರಧಾನಿ ಶಿನ್ಜೊ ಅಬೆ, ಕೊನೆಗೂ ತಮ್ಮ ನಿಲುವುಗಳನ್ನು ಸಡಿಲಗೊಳಿಸಿ, ಒಲಿಂಪಿಕ್ ಮುಂದೂಡುವ ಸಾಧ್ಯತೆ ಬಗ್ಗೆ ಸೂಚನೆ ನೀಡಿದ್ದರು. ಕೋವಿಡ್ 19 ಸೋಂಕು ಪ್ರಕರಣವನ್ನು ಗಂಭೀರವಾಗಿ ಪರಿಣಮಿಸಿರುವ ಎಒಸಿ, ಕ್ರೀಡಾಪಟುಗಳು ಹಾಗೂ ಕ್ರೀಡೆಯ ಹಿತಾಸಕ್ತಿಗಾಗಿ ಉಚಿತವಾದ ನಿರ್ಧಾರವನ್ನು ಕೈಗೊಂಡಿದೆ. ಹಾಗೆಯೇ ಕ್ರೀಡಾಕೂಟ 2021ಕ್ಕೆ ಮುಂದೂಡುವ ಬಗ್ಗೆ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದು, 2021ರ ಟೋಕಿಯೊ ಒಲಿಂಪಿಕ್‌ಗೆ ಕ್ರೀಡಾಪಟುಗಳು ತಯಾರಿ ನಡೆಸಲಿದ್ದಾರೆ ಎಂದಿದ್ದಾರೆ. ಅದೇ ಹೊತ್ತಿಗೆ ಈ ಹಂತದಲ್ಲಿ ಅಥ್ಲೀಟ್‌ಗಳು ತಮ್ಮ ಸೇರಿದಂತೆ ತಮ್ಮ ಸುತ್ತು ಮುತ್ತಲಿನವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ ಎಂದು ಕ್ಯಾರೊಲ್ ತಿಳಿಸಿದರು. ಜಪಾನ್ ಒಲಿಂಪಿಕ್ಸ್ ಆಯೋಜನೆಗೆ ಕಳೆದ 48 ತಾಸುಗಳಲ್ಲಿ ವಿರೋಧ ವ್ಯಾಪಕವಾಗಿದೆ ಹೆಚ್ಚಿದೆ. ಅಮೆರಿಕ ಟ್ರ್ಯಾಕ್, ಫೀಲ್ಡ್, ಯುಕೆ ಅಥ್ಲೀಟ್ಸ್ ಸೇರಿದಂತೆ ಅನೇಕ ದೇಶಗಳ ಒಲಿಂಪಿಕ್ ಸಮಿತಿಗಳು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಮುಂದೂಡುವಂತೆ ಬಲವಾದ ಬೇಡಿಕೆ ಮುಂದಿರಿಸಿದೆ. ಈ ಮಧ್ಯೆ ಭಾರತೀಯ ಒಲಿಂಪಿಕ್ ಸಂಸ್ಥೆಯು (ಐಒಸಿ) ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಅಲ್ಲದೆ ಮುಂದಿನ ಒಂದು ತಿಂಗಳುಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು ಎಂದಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2wlncDh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...