ನವದೆಹಲಿ: ಗಲ್ಲುಶಿಕ್ಷೆಯಿಂದ ಪಾರಾಗುವ ನಿರ್ಭಾಯಾ ಹಂತಕ ಪ್ರಯತ್ನಕ್ಕೆ ಇದೀ ಅವರ ಕುಟುಂಬಸ್ಥರೂ ಸಾಥ್ ನೀಡಲು ಆರಂಭಿಸಿದ್ದಾರೆ. ತಮ್ಮ ಎಲ್ಲಾ ಕಾನೂನು ಅವಕಾಶಗಳು ಮುಗಿಯುತ್ತಿದ್ದಂತೇ, ತಮ್ಮ ಕುಟುಂಬಸ್ಥರ ನೆರವು ಪಡೆಯುವ ನಿರ್ಲಜ್ಜ್ಯ ಕೃತ್ಯಕ್ಕೆ ಹಂತಕರು ಕೈ ಹಾಕಿದ್ದಾರೆ. ಜೀವಮಾನವೀಡಿ ವಿಧವೆಯಾಗಿ ಬದುಕಲು ನನಗೆ ಇಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ಪತಿಯನ್ನು ಗಲ್ಲುಶಿಕ್ಷೆಗೆ ಗುರಿಮಾಡುವ ಮೊದಲೇ ನನಗೆ ಕೊಡಿಸುವಂತೆ, ನಿರ್ಭಯಾ ಹಂತಕ ಅಕ್ಷಯ್ ಸಿಂಗ್ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ ಎಂದಿರುವ ಅಕ್ಷಯ್ ಪತ್ನಿ ಪುನಿತಾ, ಆದರೂ ಆತನನ್ನು ಗಲ್ಲಿಗೇರಿಸುವ ಮೊಲದು ನನಗೆ ಡಿವೋರ್ಸ್ ಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಧ ವ್ಯಕ್ತಿಯ ಪತ್ನಿ ವಿಚ್ಛೇದನ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದ್ದು, ಇದನ್ನೇ ಬಳಸಿಕೊಂಡು ಹಂತಕರು ಮತ್ತೆ ಗಲ್ಲುಶಿಕ್ಷೆಯನ್ನು ಮುಂದೂಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ವಿಚ್ಛೇದನಾ ಅರ್ಜಿಯ ವಿಚಾರಣೆ ನೆಪದಲ್ಲಿ ಗಲ್ಲುಶಿಕ್ಷೆಯನ್ನು ಮುಂದೂಡುವ ಪ್ರಯತ್ನ ಹಂತಕರದ್ದಾಗಿದ್ದು, ಇದಕ್ಕಾಗಿ ಕುಟುಂಬಸ್ಥರನ್ನು ಬಳಸಿಕೊಳ್ಳುತ್ತಿರುವುದು ಮಾತ್ರ ಅತ್ಯಂತ ಹೇಯ.
from India & World News in Kannada | VK Polls https://ift.tt/2Ud6VrT