ಕೊರೊನಾ ವೈರಸ್‌ ಹಿನ್ನೆಲೆ ಭಾರತದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹೇರಲಿದ್ದಾರಾ ಮೋದಿ?

ಹಕ್ಕು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು 360 ನೇ ವಿಧಿ - ಆರ್ಥಿಕ ತುರ್ತುಸ್ಥಿತಿ ಅಡಿಯಲ್ಲಿ ಘೋಷಿಸುವ ಸಾಧ್ಯತೆಯಿದೆ ಎಂದು inventiva.co.in ಎಂಬ ವೆಬ್‌ಸೈಟ್‌ನಲ್ಲಿ ಸುದ್ದಿ ಪ್ರಕಟವಾಗಿದೆ. ಈ ಲೇಖನವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಮಾರ್ಚ್ 23, 2020 ರಂದು ಪ್ರಕಟವಾದ ಲೇಖನದ ಶೀರ್ಷಿಕೆ 'ನರೇಂದ್ರ ಮೋದಿ ಅವರು ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು 360 ನೇ ವಿಧಿ ಅಡಿಯಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಲೇಖನ ಪ್ರಕಟವಾಗಿತ್ತು. ಆರ್ಟಿಕಲ್ 360 ಎಂದರೇನು ಎಂಬುದನ್ನು ವಿವರಿಸುವ ಮೂಲಕ ಪ್ರಾರಂಭವಾಗುವ ಲೇಖನವು, "ಆರ್ಥಿಕತೆಯನ್ನು ನಿಯಂತ್ರಿಸಲು ಬೇರೆ ಯಾವುದೇ ಕ್ರಮಗಳು ಸಹಾಯವಾಗದಿದ್ದರೆ, ನರೇಂದ್ರ ಮೋದಿಯವರಿಗೆ ಭಾರತದಲ್ಲಿ ಆರ್ಥಿಕ ತುರ್ತುಸ್ಥಿತಿಯನ್ನು ವಿಧಿ 360 ರ ಅಡಿಯಲ್ಲಿ ಹೇರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಮತ್ತು ಇದರಿಂದ ದೇಶವು ಈ ಹಿಂದೆಗಿಂತ ಆರ್ಥಿಕತೆಯಲ್ಲಿ ಕೆಟ್ಟ ಮತ್ತು ಭೀಕರವಾಗಲಿದೆ" ಎಂದಿದೆ. ನಂತರ, ಮಾರ್ಚ್ 24ರಂದು ಕೋವಿಡ್ -19 ರ ಭೀತಿಗೆ ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ ಬಳಿಕ ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಹಂಚಿಕೊಳ್ಳಲಾಗುತ್ತಿದೆ. ಸತ್ಯ ಇಲ್ಲ, ಪ್ರಧಾನಿ ಮೋದಿ ಅವರು ಆರ್ಟಿಕಲ್ 360 ರ ಅಡಿಯಲ್ಲಿ ಭಾರತದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸುವುದಿಲ್ಲ. ಪ್ರಧಾನಿ ಮೋದಿ ಭಾಷಣಕ್ಕೂ ಮುನ್ನವೇ ಟೈಮ್ಸ್ ಫ್ಯಾಕ್ಟ್ ಚೆಕ್ ಉನ್ನತ ಸರಕಾರಿ ಮೂಲಗಳನ್ನು ಸಂಪರ್ಕಿಸಿದ್ದು, ಅವರು ಲೇಖನದಲ್ಲಿ ಮಾಡಿದ ಹಕ್ಕನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಮತ್ತು ಅದನ್ನು 'ನಕಲಿ' ಎಂದು ಕರೆದರು.


from India & World News in Kannada | VK Polls https://ift.tt/2QLnolU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...