ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಾಯ್ತು, ಇನ್ನು ಮೃತದೇಹಗಳ ಅಂತ್ಯಸಂಸ್ಕಾರ ಹೇಗೆ?

ಎಲ್ಲ ನಾಲ್ವರು ಅತ್ಯಾಚಾರಿಗಳನ್ನು ಶುಕ್ರವಾರ ಬೆಳಗ್ಗೆ ಸುಮಾರು 5.30ಕ್ಕೆ ಏಕಕಾಲಕ್ಕೆ ತಿಹಾರ್‌ ಜೈಲಿನಲ್ಲಿ ಗಲ್ಲಿಗೆ ಏರಿಸಲಾಯಿತು. ದಿಲ್ಲಿ ಕಾರಾಗೃಹ ನಿಯಮ 2018ರ ಅನುಸಾರ ಜಾರಿಗೊಳಿಸುವ ಮುನ್ನ ಹಲವು ಪ್ರಕ್ರಿಯೆಗಳನ್ನು ಜೈಲಿನ ಅಧಿಕಾರಿಗಳು ಪಾಲಿಸಬೇಕಾಗುತ್ತದೆ. ಉತ್ತರ ಪ್ರದೇಶದ ಮೀರತ್‌ನಿಂದ ಅನುಭವಿ ಹ್ಯಾಂಗ್‌ಮನ್‌ (ನೇಣಿಗೇರಿಸುವ ವ್ಯಕ್ತಿ) ಗಲ್ಲುಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಮೊದಲು ಅಣಕು ಪ್ರಕ್ರಿಯೆನೇಣಿಗೆ ಏರಿಸುವ ಮುನ್ನಾದಿನ ಗಲ್ಲು ಶಿಕ್ಷೆಯ ಅಣಕು ಪ್ರಕ್ರಿಯೆ(ಡಮ್ಮಿ) ಜಾರಿಗೊಳಿಸಲಾಗುತ್ತದೆ. ನೇಣಿಗೇರುವ ವ್ಯಕ್ತಿಯ ಒಂದೂವರೆಪಟ್ಟು ತೂಕದ ಉಸುಕಿನ ಚೀಲವನ್ನು ನೇಣಿಗಂಬಕ್ಕೆ ಏರಿಸಲಾಗುತ್ತದೆ. 1.830 ಮೀಟರ್‌ನಿಂದ 2.440 ಮೀಟರ್‌ ಆಳದಲ್ಲಿ ಚೀಲ ಬೀಳುವಂತೆ ನೋಡಿಕೊಳ್ಳಲಾಗುತ್ತದೆ. ಗಲ್ಲಿಗೇರಿಸುವ ಸಂದರ್ಭ ಯಾರೆಲ್ಲ ಇರಬಹುದು? ಅಪರಾಧಿಗಳನ್ನು ನೇಣಿಗೆ ಏರಿಸುವಾಗ ಜಿಲ್ಲಾ ಮ್ಯಾಜಿಸ್ಪ್ರೇಟ್‌ ಅಥವಾ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಪ್ರೇಟ್‌, ಕಾರಾಗೃಹ ಅಧೀಕ್ಷಕರು, ಉಪ ಅಧೀಕ್ಷಕರು, ಕಾರಾಗೃಹದ ವೈದ್ಯಾಧಿಕಾರಿ, ಉಸ್ತುವಾರಿ ವೈದ್ಯಾಧಿಕಾರಿ, ಕಡ್ಡಾಯವಾಗಿ ಹಾಜರಿರಬೇಕು. 10ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪೊಲೀಸ್‌ ಪೇದೆಗಳು ಅಥವಾ ಅಷ್ಟೇ ಸಂಖ್ಯೆಯ ಕಾರಾಗೃಹ ಸಶಸ್ತ್ರ ಪೇದೆಗಳು, ಮುಖ್ಯ ವಾರ್ಡನ್‌, ಜೈಲು ವಾರ್ಡನ್‌ಗಳು, ಇಬ್ಬರು ಮುಖ್ಯ ಪೇದೆಗಳು ಹಾಜರಿರಬೇಕು. ಕುಟುಂಬ ಸದಸ್ಯರು ಹಾಜರಿರಬಹುದೆ? ಇಲ್ಲ. ಅಪರಾಧಿಗಳನ್ನು ನೇಣಿಗೆ ಏರಿಸುವಾಗ ಕುಟುಂಬ ಸದಸ್ಯರು ಹಾಜರಿರಲು ಅವಕಾಶವಿಲ್ಲ. ಅಷ್ಟೇ ಅಲ್ಲದೆ ಗಲ್ಲುಶಿಕ್ಷೆ ಜಾರಿ ವೇಳೆ ಇತರ ಕೈದಿಗಳು ಕೂಡ ಅವರ ಕೋಣೆಗಳಿಂದ ಹೊರಬರಲು ಅವಕಾಶವಿಲ್ಲ. ಮೃತದೇಹಗಳನ್ನು ಸಾಗಿಸಿದ ಬಳಿಕವಷ್ಟೇ ಇತರ ಕೈದಿಗಳನ್ನು ಸೆಲ್‌ಗಳಿಂದ ಹೊರಗೆ ಬಿಡಲಾಗುತ್ತದೆ. ಎರಡು ಹಗ್ಗ ಮೀಸಲು ಕಾರಾಗೃಹದ ವೈದ್ಯಾಧಿಕಾರಿಯು ಗಲ್ಲುಶಿಕ್ಷೆ ಜಾರಿಗೆ ನಾಲ್ಕು ದಿನ ಮೊದಲು ಅಪರಾಧಿಗಳ ಆರೋಗ್ಯ ತಪಾಸಣೆ ನಡೆಸಿ ವಿವರವಾದ ವರದಿ ಸಿದ್ಧಪಡಿಸಬೇಕು. ನೇಣಿಗೇರುವ ವ್ಯಕ್ತಿಯ ಉದ್ದ, ಎಷ್ಟು ಎತ್ತರದಿಂದ ಆತನನ್ನು ಗಲ್ಲಿಗೆ ಏರಿಸಬೇಕು ಎಂಬ ಕುರಿತಾಗಿಯೂ ವರದಿಯಲ್ಲಿಸ್ಪಷ್ಟವಾಗಿ ಉಲ್ಲೇಖಿಸಬೇಕು. ನೇಣಿಗೇರಿಸುವ ಮುನ್ನಾದಿನ ಕಾರಾಗೃಹ ಅಧೀಕ್ಷಕರು ಹಗ್ಗ, ನೇಣುಗಂಬ ಸುಸ್ಥಿತಿಯಲ್ಲಿವೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸಬೇಕು. ಪ್ರತಿ ಕೈದಿಗೆ ಎರಡು ಹಗ್ಗಗಳನ್ನು ಹೆಚ್ಚುವರಿಯಾಗಿ ಮೀಸಲಿಟ್ಟುಕೊಳ್ಳಬೇಕು. ಅವೆಲ್ಲವನ್ನೂ ಸ್ಟೀಲ್‌ ಟ್ರಂಕ್‌ನಲ್ಲಿಟ್ಟು, ಬೀಗ ಹಾಕಿ ಕಾರಾಗೃಹದ ಉಪ ಅಧೀಕ್ಷಕರ ಸುಪರ್ದಿಗೆ ಒಪ್ಪಿಸಬೇಕು. ಗಲ್ಲಿಗೇರಿಸುವ ದಿನದ ಪ್ರಕ್ರಿಯೆ ಹೇಗೆ? ಜಿಲ್ಲಾಮ್ಯಾಜಿಸ್ಪ್ರೇಟ್‌ ಅಥವಾ ಹೆಚ್ಚುವರಿ ಜಿಲ್ಲಾಮ್ಯಾಜಿಸ್ಪ್ರೇಟ್‌, ಕಾರಾಗೃಹ ಅಧೀಕ್ಷಕರು, ಉಪ ಅಧೀಕ್ಷಕರು, ಕಾರಾಗೃಹದ ವೈದ್ಯಾಧಿಕಾರಿ, ಉಸ್ತುವಾರಿ ವೈದ್ಯಾಧಿಕಾರಿಗಳು ಅಪರಾಧಿಯನ್ನು ಭೇಟಿ ಮಾಡುತ್ತಾರೆ. ಉಯಿಲು ಸೇರಿದಂತೆ ಯಾವುದಾದರೂ ದಾಖಲೆಗಳಿಗೆ ಅಪರಾಧಿ ಸಹಿ ಮಾಡುವುದಿದ್ದರೆ ಈ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಮಾಡಬೇಕು. ಅದನ್ನು ಮ್ಯಾಜಿಸ್ಪ್ರೇಟ್‌ ಅಥವಾ ಹೆಚ್ಚುವರಿ ಮ್ಯಾಜಿಸ್ಪ್ರೇಟ್‌ ದೃಢೀಕರಿಸುತ್ತಾರೆ. ಬಳಿಕ ಹತ್ತಿಯ ಟೊಪ್ಪಿಯಿಂದ ಅಪರಾಧಿಯ ಮುಖವನ್ನು ಮುಚ್ಚಿ ನೇಣುಗಂಬದ ಬಳಿ ಕರೆತರಲಾಗುತ್ತದೆ. ಹೀಗಾಗಿ ನೇಣಿಗೆ ಏರುವ ವ್ಯಕ್ತಿಗೆ ನೇಣುಗಂಬ ಹೇಗಿದೆ ಎಂಬುದನ್ನು ನೋಡಲು ಸಾಧ್ಯವಾಗುವುದಿಲ್ಲ. ವಾರ್ಡನ್‌ ಅಪರಾಧಿಯನ್ನು ಹಿಡಿದುಕೊಂಡಿರುತ್ತಾರೆ. ಅಧೀಕ್ಷಕರು ಸೂಚನೆ ನೀಡಿದ ತಕ್ಷಣ ಆತನನ್ನು ನೇಣುಗಂಬದ ಬಳಿ ಕರೆತರುತ್ತಾರೆ. ಹ್ಯಾಂಗ್‌ಮನ್‌ ನೇಣಿಗೇರಿಸುತ್ತಾರೆ. ಅಪರಾಧಿ ಬಯಸಿದಲ್ಲಿಆಯಾ ಧರ್ಮದ ಗುರುಗಳು ಆಗಮಿಸಿ ಪ್ರಾರ್ಥನೆ ಮಾಡಲು ಅವಕಾಶವಿದೆ. ಮೃತದೇಹದ ಅಂತ್ಯಸಂಸ್ಕಾರ ಹೇಗೆ? ನೇಣಿಗೇರಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗುತ್ತದೆ. ಆಂಬ್ಯುಲೆನ್ಸ್‌ ಮೂಲಕ ಮೃತದೇಹಗಳನ್ನು ಸಾಗಿಸಬೇಕು. ಅವರು ಅಂತ್ಯಸಂಸ್ಕಾರ ನಡೆಸಲು ಒಪ್ಪದಿದ್ದರೆ ಕಾರಾಗೃಹ ಅಧಿಕಾರಿಗಳೇ ಆಯಾ ಧರ್ಮದ ಅನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ.


from India & World News in Kannada | VK Polls https://ift.tt/2womjtl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...