ಕೊರೊನಾ ವಿರುದ್ಧ ದಿಟ್ಟ ಹೋರಾಟ: ಭಾರತಕ್ಕೆ ನೆರವು ಘೋಷಿಸಿದ ಚೀನಾ!

ಬಿಜಿಂಗ್: ಭಾರತದ ವಿರುದ್ಧ ಸದಾ ಕಾಲು ಕೆದರಿ ಜಗಳಕ್ಕೆ ಬರುವ ಚೀನಿ ಡ್ರ್ಯಾಗನ್ ಈ ಬಾರಿ ದೋಸ್ತಿಯ ಮಾತುಗಳನ್ನಾಡುತ್ತಿದೆ. ಕೊರೊನಾ ವೈರಸ್ ಎರಡೂ ದೇಶಗಳ ನಡುವೆ ಬಾಂಧವ್ಯ ಬೆಸೆಯುವ ಕೊಂಡಿಯಾಗಿ ಕೆಲಸ ಮಾಡುವ ಸಾಧ್ಯತೆ ದಟ್ಟವಾಗಿದೆ. ಕೊರೊನಾ ವೈರಸ್‌ನಿಂದ ಬಹುತೇಕ ಮುಕ್ತಿ ಪಡೆದಿರುವ , ಮಾರಕ ವೈರಾಣು ವಿರುದ್ಧ ಅತ್ಯಂತ ದಿಟ್ಟವಾಗಿ ಹೋರಾಡುತ್ತಿರುವ ಭಾರತಕ್ಕೆ ನೆರವು ನೀಡುವುದಾಗಿ ಘೋಷಿಸಿದೆ. ಹೌದು, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಈಗಾಗಲೇ ಇಟಲಿಗೆ ಸಾಥ್ ನೀಡಿರುವ ಚೀನಾ, ಇದೀಗ ಭಾರತಕ್ಕೂ ನೆರವು ನೀಡುವುದಾಗಿ ಘೋಷಿಸುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಕೊರೊನಾ ವೈರಸ್‌ನ್ನು ಈ ಜಗತ್ತಿನಿಂದಲೇ ನಿರ್ನಾಮ ಮಾಡಲು ಭಾರತದ ಪ್ರಯತ್ನ ಅತ್ಯಂತ ಶ್ಲಾಘನೀಯ ಎಂದಿರುವ ಚೀನಾ, ಭಾರತದ ಈ ಸಹಾಯಕ್ಕೆ ಧನ್ಯವಾದ ಅರ್ಪಿಸುವುದಾಗಿ ಹೇಳಿದೆ. ಈ ಕುರಿತು ಮಾತನಾಡಿರುವ ಭಾರತಕ್ಕೆ ಚೀನಾ ರಾಯಭಾರಿ ಕಚೇರಿಯ ಕಾನ್ಸುಲರ್ ಜಿ ರೋಂಗ್, ಚೀನಾ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡಲು ಬಯಸಿದೆ ಎಂದು ಹೇಳಿದ್ದಾರೆ. ಚೀನಾದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಾಗ ವುಹಾನ್ ಪ್ರಾಂತ್ಯಕ್ಕೆ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿ ನೆರವು ನೀಡಿತ್ತು. ಇದೀಗ ಭಾರತಕ್ಕೆ ನೆರವು ನೀಡುವ ಅವಕಾಶ ಚೀನಾಗೆ ಒದಗಿ ಬಂದಿದ್ದು, ಜಂಟಿಯಾಗಿ ಯುದ್ಧವನ್ನು ಗೆಲ್ಲೋಣ ಎಂದು ಜಿ ರೋಂಗ್ ಹೇಳಿದ್ದಾರೆ. ಭಾರತ ಖಂಡಿತವಾಗಿಯೂ ಕೊರೊನಾ ವೈರ್ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಲಿದ್ದು, ಇದಕ್ಕಾಗಿ ಎಲ್ಲಾ ಅಗತ್ಯ ನೆರವು ನೀಡುವುದಾಗಿ ಚೀನಾ ಘೋಷಿಸಿರುವುದು ಸಕಾರಾತ್ಮಕ ಬೆಳವಣಿಗೆ ಎನ್ನಬಹುದಾಗಿದೆ.


from India & World News in Kannada | VK Polls https://ift.tt/2xsVPr6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...