ಜನಪ್ರಿಯ ಭಾರತೀಯ ಶೆಫ್ ಫ್ಲಾಯ್ಡ್ ಕಾರ್ಡೋಜ್ ರನ್ನು ಬಲಿ ಪಡೆದ ಕೊರೊನಾ!

ನ್ಯೂಜೆರ್ಸಿ: ಮುಂಬೈನ ಜನಪ್ರಿಯ ಮತ್ತು ಓ ಪೆಡ್ರೊ ಹೋಟೆಲ್ ಮಾಲಕ ಹಾಗೂ ವಿಶ್ವವಿಖ್ಯಾತ ಭಾರತೀಯ ಶೆಫ್ ಅವರನ್ನು ಸೋಂಕು ಬಲಿ ಪಡೆದಿದೆ. ಮಾರ್ಚ್ 8 ವರೆಗೂ ಮುಂಬೈನಲ್ಲಿದ್ದ ಅವರು ಬಳಿ ಅಮೆರಿಕಕ್ಕೆ ತೆಳಿದ್ದರು. ಮಾರ್ಚ್ 18ರಂದು ಜ್ವರದಿಂದ ನ್ಯೂ ಜೆರ್ಸಿ ನಗರದಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. ರೆಸ್ಟೋರೆಂಟ್ ಬಿಸಿನೆಸ್ ನಡೆಸುವ, ಹಂಗರ್ ಇಂಕ್ ಕಂಪನಿ ತನ್ನ ಪ್ರಕಟಣೆಯಲ್ಲಿ ಹಂಗರ್ ಇನ್‌ಕಾರ್ಪೊರೇಷನ್ ಹಾಸ್ಪಿಟಾಲಿಟಿಯ ಶೆಫ್ ಫ್ಲಾಯ್ಡ್ ಕಾರ್ಡೋಜ್ ಅಮೆರಿಕದ ನ್ಯೂಜೆರ್ಸಿಯಲ್ಲಿ ಮಾ. 25ರಂದು ಕೊನೆಯುಸಿರೆಳೆದಿದ್ದಾರೆ ಎಂದು ತೀವ್ರ ವಿಷಾದದಿಂದ ಪ್ರಕಟಿಸುತ್ತಿದ್ದೇವೆ. ಅವರು ತಾಯಿ ಬ್ರೆಯಿಲ್, ಪತ್ನಿ ಬರ್ಖಾ, ಮಕ್ಕಳಾದ ಜಸ್ಟಿನ್ ಹಾಗೂ ಪೀಟರ್ ಅವರನ್ನು ಅಗಲಿದ್ದಾರೆ. ಮಾ.18ರಂದು ಅವರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ನ್ಯೂಜೆರ್ಸಿಯ ಮೌಂಟ್‌ಸೈಡ್ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮಾಹಿತಿ ನೀಡಿದೆ. ಬಾಂಬೆಯಲ್ಲಿ ಹುಟ್ಟಿ ಬೆಳೆದಿದ್ದ ಟಾಪ್ ಚೆಫ್ ಮಾಸ್ಟರ್ಸ್ ವಿಜೇತ ಫ್ಲಾಯ್ಡ್ ಕಾರ್ಡೋಜ್ ಅಮೆರಿಕದಲ್ಲಿ ನೆಲೆಸಿದ್ದರು ಅವರಿಗೆ 59 ವರ್ಷ ವಯಸ್ಸಾಗಿತ್ತು. ದಿ ಬಾಂಬೆ ಕ್ಯಾಂಟೀನ್ ಹಾಗೂ ಓ ಪೆಡ್ರೊ ಹೋಟೆಲ್ ನಡೆಸುತ್ತಿದ್ದ ಕಾರ್ಡೋಜಾ ಇತ್ತೀಚೆಗೆ ತಮ್ಮ ಮೂರನೇ ಉದ್ಯಮ ಬಾಂಬೆ ಸ್ವೀಟ್ ಶಾಪ್ ಆರಂಭಿಸಿದ್ದರು.


from India & World News in Kannada | VK Polls https://ift.tt/2UIAlyq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...