'ಬಾಲ ರಾಮ'ನಿಗಿಲ್ಲ ಕೊರೊನಾ ಭೀತಿ..! 'ರಾಮ್‌ಲಲ್ಲಾ' ವಿಗ್ರಹ ಸ್ಥಳಾಂತರ ಮಾಡಿದ ಯೋಗಿ

ಅಯೋಧ್ಯೆ (ಉತ್ತರ ಪ್ರದೇಶ): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರಥ್ಯದಲ್ಲಿ ಬುಧವಾರ ಬೆಳಗಿನ ಜಾವ ವಿಗ್ರಹವನ್ನು ಸ್ಥಳಾಂತರ ಮಾಡಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವ ಕಾರಣ, ದೇಗುಲದ ಸಮೀಪದಲ್ಲೇ ಇರುವ ಮಾನಸ ಭವನಕ್ಕೆ ರಾಮ್‌ಲಲ್ಲಾ ವಿಗ್ರಹವನ್ನು ಸ್ಥಳಾಂತರ ಮಾಡಲಾಗಿದೆ. ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೂ ರಾಮ್‌ಲಲ್ಲಾ ಮಾನಸ ಭವನದಲ್ಲೇ ಇರಲಿದೆ. ಬಾಲ ರಾಮನ ವಿಗ್ರಹ ಇದಾಗಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಾವೇ ಖುದ್ದಾಗಿ ವಿಗ್ರಹವನ್ನು ಸ್ಥಳಾಂತರ ಮಾಡಿದರು. ಮಾನಸ ಭವನದಲ್ಲಿ ರಾಮ್‌ಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ತಾತ್ಕಾಲಿಕ ಸ್ಥಳಾವಕಾಶ ವ್ಯವಸ್ಥೆ ಮಾಡಲಾಗಿದೆ. ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ, ಮಂದಿರದಲ್ಲಿ ಬಾಲ ರಾಮನ ವಿಗ್ರಹದ ಶಾಶ್ವತ ಪೂರ್ಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಬಾಲ ರಾಮನ ವಿಗ್ರಹವನ್ನು ಮಾನಸ ಭವನಕ್ಕೆ ಸ್ಥಳಾಂತರ ಮಾಡಿದ ಬಳಿಕ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಮಮಂದಿರ ನಿರ್ಮಾಣಕ್ಕಾಗಿ 11 ಲಕ್ಷ ರೂ. ಚೆಕ್ ಕೂಡಾ ನೀಡಿದರು. ಏಪ್ರಿಲ್ 2 ರಂದು ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನೆರವೇರಿಸೋದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಈ ಹಿಂದೆ ತಿಳಿಸಿತ್ತು. ಏಕೆಂದರೆ ಅಂದೇ ರಾಮನವಮಿ ಕೂಡಾ ಇರೋದ್ರಿಂದ ಸೂಕ್ತ ದಿನ ಎಂದು ನಿರ್ಧರಿಸಿತ್ತು. ಆದ್ರೆ, ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನೀಲನಕ್ಷೆ ಸಿದ್ಧಪಡಿಸುತ್ತಿರುವ ಎಂಜಿನಿಯರ್‌ಗಳು, ಮಾರ್ಚ್ 25ರ ಬಳಿಕವೇ ತಮ್ಮ ವರದಿ ನೀಡುವ ನಿರೀಕ್ಷೆ ಇದೆ. ಇದೀಗ ಮಾನಸ ಭವನಕ್ಕೆ ರಾಮ್‌ಲಲ್ಲಾ ವಿಗ್ರಹ ಸ್ಥಳಾಂತರವಾಗಿದೆ ಭಕ್ತರು 26 ಅಡಿ ದೂರದಿಂದ ವಿಗ್ರಹವನ್ನು ವೀಕ್ಷಿಸಬಹುದಾಗಿದೆ. ಹೊಸ ಸ್ಥಳದಲ್ಲಿ ಬುಲೆಟ್‌ ಪ್ರೂಫ್‌ ರಕ್ಷಣೆ ಕೂಡಾ ಇರಲಿದೆ ಎಂದು ಹೇಳಲಾಗಿದೆ. ದೇಶಾದ್ಯಂತ ಕೊರೊನಾ ವೈರಸ್ ಅಬ್ಬರ ಇರುವ ನಡುವಲ್ಲೂ ರಾಮಮಂದಿರ ನಿರ್ಮಾಣ ಕಾರ್ಯ ಯಾವುದೇ ಸಮಸ್ಯೆ ಇಲ್ಲದೆ ನೆರವೇರುತ್ತಿದೆ.


from India & World News in Kannada | VK Polls https://ift.tt/2QMM0Lo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...