ಯಾರ್ಕ್‌ಶೈರ್: ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಅವರ ತಾಯಿ ಅವರು ಯಾರ್ಕ್‌ಶೈರ್ ಕ್ಲಬ್‌ನ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಚುನಾಯಿತರಾಗಿದ್ದಾರೆ. ಯಾರ್ಕ್‌ಶೈರ್ ಆಡಳಿತದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಸಿದ್ದ ಜನೆತ್ ಬೈರ್‌ಸ್ಟೋವ್ ಅವರು ಶನಿವಾರ ನಡೆದ ಕೌಂಟಿ ಕ್ಲಬ್‌ಗಳ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜನೆತ್ ಬೈರ್‌ಸ್ಟೋವ್ ಅವರನ್ನು ಉಪಾಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ. ಇವರ ಜತೆಗೆ ಮೈಕ್ ಕೊವನ್ ಅವರನ್ನೂ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. "ಜಾನಿ ಬೈರ್‌ಸ್ಟೋವ್ ಅವರ ತಂದೆ ದಿವಂಗತ ಡೇವಿಡ್ ಬೈರ್‌ಸ್ಟೋವ್ ಅವರು ಕೂಡ ಯಾರ್ಕ್‌ಶೈರ್ ಪರ ಕ್ರಿಕೆಟ್ ಆಡಿದ್ದರು. 13 ವರ್ಷಗಳ ಕಾಲ ಜನೆತ್ ಬೈರ್‌ಸ್ಟೋವ್ ಅವರು ಕ್ಲಬ್‌ನಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.'' ಎಂದು ಯಾರ್ಕ್‌ಶೈರ್ ಕೌಂಟಿ ಕ್ಲಬ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಶನಿವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸದಸ್ಯರ ಸಮಿತಿಗೆ ಚಾರ್ಲೊಟ್ ಎವರ್ಸ್ ಮತ್ತೊಮ್ಮೆ ಆಯ್ಕೆಯಾದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಅರ್ಥರ್ ಹಾಗೂ ಕಥೆರಿನ್ ಮ್ಯಾಥ್ಯೂ ಮಂಡಳಿಗೆ ಆಯ್ಕೆಯಾದರು. 2019ನೇ ವರ್ಷದ ಯಶಸ್ವಿಯಾಗಿ ಕ್ಲಬ್ ಅನ್ನು ಮುನ್ನಡೆಸಿದ್ದ ಮಾಜಿ ಆಫ್ ಸ್ಪಿನ್ನರ್ ಗಿಯಾಫ್ ಕೋಪ್ 2020ನೇ ವರ್ಷಕ್ಕೂ ಅಧ್ಯಕ್ಷರಾಗಿ ಮರು ನೇಮಕವಾದರು. ಇದೇ ವೇಳೆ ಮುಖ್ಯಸ್ಥ ರಾಬಿನ್ ಸ್ಮಿತ್ ಅವರು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಅಕಾಡೆಮಿ ಬಿಡುಗಡೆಗೊಳಿಸಿದ ಕೋವಿಡ್-19 ಸೋಂಕಿನ ಪರಿಸ್ಥಿತಿಯನ್ನು ಸಭೆಯ ಮುಂದಿಟ್ಟಿದ್ದರು. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ಮೇ.28ರವರೆಗೆ ವೃತ್ತಿಪರ ಎಲ್ಲ ಕ್ರಿಕೆಟ್ ಸ್ಪರ್ಧೆಗಳನ್ನು ಅಮಾನತುಗೊಳಿಸಲಾಗಿದೆ. ಇದಕ್ಕೂ ಮುನ್ನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲು ಶ್ರೀಲಂಕಾಗೆ ಪ್ರವಾಸ ಮಾಡಿದ್ದ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡ ಅಭ್ಯಾಸ ಪಂದ್ಯ ಆಡುತ್ತಿದ್ದಂತೆಯೇ ತವರಿಗೆ ಮರಳಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QB3tpU