ಮಹಿಳಾ ಕ್ರಿಕೆಟರ್‌ಗಳ ಬಳಿ ಮುಖ್ಯ ಕೋಚ್‌ ಅಸಭ್ಯ ವರ್ತನೆ !

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಬ್ಯಾಟ್ಸ್‌ಮನ್‌ ಹಾಗೂ ಪ್ರಸ್ತುತ ಬರೋಡಾ ಮಹಿಳಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಅತುಲ್‌ ಬೆಡಾದೆ ಅವರು ವಿವಾದವೊಂದಕ್ಕೆ ಸಿಲುಕಿದ್ದಾರೆ. ಆಟಗಾರ್ತಿಯರ ಮೇಲೆ ಹಾಗೂ ಸಾರ್ವಜನಿಕವಾಗಿ ನಿಂಧಿಸಿದ ಆರೋಪದ ಮೇರೆಗೆ ಅವರನ್ನು ಮುಖ್ಯ ಕೋಚ್‌ ಸ್ಥಾನದಿಂದ ವಜಾಗೊಳಿಸಲಾಗಿದೆ. ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿ ಹಿರಿಯ ಏಕದಿನ ಟೂರ್ನಿಯ ವೇಳೆ ಮುಖ್ಯ ಕೋಚ್‌ ಅತುಲ್‌ ಬೆಡಾದ ಅವರು ನಮ್ಮ ಬಳಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹಿರಿಯ ಆಟಗಾರ್ತಿಯರು ಬರೋಡಾ ಕ್ರಿಕೆಟ್‌ ಅಸೋಸಿಯಷನ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಡಳಿಯು ತನಿಖೆಯನ್ನು ಆರಂಭಿಸಿದ್ದು, ಅತುಲ್‌ ಬೆಡಾದೆ ಅವರನ್ನು ಮುಖ್ಯ ಕೋಚ್‌ ಹುದ್ದೆಯಿಂದ ಕೆಳಗಿಳಿಸಿದೆ. "ಲೈಂಗಿಕ ಕಿರುಕುಳ ಹಾಗೂ ಸಾರ್ವಜನಿಕ ನಿಂಧನೆ ಆರೋಪ ಪ್ರಕರಣ ತನಿಖೆಯನ್ನು ಬಿಸಿಎ ತಟಸ್ಥ ಸದಸ್ಯರಿಂದ ನಡೆಸಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಅತುಲ್‌ ಬೆಡಾದೆ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸಲಾಗಿದೆ,'' ಎಂದು ಬಿಸಿಎ ಕಾರ್ಯದರ್ಶಿ ಅಜಿತ್‌ ಲೆಲೆ ಪಿಟಿಐಗೆ ತಿಳಿಸಿದ್ದಾರೆ. ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಪ್ರಕಾರ, "ಬೆಡಾಡೆ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಬಿಸಿಎಯ ಉನ್ನತ ತನಿಖಾ ಸಮಿತಿಯನ್ನು ರಚಿಸಲಾಗಿದೆ," ಎಂದು ಅಜಿತ್ ಲೆಲೆ ದೃಢಪಡಿಸಿದ್ದಾರೆ. ಕೋವಿಡ್-19 (ಮಾರಕ ಕೊರೊನಾ ವೈರಸ್‌) ಸಾಂಕ್ರಾಮಿಕವು ಜಾಗತಿಕವಾಗಿ ಕ್ರಿಕೆಟ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದರ ನಡುವೆ ತನಿಖಾ ಸಮಿತಿ ಯಾವಾಗ ರಚನೆಯಾಗುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ. ಅತುಲ್‌ ಬೆಡಾದೆ ಅವರು 1994ರಲ್ಲಿ ಭಾರತದ ಪರ 13 ಏಕದಿನ ಪಂದ್ಯಗಳಿಂದ 158 ಗಳಿಸಿದ್ದಾರೆ. ಬರೋಡಾ ಪುರುಷರ ತಂಡಕ್ಕೂ ಅತುಲ್‌ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ವರ್ಷ ಇವರು ಮಹಿಳಾ ತಂಡದ ಮುಖ್ಯ ಕೋಚ್‌ ಆಗಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2J6AOEZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...