ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 20,000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಭಾರತ ಸೇರಿ ಒಟ್ಟು 195ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಭಾರತದಲ್ಲಿ 720ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ 50 ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಲೈವ್ ಮಾಹಿತಿ ವಿವರಣೆ ಇಲ್ಲಿದೆ. ಮಾರ್ಚ್ 27ರ ರಾಜ್ಯದ ಕ್ಷಣ ಕ್ಷಣದ ಮಾಹಿತಿ:- ಕರ್ನಾಟಕ-55(2 ಬಲಿ), ದೇಶ-722 ಸೋಂಕಿತ ಪ್ರಕರಣಗಳು. ಒಟ್ಟು 16 ಮಂದಿ ಬಲಿ. -ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್‌ಡೌನ್, ಕರ್ಫ್ಯೂ ಮತ್ತಷ್ಟು ಬಿಗಿ. ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಸೂಚನೆ.
-ಸದ್ಯ ರಾಜ್ಯದಲ್ಲಿ 50 ಪ್ರಕರಣಗಳು ಚಾಲ್ತಿಯಲ್ಲಿದೆ. -ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಇದರಲ್ಲಿ 3 ಮಂದಿ ಗುಣಮುಖರಾಗಿದ್ದಾರೆ. 2 ಜೀವಗಳನ್ನು ಕೊರೊನಾ ಬಲಿ ಪಡೆದಿದೆ.
from India & World News in Kannada | VK Polls https://ift.tt/3bzRWPT