ಹೊಸದಿಲ್ಲಿ: ಮಣಿಸಲು ದೇಶಾದ್ಯಂತ 21 ದಿನ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಬದುಕು ದೂಡುವುದೇ ಸವಾಲಿನ ಕೆಲಸವಾಗಿದೆ. ಋುಣಾತ್ಮಕ ಪರಿಣಾಮ ಎದುರಿಸುತ್ತಿರುವ ಮಧ್ಯಮ ಮತ್ತು ದುರ್ಬಲ ವರ್ಗದ ಹಿತಕಾಯುವ ದೃಷ್ಟಿಯಿಂದ ಕೇಂದ್ರ ಸರಕಾರ 1.75 ಲಕ್ಷ ಕೋಟಿ ರೂ. ನೆರವಿನ ಪ್ಯಾಕೇಜ್‌ಅನ್ನು ಗುರುವಾರ ಘೋಷಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ ಜನಸಾಮಾನ್ಯರಲ್ಲಿ ವಿಶ್ವಾಸ ತುಂಬುವ ಹಲವು ಪರಿಹಾರಾತ್ಮಕ ಕ್ರಮಗಳನ್ನು ಪ್ರಕಟಿಸಿದರು. ಈ ಮಧ್ಯೆ ಕೇಂದ್ರ ಸರಕಾರ ವೈದ್ಯರ ಚೀಟಿ ಇಲ್ಲದೇ ಪಡೆಯಲಾಗದ ಷೆಡ್ಯೂಲ್ಡ್ ಎಚ್ ಅಡಿ ಬರುವ ಔಷಧಗಳ ಹೋಮ್ ಡೆಲಿವರಿಗೂ ಅನುಮತಿ ನೀಡಿದೆ. ಸಂಕಷ್ಟದ ಸಮಯದಲ್ಲಿ 12 ಸೂತ್ರಗಳ ಸಮಾಧಾನ 1. ವೈದ್ಯರು, ದಾದಿಯರು, ನೈರ್ಮಲ್ಯ ಕಾರ್ಮಿಕರು, ಆಶಾ ಕಾರ್ಮಿಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ತಲಾ 50 ಲಕ್ಷ ರೂ. ವೈದ್ಯಕೀಯ ವಿಮೆ 2. ಬಡವರಿಗೆ ಮುಂದಿನ 3 ತಿಂಗಳು ಪಡಿತರ ಯೋಜನೆಯಡಿ ಈಗ ನೀಡುತ್ತಿರುವುದಕ್ಕೆ ಹೆಚ್ಚುವರಿಯಾಗಿ ಪ್ರತಿ ತಿಂಗಳಿಗೆ 5 ಕೆಜಿ (ಅಕ್ಕಿ / ಗೋಧಿ) ಉಚಿತ ವಿತರಣೆ. ಪ್ರತಿ ಮನೆಗೆ ಒಂದು ಕೆಜಿ ಬೇಳೆ. 3. ಪಿಎಂ ಕಿಸಾನ್ ಯೋಜನೆಯಡಿ 8.69 ಕೋಟಿ ರೈತರಿಗೆ ಏಪ್ರಿಲ್ ಮೊದಲ ವಾರದಲ್ಲಿ 2,000 ರೂ. ನಗದು. 4. ನರೇಗಾ ಕಾರ್ಮಿಕರ ವೇತನ 182 ರೂ.ಗಳಿಂದ 202 ರೂ.ಗೆ ಏರಿಕೆ. 5 ಕೋಟಿ ಕುಟುಂಬಗಳಿಗೆ ಅನುಕೂಲ. 5. ಬಡ ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರಿಗೆ ಮುಂದಿನ 3 ತಿಂಗಳಲ್ಲಿ 1,000 ರೂ. ವಿತರಣೆ 6. ಜನಧನ್ ಮಹಿಳಾ ಖಾತೆದಾರರಿಗೆ ಮುಂದಿನ ಮೂರು ತಿಂಗಳು ಮಾಸಿಕ 500 ರೂ.ನಂತೆ ಹಣ ಜಮೆ. 7. 63 ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳಿಗೆ ಭದ್ರತಾ ಜಾಮೀನು ರಹಿತ 20 ಲಕ್ಷ ರೂ. ಸಾಲ. 8. ಉಜ್ವಲ ಯೋಜನೆಯಡಿ ಮಹಿಳೆಯರಿಗೆ 3 ತಿಂಗಳವರೆಗೂ ಮೂರು ಅನಿಲ ಸಿಲಿಂಡರ್ ಉಚಿತ ಪೂರೈಕೆ. 9. ಕಂಪನಿ, ಉದ್ಯೋಗಿಗಳ ಪಿಎಫ್ ದೇಣಿಗೆ ತಾನೇ ಭರಿಸಲಿರುವ ಸರಕಾರ 10. ತುರ್ತು ಅಗತ್ಯಕ್ಕೆ ಪಿಎಫ್ ನಿಧಿಯ ಶೇ. 75ರಷ್ಟನ್ನು ಬಳಸಲು ಕಾನೂನು ತಿದ್ದುಪಡಿ 11. ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿರುವ 31,000 ಕೋಟಿ ಬಳಕೆಗೆ ಸೂಚನೆ 12. ಜಿಲ್ಲಾ ಖನಿಜ ಫಂಡ್‌ಗಳಲ್ಲಿರುವ ನಿಧಿಯನ್ನು ಪತ್ತೆ, ವೈದ್ಯಕೀಯ ನೆರವಿಗೆ ಬಳಕೆ
from India & World News in Kannada | VK Polls https://ift.tt/2Jkj49a