ಭಾರತದಲ್ಲಿ ವೇಗ ಪಡೆದ ಕೋವಿಡ್‌-19, ಶುಕ್ರವಾರ ಒಂದೇ ದಿನ 63 ಕೊರೊನಾ ಪಾಸಿಟಿವ್‌ ಪತ್ತೆ

ಹೊಸದಿಲ್ಲಿ: ವಿಶ್ವವನ್ನು ಕಂಗೇಡಿಸಿರುವ ಕೊರೊನಾ ಪ್ರಭಾವ ಭಾರತದಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಇದುವರೆಗೂ 236 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಗುರುವಾರ 173 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಶುಕ್ರವಾರ ಏಕಾಏಏಕಿ 236 ತಲುಪಿದ್ದು, ಒಂದೇ ದಿನ 63 ಹೊಸ ಪಾಸಿಟಿವ್‌ ಕೇಸ್‌ಗಳು ದೇಶದಲ್ಲಿ ಪತ್ತೆಯಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೌದು, ಭಾರತಕ್ಕೆ ಕಾಲಿಟ್ಟಾಗಿನಿಂದಲೂ ದಿನಕ್ಕೆ ಒಂದು, ಎರಡು, ಮೂರು ಹೀಗೆ ಕಂಡುಬರುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಶುಕ್ರವಾರ ಏಕಾಏಕಿ 63ಕ್ಕೆ ಮುಟ್ಟಿದೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 236ಕ್ಕೆ ಏರಿದೆ. ಇದರಿಂದ ಭಾರತದಲ್ಲಿ ಆತಂಕ ಶುರುವಾಗಿದ್ದು, ದೇಶದಲ್ಲಿ ನಿಧಾನವಾಗಿದ್ದ ಕೊರೊನಾ ವೈರಸ್‌ ವೇಗ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಇದು ಇನ್ನು ಹೆಚ್ಚಾಗುವ ಸಾಧ್ಯತೆ ಇದ್ದು, ವೈರಸ್‌ ಸಾಮುದಾಯಿಕವಾಗಿ ಹರಡುವ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ತಜ್ಞರ ಪ್ರಕಾರ ಭಾರತದಲ್ಲಿ ಕೋವಿಡ್‌-19 2ನೇ ಹಂತದಲ್ಲಿದ್ದು, ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಏಪ್ರಿಲ್‌ನಲ್ಲಿ ಕೊರೊನಾ ವೈರಸ್‌ ಮೂರನೇ ಹಂತಕ್ಕೆ ಪ್ರವೇಶಿಸಲಿದ್ದು, ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣಲಿದೆಯಂತೆ. ಇನ್ನು, ಇದುವರೆಗೂ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 236 ತಲುಪಿದ್ದು, 4 ಜನ ಕೋವಿಡ್‌-19 ಕಾರಣವಾಗಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಒಟ್ಟು 52 ಜನರಲ್ಲಿ ಸೋಂಕು ಇರುವುದು ಖಚಿತವಾಗಿದ್ದು, ಕೇರಳದಲ್ಲಿ 40 ಪ್ರಕರಣಗಳು ಕಂಡುಬಂದಿವೆ. ದೆಹಲಿಯಲ್ಲಿ 26, ಕರ್ನಾಟಕದಲ್ಲಿ 15 ಕೊರೊನಾ ಪಾಸಿಟಿವ್‌ ಕೇಸ್‌ಗಳು ದೃಢವಾಗಿವೆ. ವಿಶ್ವದಾದ್ಯಂತ 11,421 ಜನ ಕೊರೊನಾದಿಂದ ಮೃತಪಟ್ಟಿದ್ದು, 2 ಲಕ್ಷ 76 ಸಾವಿರ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಭಾನುವಾರ ಜನತಾ ಕರ್ಫ್ಯೂಗೆ ಮೋದಿ ಕರೆ ನೀಡಿದ್ದಾರೆ. ಇದರಿಂದ ಭಾನುವಾರ ಭಾರತೀಯ ರೈಲ್ವೆ ಕೂಡ ಪ್ಯಾಸೆಂಜರ್‌ ರೈಲುಗಳನ್ನು ದೇಶಾದ್ಯಂತ ಸ್ಥಗಿತಗೊಳಿಸಿದ್ದು, ಬೆಂಗಳೂರಿನ ನಮ್ಮ ಮೆಟ್ರೋ ಸೇರಿ ದೇಶದ ಹಲವು ಮೆಟರೋಗಳ ಸಂಚಾರವು ಬಂದ್‌ ಆಗಲಿದೆ. ಇದರ ಜೊತೆ ನಾಳೆಯಿಂದ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ನಿಷೇಧಿಸಿದ್ದು, ವೀಸಾಗಳನ್ನು ರದ್ದುಗೊಳಿಸಿದೆ. ದೇಶಾದ್ಯಂತ ಮಾಲ್‌, ಥಿಯೇಟರ್‌, ಪಬ್‌, ನೈಟ್‌ಕ್ಲಬ್‌, ಜಾತ್ರೆ, ಮದುವೆ ಸೇರಿ ಜನರು ಹೆಚ್ಚು ಸೇರುವ ಸ್ಥಳ, ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿದ್ದು, ಭಾಗಶಃ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.


from India & World News in Kannada | VK Polls https://ift.tt/2QPifJZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...