130 ಕೋಟಿ ಜನಕ್ಕೆ 1.5 ಲಕ್ಷ ಕೊರೊನಾ ಟೆಸ್ಟಿಂಗ್‌ ಕಿಟ್‌, ಕೇಂದ್ರದ ನಡೆಯಿಂದ ದೇಶಕ್ಕೆ ಅಪಾಯ: ಸಿದ್ದರಾಮಯ್ಯ ಕಿಡಿ

ಬೆಂಗಳೂರು: “ಕೇಂದ್ರ ಸರಕಾರ ‘ಕೋವಿಡ್ -19’ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸದೆ, ಕರೋನಾ ವೈರಸ್ ಹರಡುವಿಕೆಯ ಹಂತವನ್ನು ‘ಹಂತ-2’ ಎಂದು ನಿರ್ಧರಿಸುವುದು ದಾರಿ ತಪ್ಪಿಸುವ ಮತ್ತು ನಮ್ಮ ದೇಶವನ್ನು ಅಪಾಯಕ್ಕೆ ದೂಡುವ ನಡೆ,” ಎಂದು ಮಾಜಿ ಮುಖ್ಯಮಂತ್ರಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ದೇಶದಲ್ಲಿರುವ ಇರುವುದು ಕೇವಲ 1.5 ಲಕ್ಷ ಟೆಸ್ಟಿಂಗ್‌ ಕಿಟ್‌ಗಳು ಮತ್ತು ದಿನಕ್ಕೆ 6,000 ಪರೀಕ್ಷೆಗಳನ್ನು ಮಾಡುವ ಸಾಮರ್ಥ್ಯ ಮಾತ್ರ ನಮಗಿದೆ,” ಎಂಬುದಾಗಿ 'ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌'ನ ವೈರಾಣು ರೋಗ ವಿಭಾಗದ ಮುಖ್ಯಸ್ಥೆ ಹಿರಿಯ ವಿಜ್ಞಾನಿ ನಿವೇದಿತಾ ಗುಪ್ತಾ ಹೇಳಿಕೆಯನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿತ್ತು. ಇದನ್ನು ಉಲ್ಲೇಖಿಸಿ ಕೇಂದ್ರ ಸರಕಾರಕ್ಕೆ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

"ವರದಿಗಳ ಪ್ರಕಾರ, 130 ಕೋಟಿಗೂ ಹೆಚ್ಚಿರುವ ಜನಸಂಖ್ಯೆಗೆ ಸರಕಾರದ ಬಳಿ ಕೇವಲ 1.5 ಲಕ್ಷ ಕೊರೊನಾ ವೈರಸ್‌ ಪರೀಕ್ಷಾ ಕಿಟ್‌ಗಳಿವೆ. ಇದು ಅಸಮರ್ಪಕ. ಕಿಟ್‌ಗಳನ್ನು ಹೊಂದಲು ಇರುವ ಎಲ್ಲಾ ಮಾರ್ಗಗಳನ್ನು ಗಮನಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ," ಎಂದು ಸಿದ್ದರಾಮಯ್ಯ ಟ್ಟೀಟ್‌ ಮಾಡಿದ್ದಾರೆ. "ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪರೀಕ್ಷೆ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಮಾತ್ರ ನಾವು ಕೋವಿಡ್‌ 19 ಸೋಂಕನ್ನು ನಿಯಂತ್ರಿಸಬಹುದಾಗಿದೆ. ಹೀಗಿರುವಾಗ ಕೋವಿಡ್ -19 ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸದೆ, ಕರೋನಾ ವೈರಸ್ ಹರಡುವ ಹಂತವನ್ನು ‘ಹಂತ-2’ ಎಂದು ನಿರ್ಧರಿಸುವುದು ದಾರಿ ತಪ್ಪಿಸುವ ಮತ್ತು ನಮ್ಮ ದೇಶವನ್ನು ಅಪಾಯಕ್ಕೆ ದೂಡುವ ನಡೆ. ಹೀಗಾಗಿ ಹೆಚ್ಚಿನ ಕಿಟ್‌ಗಳ ಅವಶ್ಯಕತೆ ಇದೆ,” ಎಂದು ಅವರು ವಿವರಿಸಿದ್ದಾರೆ.


from India & World News in Kannada | VK Polls https://ift.tt/2J4uX35

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...