ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ ಮರುದಿನವೇ ವಿಶ್ವಸಂಸ್ಥೆಯಿಂದ ಗಲ್ಲುಶಿಕ್ಷೆ ನಿಷೇಧಕ್ಕೆ ಕರೆ

ನ್ಯೂಯಾರ್ಕ್‌ (ಅಮೆರಿಕ): ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಿದ ಮರುದಿನವೇ ಮರಣದಂಡನೆ ಶಿಕ್ಷೆ ಮೇಲೆ ನಿಷೇಧ ಹೇರುವಂತೆ ವಿಶ್ವಸಂಸ್ಥೆ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ. 2012ರಲ್ಲಿ ದೆಹಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಏಳು ವರ್ಷಗಳ ನಂತರ, ನಾಲ್ವರು ಅಪರಾಧಿಗಳಾದ ಮುಖೇಶ್‌ ಸಿಂಗ್‌, ಪವನ್‌ ಗುಪ್ತಾ, ವಿನಯ್‌ ಶರ್ಮಾ ಹಾಗೂ ಅಕ್ಷಯ್‌ ಕುಮಾರ್‌ ಸಿಂಗ್‌ರನ್ನು ಶುಕ್ರವಾರ ಬೆಳಗ್ಗೆ ನೇಣಿಗೇರಿಸಲಾಗಿತ್ತು. ಇದೀಗ ಭಾರತದಲ್ಲಿ ಶುಕ್ರವಾರ ನಾಲ್ವರು ಅಪರಾಧಿಗಳಿಗೆ ವಿಧಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್‌ ಡ್ಯುಜರಿಕ್‌, ಜಗತ್ತಿನಾದ್ಯಂತ ಮರಣದಂಡನೆ ಶಿಕ್ಷೆಯ ಮೇಲೆ ನಿಷೇಧ ಹೇರಬೇಕು ಎಂದು ವಿಶ್ವಸಂಸ್ಥೆ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ ಎಂದರು. ನಮ್ಮ ನಿಲುವು ಸ್ಪಷ್ಟವಾಗಿದೆ. ಮರಣದಂಡನೆಯ ಶಿಕ್ಷೆಯನ್ನು ನಿಲ್ಲಿಸುವಂತೆ ನಾವು ಎಲ್ಲಾ ದೇಶಗಳಿಗೆ ಕರೆ ನೀಡುತ್ತೇವೆ ಅಥವಾ ಇದಕ್ಕೆ ಕನಿಷ್ಠ ನಿಷೇಧ ಹೇರಬೇಕಿದೆ ಎಂದು ಸ್ಟೀಫನ್ ಡ್ಯುಜರಿಕ್‌ ಹೇಳಿದ್ದಾರೆ. ಡಿಸೆಂಬರ್ 16, 2012 ರಂದು ದೆಹಲಿಯಲ್ಲಿ ಮೆಡಿಕಲ್‌ ವಿದ್ಯಾರ್ಥಿನಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಈ ಘಟನೆಯಿಂದ ಭಾರತದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದು, ಅತ್ಯಾಚಾರ ಕಾನೂನುಗಳಲ್ಲಿ ಬದಲಾವಣೆಗಳಾದವು. ಇದೇ ಮೊದಲ ಬಾರಿಗೆ 16 ಸಾವಿರಕ್ಕೂ ಹೆಚ್ಚು ಖೈದಿಗಳನ್ನು ಹೊಂದಿರುವ ದಕ್ಷಿಣ ಏಷ್ಯಾದ ಅತಿದೊಡ್ಡ ಜೈಲು ತಿಹಾರ್‌ ಜೈಲಿನಲ್ಲಿ ನಾಲ್ಕು ಜನ ಅಪರಾಧಿಗಳನ್ನು ಶುಕ್ರವಾರ ಗಲ್ಲಿಗೇರಿಸಲಾಗಿತ್ತು. ನಿರ್ಭಯಾ ಹಂತಕರು ಗಲ್ಲಿಗೇರುವ ಕೊನೆ ಕ್ಷಣದವರೆಗೂ ಎಲ್ಲ ರೀತಿಯ ಕಾನೂನು ಹೋರಾಟ ನಡೆಸಿದ್ದರು. ಇದರಿಂದ ಮೂರು ಬಾರಿ ಡೆತ್‌ ವಾರಂಟ್‌ ಮುಂದೂಡಿ, ಕೊನೆಗೆ ಶುಕ್ರವಾರ ಬೆಳಗ್ಗೆ 5.30ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು.


from India & World News in Kannada | VK Polls https://ift.tt/2Wt6fkS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...