
ಫ್ಲೋರಿಡಾ: ಏಕದಿನ ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಒಳ ಜಗಳ ಉಂಟಾಗಿದ್ದು, ತಂಡದಲ್ಲಿ ಎರಡು ಬಣ ರೂಪುಗೊಂಡಿದೆ ಎಂಬ ಬಗ್ಗೆ ವದಂತಿಗಳು ಹಬ್ಬಿದ್ದವು. ನಾಯಕ ಹಾಗೂ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಬಗ್ಗೆ ವರದಿಗಳು ಬಂದಿದ್ದವು. ಇವೆಲ್ಲವನ್ನು ನಾಯಕ ವಿರಾಟ್ ಕೊಹ್ಲಿ ತಳ್ಳಿ ಹಾಕಿದ್ದರು. ಇವೆಲ್ಲದರ ನಡುವೆ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಂಡಿರುವ ಟ್ವೆಂಟಿ-20, ಏಕದಿನ ಹಾಗೂ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಈ ನಡುವೆ ಕೊಹ್ಲಿ ಹಾಗೂ ರೋಹಿತ್ ಮೈದಾನದಲ್ಲೂ ಸ್ಪರ್ಧೆಗಿಳಿಯಲಿದ್ದಾರೆ ಎಂಬುದು ಅಷ್ಟೇ ಮಹತ್ವ ಗಿಟ್ಟಿಸಿಕೊಂಡಿದೆ. ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಹಾಗೂ ಕೊಹ್ಲಿ ತಲಾ 20 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಜಂಟಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಯಾರು ಯಾರ ದಾಖಲೆ ಮುರಿಯಲಿದ್ದಾರೆ ಎಂಬುದು ಗಮನಾರ್ಹವೆನಿಸುತ್ತದೆ. ಈ ಮೂಲಕ ಬ್ಯಾಟ್‌ನಲ್ಲೂ ಅಗ್ನಿಪರೀಕ್ಷೆಗಿಳಿಯಲಿದ್ದಾರೆ. ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ 86 ಹಾಗೂ ಕೊಹ್ಲಿ 62 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು 20 ಅರ್ಧಶತಕಗಳನ್ನು ಬಾರಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YGjD6z