
ಫ್ಲೋರಿಡಾ: ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ಭರವಸೆಯ ಬ್ಯಾಟ್ಸ್‌ಮನ್ ವಿಶ್ವ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ ಸಹಸ್ರ ರನ್ ಗಳಸಿದ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾಗಲು ರಾಹುಲ್‌ಗಿನ್ನು ಇನ್ನೊಂದು ಇನ್ನಿಂಗ್ಸ್‌ನಲ್ಲ 121 ರನ್‌ಗಳ ಅವಶ್ಯಕತೆಯಿದೆ. ವೆಸ್ಟ್‌ಇಂಡೀಸ್ ವಿರುದ್ದ ಫ್ಲೋರಿಡಾದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲೇ ರಾಹುಲ್ ಈ ದಾಖಲೆ ಬರೆಯುವ ನಿರೀಕ್ಷೆಅಭಿಮಾನಿಗಳಿದ್ದು. ಸದ್ಯ ಈ ದಾಖಲೆ ಹೊಂದಿರುವ ಪಾಕಿಸ್ತಾನದ ಬಾಬರ್ ಅಜಾಮ್, 26ನೇ ಇನ್ನಿಂಗ್ಸ್‌ನಲ್ಲಿ 1000 ರನ್ ಗಳಿಸಿದ್ದರು. ಎರಡನೇ ಸ್ಥಾನದಲ್ಲಿರುವ ಭಾರತದ ನಾಯಕ 27 ಇನ್ನಿಂಗ್ಸ್‌ಗಳಲ್ಲಿ ಇದೇ ಸಾಧನೆ ಮಾಡಿದರು. ಟ್ವೆಂಟಿ-20ನಲ್ಲಿ ಈಗಾಗಲೇ ಎರಡು ಶತಕಗಳನ್ನು ಬಾರಿಸಿರುವ ಕರ್ನಾಟಕದ ರಾಹುಲ್ 24 ಇನ್ನಿಂಗ್ಸ್‌ಗಳಲ್ಲಿ 43.95ರ ಸರಾಸರಿಯಲ್ಲಿ 879 ರನ್ ಪೇರಿಸಿದ್ದಾರೆ. ಆದರೆ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿಯಲಿರುವುದರಿಂದ ದಾಖಲೆ ಮುರಿಯುವ ಸಾಧ್ಯತೆ ಕಡಿಮೆಯಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/339q4yw