ಗಯಾನ: ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ನಾಯಕ ಹಾಗೂ ನಡುವೆ ನಿಕಟ ಪೈಪೋಟಿ ಏರ್ಪಟ್ಟಿತ್ತು. ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಅರ್ಧಶತಕಗಳನ್ನು ಬಾರಿಸಿದ ಹೆಗ್ಗಳಿಕೆಯೊಂದಿಗೆ ವಿಂಡೀಸ್ ಸರಣಿಗೆ ಲಗ್ಗೆಯಿಟ್ಟಿದ್ದರು. ವಿಂಡೀಸ್ ಸರಣಿ ಆರಂಭದ ವೇಳೆಯಲ್ಲಿ ತಲಾ 20 ಫಿಫ್ಟಿ ಸಾಧನೆ ಮಾಡಿದರು. ದ್ವಿತೀಯ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ ನಾಯಕ ಕೊಹ್ಲಿ ದಾಖಲೆಯನ್ನು ಮುರಿದಿದ್ದರು. ಇದೀಗ ರೋಹಿತ್ ಅಲಭ್ಯತೆಯಲ್ಲಿ ಕೊನೆಯ ಪಂದ್ಯದಲ್ಲಿ ಫಿಫ್ಟಿ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟುವ ಮೂಲಕ ಮಗದೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವಣ ಭಿನ್ನಾಭಿಪ್ರಾಯ ಉಲ್ಬಣಿಸಿದೆ ಎಂಬ ವದಂತಿಗಳ ನಡುವೆ ಬ್ಯಾಟಿಂಗ್‌ನಲ್ಲೂ ಇವರಿಬ್ಬರ ನಡುವೆ ನಿಕಟ ಪೈಪೋಟಿ ಕಂಡುಬಂದಿದೆ. ವಿರಾಟ್ ಕೊಹ್ಲಿ ತಮ್ಮ 70ನೇ ಪಂದ್ಯದ 65 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರೆ ರೋಹಿತ್ ಶರ್ಮಾ ತಮ್ಮ 96ನೇ ಪಂದ್ಯದ 88ನೇ ಇನ್ನಿಂಗ್ಸ್‌ನಲ್ಲಿ ಅಷ್ಟೇ ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗಿದ್ದರೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ರೋಹಿತ್ ದಾಖಲೆಯ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ಇನ್ನೊಂದೆಡೆ ವಿರಾಟ್ ಗರಿಷ್ಠ ಸ್ಕೋರ್ 90* ಆಗಿದ್ದು, ಇದುವರೆಗೆ ಶತಕ ದಾಖಲಾಗಿಲ್ಲ. ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳು: ವಿರಾಟ್ ಕೊಹ್ಲಿ/ರೋಹಿತ್ ಶರ್ಮಾ 21 ಮಾರ್ಟಿನ್ ಗಪ್ಟಿಲ್ 16 ಬ್ರೆಂಡನ್ ಮೆಕಲಮ್/ಕ್ರಿಸ್ ಗೇಲ್ 15 ತಿಲಕರತ್ನೆ ದಿಲ್ಶಾನ್ 14
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33j0FSY