
ಲೌಡರ್‌ಹಿಲ್ (ಅಮೆರಿಕ): ಪ್ರವಾಸಿ ಭಾರತ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೂ ಮುನ್ನ ಆಘಾತಕ್ಕೊಳಗಾಗಿದೆ. ಸ್ಟಾರ್ ಆಟಗಾರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮೊದಲೆರಡು ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಅಮೋಘ ನಿರ್ವಹಣೆ ನೀಡಿರುವ ರಸೆಲ್, ಪದೇ ಪದೇ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಪರಿಣಾಮ ಏಕದಿನ ವಿಶ್ವಕಪ್ ಅಭಿಯಾನವನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಹಿಂತಿರುಗಬೇಕಾಯಿತು. ಇದೀಗ ಗಾಯ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ವಿಂಡೀಸ್ ಬದಲಿ ಆಟಗಾರರನ್ನು ನೇಮಕಗೊಳಿಸಿದೆ. 32ರ ಹರೆಯದ ಜೇಸನ್ ಮೊಹಮ್ಮದ್ ಅವರು ಸ್ಟಾರ್ ಆಲ್‌ರೌಂಡರ್ ಆಟಗಾರನ ಸ್ಥಾನವನ್ನು ತುಂಬಲಿದ್ದಾರೆ. ಇತ್ತೀಚೆಗಷ್ಟೇ ಗ್ಲೋಬಲ್ ಟಿ20 ಕೆನಡಾದಲ್ಲೂ ಭಾಗವಹಿಸಿದರೂ ರಸೆಲ್ ಸಂಪೂರ್ಣವಾಗಿ ಗುಣಮುಖಗೊಂಡಿರಲಿಲ್ಲ. ಇದೀಗ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಈ ಹಿಂದೆ ನಾಯಕ ಜವಾಬ್ದಾರಿಯನ್ನು ವಹಿಸರುವ ಮೊಹಮ್ಮದ್ ಉತ್ತಮ ನಿರ್ವಹಣೆ ನೀಡುವ ಭರವಸೆಯಲ್ಲಿದ್ದಾರೆ. ಭಾರತೀಯ ಬೌಲರ್ ಹಾಗೂ ಬ್ಯಾಟ್ಸ್‌ಮನ್‌ಗಳ ಬಲಾಬಲವನ್ನು ಚೆನ್ನಾಗಿ ಅರಿಯಬಲ್ಲ ರಸೆಲ್, ವಿಂಡೀಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಆದರೆ ಇದೀಗ ಫ್ಲೋರಿಡಾದಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಲಿರುವ ಮೊದಲೆರಡು ಪಂದ್ಯಗಳಿಗೆ ಅಲಭ್ಯವಾಗಿರುವುದು ಹಿನ್ನಡೆಗೆ ಕಾರಣವಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KlOiwZ