
ಲೌಡರ್‌ಹಿಲ್: ವಿರುದ್ಧ ನಡೆಯಲಿರುವ ಟ್ವೆಂಟಿ-20 ಸರಣಿಯಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಮನ್ನಣೆ ನೀಡಲಾಗಿದೆ. ಇದರಂತೆ ಟಿ-20 ಸರಣಿಗೂ ಮುನ್ನ ನಡೆದ ಪ್ರತಿಷ್ಠಾಗೋಷ್ಠಿಯಲ್ಲಿ ಇದನ್ನೇ ಉಲ್ಲೇಖಿಸಿರುವ ನಾಯಕ , ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಉತ್ತಮ ಅವಕಾಶವಾಗಿರಲಿದೆ ಎಂದಿದ್ದಾರೆ. 2020 ಟ್ವೆಂಟಿ-20 ವಿಶ್ವಕಪ್ ಸೇರಿದಂತೆ ಮುಂದಿನ ಮೂರು ವರ್ಷಗಳಿಗಾಗಿ ಬಲಿಷ್ಠ ತಂಡ ರೂಪಿಸುವತ್ತ ಟೀಮ್ ಇಂಡಿಯಾ ಗಮನ ಕೇಂದ್ರಿಕರಿಸಿದೆ. ಓರ್ವ ನಾಯಕನಾಗಿ ಏಕದಿನ ವಿಶ್ವಕಪ್ ಸೋಲಿನ ಬಳಿಕ ವಿಂಡೀಸ್ ಟಿ20 ಹಾಗೂ ಏಕದಿನ ಸರಣಿಯಲ್ಲಿ ತಂಡವನ್ನು ಪುನರ್ ನಿರ್ಮಿಸುವ ಪ್ರಯತ್ನ ಮಾಡಲಿದ್ದೇನೆ ಎಂದಿದ್ದಾರೆ. ಮುಂದಿನ ವರ್ಷ ಟಿ20 ವಿಶ್ವಕಪ್ ಇದ್ದು, ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗುತ್ತಿದೆ. ಮಗದೊಮ್ಮೆ ತಂಡವನ್ನು ಕಟ್ಟಬೇಕಾಗಿದೆ. ಪ್ರತಿ ಸಲವೂ ನೀವು ಅಂದುಕೊಂಡಂತೆ ನಡೆಯುವುದಿಲ್ಲ. ಹಾಗಾಗಿ ಡ್ರಾಯಿಂಗ್ ಬಾರ್ಡ್‌ಗೆ ಹೋಗಿ ಮಗದೊಮ್ಮೆ ಗುರಿಯತ್ತ ನೀಲಿ ನಕ್ಷೆ ತಯಾರಿಸಬೇಕಿದೆ ಎಂದರು. ಧೋನಿ ಅನುಭವವು ನಿರ್ಣಾಯಕ ಘಟಕವಾಗಿತ್ತು. ಆದರೆ ಇದೀಗ ರಿಷಬ್ ಪಂತ್ ಸೇರಿದಂತೆ ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಉತ್ತಮ ಅವಕಾಶವಿರಲಿದೆ. ರಿಷಬ್ ಸ್ಥಿರ ಪ್ರದರ್ಶನ ನೀಡುವುದನ್ನು ಎದುರು ನೋಡುತ್ತಿದ್ದೇವೆ. ಅವರು ಎಷ್ಟೊಂದು ಪ್ರತಿಭಾಶಾಲಿ ಆಟಗಾರನೆಂಬುದು ನಮಗೆಲ್ಲರಿಗೂ ಗೊತ್ತು ಎಂದರು. ಕಳೆದ ಕೆಲವು ವರ್ಷಗಳಿಂದ ಫಿನಿಶರ್ ಹೊಣೆಯನ್ನು ನಿಭಾಯಿಸುತ್ತಿದ್ದ ಧೋನಿ ಹಾಗೂ ಪಾಂಡ್ಯ ತಂಡದಲ್ಲಿಲ್ಲ. ಈ ಹಿನ್ನಲೆಯಲ್ಲಿ ಯುವ ಆಟಗಾರರು ತಾವೇನು ಎಂಬುದನ್ನು ಸಾಬೀತು ಮಾಡುವ ಅವಕಾಶೆವೂದಗಿ ಬಂದಿದೆ ಎಂದು ಸೇರಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KkWhKG