
ಮುಂಬಯಿ: ಸತತ ಮಳೆಯಿಂದಾಗಿ ಶನಿವಾರ ಮುಂಬಯಿ ರಸ್ತೆಗಳು ಮತ್ತು ರೈಲ್ವೆ ಹಳಿಗಳು ಸಂಪೂರ್ಣ ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಥಾಣೆ, ಪಾಲ್ಘರ್, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಿದೆ. ಕಳೆದ 10 ದಿನಗಳಿಂದ ಮುಂಬಯಿಯಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ಇಲಾಖೆ ಮುನ್ಸೂಚನೆ ಪ್ರಕಾರ, ಇನ್ನೂ ಕೆಲವು ದಿನಗಳ ವರೆಗೆ ಮುಂಬಯಿ ಮತ್ತು ಇತರ ಜಿಲ್ಲೆಗಳಲ್ಲಿ ಮಳೆ ಹೀಗೆಯೇ ಮುಂದುವರಿಯಲಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಈ ಮಳೆಯಾಗುತ್ತಿದೆ. ಮಳೆಯಿಂದ ನೀರು ತುಂಬಿಕೊಂಡ ಹಿನ್ನೆಲೆಯಲ್ಲಿ ಮೋನೊ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಥಾಣೆ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾನೆ. ಆತನನ್ನು ಧರ್ಮವೀರ ನಗರದ ನಿವಾಸಿ ಸಂತೋಷ್ ಗೋಲೆ (18) ಎಂದು ಗುರುತಿಸಲಾಗಿದೆ.
from India & World News in Kannada | VK Polls https://ift.tt/2T2Mmx2