
ಲಂಡನ್: ಮತ್ತು ಮನುಷ್ಯನ ಬಂಧವೇ ಅಂತದ್ದು. ನಿಷ್ಠತೆಗೆ ಮತ್ತು ನಿಜ ಪ್ರೇಮಕ್ಕೆ ಹೆಸರಾಗಿರೋ ನಾಯಿ ತನ್ನ ಸಾಕಿದವರಿಗಾಗಿ, ಪ್ರೀತಿ ತೋರಿಸಿದವರಿಗಾಗಿ ಪ್ರಾಣ ನೀಡಲು ಕೂಡ ಹೇಸದು. ಈ ಕಥೆ ಸ್ವಲ್ಪ ವಿಭಿನ್ನ. ಇಲ್ಲಿ ತನಗೆ ಪರಿಚಯವೇ ಇಲ್ಲದ ದಾರಿಹೋಕಳಿಗೆ ನಾಯಿ ಸಹಾಯ ಮಾಡಿದೆ. ಈ ವೀಡಿಯೋ 2 ವರ್ಷ ಹಳೆಯದಾದರೂ ಕೆಲ ದಿನಗಳಿಂದ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಾಡು ಹಗಲೇ ನಡೆಯುತ್ತಿದ್ದ ದರೋಡೆಯನ್ನು ನಾಯಿಯೊಂದು ತಪ್ಪಿಸಿದ ದೃಶ್ಯ ಈ ವೀಡಿಯೋದಲ್ಲಿದೆ. ವೀಡಿಯೋದಲ್ಲೇನಿದೆ: ಮಹಿಳೆಯೊಬ್ಬಳ ಮಲೆ ದಾಳಿ ನಡೆಸಿದ ದರೋಡೆಕೋರನ ಮೇಲೆ ಏಕಾಏಕಿ ಮುಗಿ ಬೀಳುವ ನಾಯಿ ಆತನನ್ನು ಅಟ್ಟಿಸಿಕೊಂಡು ಹೋಗಿದೆ. ಬಳಿಕ ಮರಳಿ ಬಂದು ಮಹಿಳೆಗೆ ಏನಾಗಿದೆ ಎಂದು ನೋಡಿದೆ. ಈ ಮೂಲಕ ಮಾನವೀಯತೆ ಎನ್ನುವುದು ಮನುಷ್ಯನಿಗಿಂತ ನಾಯಿಗಳಲ್ಲೇ ಹೆಚ್ಚಿರುತ್ತದೆ ಎಂಬುದನ್ನು ಸಾಬೀತು ಪಡಿಸಿದೆ. ನಾಯಿ ಮನುಷ್ಯನಿಗೆ ಸಹಾಯ ಮಾಡಿದ, ಮನುಷ್ಯರಿಗಿಂತ ತಾನು ಕರುಣೆ, ಪ್ರೀತಿಯಲ್ಲಿ ಹೆಚ್ಚು ಎಂಬುದನ್ನು ತೋರಿಸಿಕೊಟ್ಟಿರುವ ಉದಾಹರಣೆಗಳು ಸಾಕಷ್ಟು ಸಿಗುತ್ತಿವೆ. ಕೆಲ ದಿನಗಳ ಹಿಂದೆ ಹರಿಯಾಣಾದಲ್ಲಿ ಸೃಕಸದ ಬುಟ್ಟಿಯಲ್ಲಿ ಎಸೆಯಲಾಗಿದ್ದ ನವಜಾತ ಶಿಶುವನ್ನು ನಾಯಿಯೊಂದು ರಕ್ಷಿಸಿತ್ತು.
from India & World News in Kannada | VK Polls https://ift.tt/2GKHfg7