
ಹೈದರಾಬಾದ್: 27 ವರ್ಷದ ಧೂರ್ತನೊಬ್ಬ ಪತ್ನಿಯ ತಾಯಿಯ ಮೇಲೆ ಎಸಗಿದ ಹೇಯ ಕೃತ್ಯ ತೆಲಂಗಾಣದಲ್ಲಿ ನಡೆದಿದೆ. ಬಲಾಪುರದಲ್ಲಿ ಜುಲೈ 31ರಂದು ಈ ಕೃತ್ಯ ನಡೆದಿದ್ದು, ಆರೋಪಿಯನ್ನು ಕಂಡಿಕಲ್ ನಿವಾಸಿ ಭಾಸ್ಕರ್ ಎಂದು ಗುರುತಿಸಲಾಗಿದೆ. ಒಂದು ವರ್ಷದ ಹಿಂದೆ ಪೀಡಿತಳ ಮಗಳನ್ನು ಮದುವೆಯಾಗಿದ್ದ ಆತ, ಬುಧವಾರ ದಿನ ಅತ್ತೆಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಬಹಿರಂಗ ಪಡಿಸಿದರೆ ನಿನ್ನ ಮಗಳಿಗೆ ವಿಚ್ಛೇದನ ನೀಡುವುದಾಗಿ ಆತ ಬೆದರಿಕೆ ಹಾಕಿದ್ದ. ಆದರೆ ಆತನ ಬೆದರಿಕೆಗೆ ಜಗ್ಗದ ಪೀಡಿತೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 376 ಮತ್ತು 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಜೈಲಿಗಟ್ಟಲಾಗಿದೆ.
from India & World News in Kannada | VK Polls https://ift.tt/2ZzRKuo