
ಮದುರೈ: ಗುರುವಾರ ಬೆಳಗ್ಗೆ ಟಗ್‌ಬೋಟ್ ಮೂಲಕ ಭಾರತಕ್ಕೆ ಆಗಮಿಸಿದ್ದ ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಅಬ್ದುಲ್ ಗಫೂರ್ ಅವರನ್ನು ಶನಿವಾರ ಬೆಳಗಿನ ಜಾವ ಮಾಡಲಾಗಿದೆ. ಅಬ್ದುಲ್ ಅದೀಬ್ ಜತೆಗೆ ಟಗ್‌ಬೋಟ್‌ನ 9 ಮಂದಿ ಸಿಬ್ಬಂದಿಯನ್ನೂ ಅಂತಾರಾಷ್ಟ್ರೀಯ ಸಾಗರ ಗಡಿ ರೇಖೆಯಲ್ಲಿ (ಐಎಂಬಿಎಲ್) ಮಾಲ್ಡೀವ್ಸ್ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಅದೀಬ್ ಹೇಗೆ ಪಲಾಯನ ಮಾಡಿದರು, ಅವರಿಗೆ ಯಾರ್ಯಾರು ನೆರವಾದರು ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. 2015ರಲ್ಲಿ ಅಂದಿನ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರ ಸ್ಪೀಡ್‌ಬೋಟನ್ನು ಸ್ಫೋಟಿಸುವ ಮೂಲಕ ಅವರ ಹತ್ಯೆಗೆ ಪ್ರಯತ್ನಿಸಿದರೆಂಬ ಆರೋಪದ ಮೇರೆಗೆ ಅದೀಬ್ ಅವರನ್ನು ಬಂಧಿಸಲಾಗಿತ್ತು. 2016ರಲ್ಲಿ ಮಾಲ್ಡೀವ್ಸ್ ಕೋರ್ಟೊಂದು ಅದೀಬ್‌ಗೆ 15 ವರ್ಷಗಳ ಜೈಲುಶಿಕ್ಷೆಯನ್ನೂ ವಿಧಿಸಿತ್ತು. ಹಾಗಿದ್ದರೂ 2019ರ ಮೇಯಲ್ಲಿ ಈ ಶಿಕ್ಷೆಯನ್ನು ರದ್ದುಪಡಿಸಲಾಗಿತ್ತು.
from India & World News in Kannada | VK Polls https://ift.tt/2MAi2Ja