ಅಗಲಿದ ನಾಯಕಿ ಸುಷ್ಮಾ ಸ್ವರಾಜ್‌ಗೆ ಗಣ್ಯರ ನಮನ, ಸರಕಾರಿ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಅವರಿಂದ ಸುಷ್ಮಾ ಸ್ವರಾಜ್‌ ಅವರಿಗೆ ಅಂತಿಮ ನಮನ ಹೃದಯಾಘಾತದಿಂದ ನಿನ್ನೆ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಅವರ ನಿವಾಸಕ್ಕೆ ಈ ಬೆಳಗ್ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಗಲಿದ ಧೀಮಂತ ನಾಯಕಿಗೆ ಅಂತಿಮ ನಮನ ಸಲ್ಲಿಸಿದರು. ಹೊಸದಿಲ್ಲಿ: ನಿನ್ನೆ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ಇಂದು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಲಿದೆ. ಅವರ ಮೃತದೇಹವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ನೂರಾರು ಗಣ್ಯರು ಮತ್ತು ಸಾರ್ವಜನಿಕ ಅಭಿಮಾನಿಗಳು ಆಗಮಿಸಿ ಬಾಷ್ಪಾಂಜಲಿ ಸಲ್ಲಿಸುತ್ತಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿ ನಿಧನಕ್ಕೆ ಸಂತಾಪ ಸೂಚಕವಾಗಿ ದಿಲ್ಲಿ ಸರಕಾರ ಎರಡು ದಿನದ ಶೋಕಾಚರಣೆ ಘೋಷಿಸಿದೆ. ರಾಷ್ಟ್ರವು ಮಹಾನ್ ನಾಯಕಿಯನ್ನು ಕಳೆದುಕೊಂಡಿದೆ, ಎಂದು ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿಯವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ದಿಲ್ಲಿಯ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಅವರಿಂದ ದಿಲ್ಲಿಯ ಮಾಜಿ ಮುಖ್ಯಮಂತ್ರಿಗೆ ಅಂತಿಮ ನಮನ. ಅಗಲಿದ ನಾಯಕಿಗೆ ಯೋಗ ಗುರು ಬಾಬಾ ರಾಮದೇವ್ ಅಂತಿಮ ನಮನ ಸಲ್ಲಿಸಿದ್ದಾರೆ. ಸುಷ್ಮಾ ಸ್ವರಾಜ್ ಅವರ ನಿಧನದ ಸುದ್ದಿ ತಿಳಿದು ಆಘಾತವಾಗಿದೆ. 1990ರ ದಶಕದಿಂದಲೂ ನಾನು ಅವರನ್ನು ಹತ್ತಿರದಿಂದ ಬಲ್ಲೆ. ನಮ್ಮಿಬ್ಬರ ನಡುವೆ ಸೈದ್ಧಾಂತಿಕ ಭೇದಗಳಿದ್ದರೂ ಸಂಸತ್ತಿನಲ್ಲಿ ಹಲವಾರು ಸಲ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡಿದ್ದೆವು. ಶ್ರೇಷ್ಠ ಸಂಸದೀಯ ಪಟು, ರಾಜಕಾರಣಿ, ನಾಯಕಿ, ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೆಯ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ, ಅಭಿಮಾನಿ ವರ್ಗಕ್ಕೆ ನನ್ನ ಸಂತಾಪಗಳು: ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಟಿಎಂಸಿ ಸಂಸದ ಡೆರಿಕ್ ಓಬ್ರೈನ್ ಮತ್ತು ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ಸುಷ್ಮಾ ಸ್ವರಾಜ್ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ನನ್ನ ಕೊನೆಯುಸಿರು ಇರುವವರೆಗೂ ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಈ ಜಗತ್ತನ್ನು ಬಿಟ್ಟು ತೆರಳಿದ್ದಾರೆ, ಆದರೆ ಇದಕ್ಕಿಂತ ಉತ್ತಮ ಲೋಕವನ್ನು ಅವರು ಸೇರಿದ್ದಾರೆ: ಬಿಜೆಪಿ ಸಂಸದೆ ರಮಾದೇವಿ


from India & World News in Kannada | VK Polls https://ift.tt/2YPpsL3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...