ನವದೆಹಲಿ: INX ಮೀಡಿಯಾ ಹಗರಣ ಸಂಬಂಧ ಸಿಬಿಐ ದಾಖಲಿಸಿರುವ ಕೇಸ್ ಗೆ ನಿರೀಕ್ಷಣಾ ಜಾಮೀನು ಕೋರಿ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ಚಿದಂಬರಂ ಅವರನ್ನು ಬಂಧಿಸಿರುವ ಕಾರಣ, ನಿರೀಕ್ಷಣಾ ಜಾಮೀನಿನ ಪ್ರಶ್ನೆ ಉದ್ಭವ ಆಗೋದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಚಿದಂಬರಂ ಅವರು ಜಾಮೀನಿಗಾಗಿ ಕೆಳ ನ್ಯಾಯಾಲಯಗಳ ಮೊರೆ ಹೋಗಬಹುದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಚಿದು ಅವರಿಗೆ ಜಾಮೀನು ಕೊಡಬೇಕೋ, ಬೇಡವೋ ಅನ್ನೋದನ್ನ ಅಧೀನ ನ್ಯಾಯಾಲಯಗಳೇ ನಿರ್ಧರಿಸಬೇಕೆಂದು ಹೇಳಿದೆ. ಇದೇ ವೇಳೆ, ಕೆಳ ನ್ಯಾಯಾಲಯಗಳಲ್ಲಿ ವಿಚಾರಣೆ ವೇಳೆ ಯಾವುದೇ ಕಾರಣಕ್ಕೂ ಸುಪ್ರೀಂ ಹಾಗೂ ಹೈಕೋರ್ಟ್ ನ ಪ್ರಭಾವ ಬಳಸಬೇಡಿ ಎಂದು ತಾಕೀತು ಮಾಡಿದೆ. ಇದಕ್ಕೂ ಮುನ್ನ ಚಿದು ಪರ ವಾದ ಮಾಡಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ದಿಲ್ಲಿ ಹೈಕೋರ್ಟ್ ಹಾಗೂ ಸಿಬಿಐ ವಿರುದ್ಧ ತಮ್ಮ ಕಕ್ಷೀದಾರರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೀಗಿರುವಾಗ ಇಡಿ ಕೂಡಾ ಚಿದಂಬರಂ ಅವರ ಬಂಧನಕ್ಕೆ ಮುಂದಾಗೋದು ಸರಿಯಲ್ಲ ಎಂದರು. ಇಡಿ ಬಂಧನ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ ನಲ್ಲಿ ಇನ್ನೂ ವಿಚಾರಣೆ ಹಂತದಲ್ಲಿದೆ.
from India & World News in Kannada | VK Polls https://ift.tt/2NCTiAF