ಅಗತ್ಯವಿದ್ದರೆ ಪಾಕ್ ಜತೆ ನೇರವಾಗಿ ಮಾತಾಡ್ತೀವಿ, ನಿಮ್ಮ ಸಂಧಾನ ಅಗತ್ಯವಿಲ್ಲ: ಅಮೆರಿಕಕ್ಕೆ ಭಾರತ ತಾಕೀತು

ಬ್ಯಾಂಕಾಕ್: ಕಾಶ್ಮೀರದ ಕುರಿತು ಯಾವುದೇ ಮಾತುಕತೆ ಅಗತ್ಯವಿದ್ದರೂ ಪಾಕಿಸ್ತಾನದ ಜತೆಗೆ ಮಾತ್ರ ನಡೆಸಲಾಗುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ಕಾಶ್ಮೀರ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತ್ರ ಮಾತುಕತೆ ನಡೆಯಬಹುದೇ ಹೊರತು, ಅಮೆರಿಕಕ್ಕೆ ಇದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟವಾಗಿ ಸಾರಿದರು. ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಹೇಳಿಕೆಗೆ ಪ್ರತಿಯಾಗಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ. ಏಷ್ಯನ್‌-ಇಂಡಿಯನ್ ಸಚಿವರ ಸಭೆ, ಪೂರ್ವ ಏಷ್ಯಾ ವಿದೇಶಾಂಗ ಸಚಿವರ 9ನೇ ಶೃಂಗಸಭೆ, 26ನೇ ಏಷ್ಯನ್‌ ಪ್ರಾದೇಶಿಕ ವೇದಿಕೆ ಹಾಗೂ 10ನೇ ಮೆಕಾಂಗ್ ಗಂಗಾ ಸಹಕಾರ ಸಚಿವರ ಸಭೆ ಸೇರಿದಂತೆ ಹಲವು ಸರಣಿ ಸಭೆಗಳಲ್ಲಿ ಭಾಗವಹಿಸಲು ಸಚಿವ ಎಸ್. ಜೈಶಂಕರ್ ಬ್ಯಾಂಕಾಕ್‌ಗೆ ಆಗಮಿಸಿದ್ದಾರೆ. 'ಪ್ರಾದೇಶಿಕ ವಿಷಯಗಳ ಬಗ್ಗೆ ಮೈಕ್ ಪಾಂಪಿಯೊ ಜತೆ ವಿಸ್ತಾರವಾಗಿ ಚರ್ಚಿಸಲಾಯಿತು' ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. 'ಕಾಶ್ಮೀರ ಕುರಿತ ಚರ್ಚೆ ಏನಿದ್ದರೂ ಅಗತ್ಯವಿದ್ದರೆ ಪಾಕ್‌ ಜತೆ ಮಾತ್ರ ನಡೆಯುತ್ತದೆ. ಇದು ದ್ವಿಪಕ್ಷೀಯ ವಿಚಾರವೇ ಹೊರತು ಮೂರನೆಯವರಿಗೆ ಮೂಗು ತೂರಿಸಲು ಇಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟವಾಗಿಯೇ ಅಮೆರಿಕಕ್ಕೆ ಮನವರಿಕೆ ಮಾಡಲಾಗಿದೆ' ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಜೈಶಂಕರ್‌-ಪಾಂಪಿಯೊ ಸಭೆಗೆ ಕೆಲವೇ ಗಂಟೆಗಳ ಮೊದಲು ವಾಷಿಂಗ್ಟನ್‌ನಲ್ಲಿ ಟ್ರಂಪ್‌, ಭಾರತ-ಪಾಕ್ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಪುನರುಚ್ಚರಿಸಿದ್ದರು.


from India & World News in Kannada | VK Polls https://ift.tt/2GFPLxa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...