ಟೀಮ್ ಇಂಡಿಯಾ ಅಭ್ಯಾಸ; ಒಂದೇ ಫ್ರೇಮ್‌ನಲ್ಲಿ ಕಂಡುಬರಲಿಲ್ಲ ವಿರಾಟ್-ರೋಹಿತ್!

ಫ್ಲೋರಿಡಾ: ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೂ ಮುಂಚಿತವಾಗಿ ಅಭ್ಯಾಸವನ್ನು ಆರಂಭಿಸಿದೆ. ಇದರಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಅಭ್ಯಾಸ ಅವಧಿಯ ಚಿತ್ರಗಳನ್ನು ಹಂಚಿಕೊಂಡಿದೆ. ಆದರೆ ನಾಯಕ ಹಾಗೂ ಒಂದೇ ಚಿತ್ರದ ಫ್ರೇಮ್‌ನಲ್ಲಿ ಕಂಡುಬರದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಅಭಿಮಾನಿಗಳು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ರೋಹಿತ್ ಹಾಗೂ ಕೊಹ್ಲಿ ಅಭಿಮಾನಿಗಳ ನಡುವೆ ಕಚ್ಚಾಟಕ್ಕೆ ಕಾರಣವಾಗಿದೆ. ಈ ಮೊದಲು ನಾಯಕ ವಿರಾಟ್ ಕೊಹ್ಲಿಎರಡೆರಡು ಬಾರಿ ತಂಡದ ಸದಸ್ಯರೊಂದಿಗೆ ಚಿತ್ರವನ್ನು ಹಂಚಿಕೊಂಡರೂ ಉಪನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯು ಎದ್ದು ಕಾಣಿಸುತ್ತಿತ್ತು. ಇದರಿಂದಾಗಿ ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲವೇ ಎಂಬುದು ಸಂಶಯಕ್ಕೆ ಕಾರಣವಾಗಿದೆ. ಏಕದಿನ ವಿಶ್ವಕಪ್ ಸೋಲಿನ ಬೆನ್ನಲ್ಲೇ ತಂಡದಲ್ಲಿ ಒಳ ಜಗಳವಿದ್ದು, ಬಣ ರೂಪುಗೊಂಡಿದೆ ಎಂಬುದರ ಬಗ್ಗೆ ವದಂತಿಗಳು ಹಬ್ಬಿದ್ದವು. ಒಟ್ಟಿನಲ್ಲಿ ಆಟಗಾರರು ಪರಸ್ಪರ ದ್ವೇಷವನ್ನು ಮೆರತು ಕ್ರಿಕೆಟ್‌ನತ್ತ ಗಮನ ಕೇಂದ್ರಿಕರಿಸುವುದು ಅತಿ ಮುಖ್ಯವೆನಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/333chte

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...