ಕಾಶ್ಮೀರಿಗಳ ಪರ ಮಾತಾಡಲು ಪಾಕ್‌ಗೆ ನೈತಿಕ ಹಕ್ಕಿಲ್ಲ: ಮೊಹಾಜಿರ್ ನಾಯಕ ನದೀಮ್ ನುಸ್ರತ್

ವಾಷಿಂಗ್ಟನ್ ಡಿಸಿ: ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸಿದ ನರೇಂದ್ರ ಮೋದಿ ಸರಕಾರದ ಐತಿಹಾಸಿಕ ನಿರ್ಧಾರವನ್ನು ಖಂಡಿಸುವ ಮೂಲಕ ಮೂಗು ತೂರಿಸಹೊರಟ ಪಾಕಿಸ್ತಾನಕ್ಕೆ ಪ್ರಮುಖ ಮೊಹಾಜಿರ್ ನಾಯಕ ನದೀಂ ನುಸ್ರತ್‌ ಪ್ರಬಲ ತಿರುಗೇಟು ನೀಡಿದ್ದಾರೆ. 'ಕಾಶ್ಮೀರಿಗಳ ಪರ ಮಾತನಾಡಲು ಪಾಕಿಸ್ತಾನಕ್ಕೆ ಯಾವುದೇ ನೈತಿಕ ಹಕ್ಕಿಲ್ಲ' ಎಂದು ಅವರು ಪ್ರತಿಪಾದಿಸಿದ್ದಾರೆ. ಅಮೆರಿಕದಲ್ಲಿರುವ 'ವಾಯ್ಸ್‌ ಆಫ್ ಕರಾಚಿ' (ವಿಓಕೆ) ಹೆಸರಿನ ಸಲಹಾ ಸಂಸ್ಥೆಯ ಅಧ್ಯಕ್ಷರಾಗಿರುವ ನುಸ್ರತ್, ಪಾಕಿಸ್ತಾನ ಕಾಶ್ಮೀರದ ಬಗ್ಗೆ ಮಾಥನಾಡುವ ಮೊದಲು ತನ್ನದೇ ನೆಲದಲ್ಲಿ ಬದುಕುತ್ತಿರುವ ಎಲ್ಲ ಅಲ್ಪಸಂಖ್ಯಾತರಿಗೆ ಎಲ್ಲ ಹಕ್ಕುಗಳನ್ನು ನೀಡಲಿ' ಎಂದು ಆಗ್ರಹಿಸಿದ್ದಾರೆ. 'ಪಾಕಿಸ್ತಾನ ಕಾಶ್ಮೀರಿಗಳ ಹ್ಕುಗಳ ಬಗ್ಗೆ ಮಾತನಾಡುವ ಮೊದಲ ತನ್ನ ನೆಲದಲ್ಲೇ ಪರಕೀಯರಂತೆ ಬದುಕುತ್ತಿರುವ ಮೊಹಾಜಿರ್‌ಗಳು, ಬಲೂಚ್‌, ಪಶ್ತೂನ್‌ಗಳು ಮತ್ತು ಹಜಾರಾ ನಾಗರಿಕರಿಗೆ ಅದೇ ಹಕ್ಕುಗಳನ್ನು ನೀಡಲಿ' ಎಂದು ಸುದ್ದಿಸಂಸ್ಥೆ ಜತೆ ನುಡಿದರು. ಪಾಕ್‌ ದೌರ್ಜನ್ಯ ತಾಳಲಾಗದೆ ದೇಶ ತೊರೆದ ಮೊಹಾಜಿರ್‌ಗಳ ಸಂಘಟನೆಯ ಮುಖ್ಯಸ್ಥರಾದ ನುಸ್ರತ್, ಮೊಹಾಜಿರ್‌ಗಳಿಗಾಗಿ ಸ್ವಾಯತ್ತ 'ಗ್ರೇಟರ್ ಕರಾಚಿ' ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ. ಪಾಕಿಸ್ತಾನದೊಳಗಿನ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೂ ಪ್ರತ್ಯೇಕ ಸ್ವಾಯತ್ತ ಪ್ರದೇಶ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. 370ನೇ ವಿಧಿ ರದ್ದುಪಡಿಸುವ ರಾಷ್ಟ್ರಪತಿಗಳ ಆದೇಶವನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿದ ಬೆನ್ನಿಗೇ ವಾಯ್ಸ್‌ ಆಫ್ ಕರಾಚಿ ಮುಖ್ಯಸ್ಥರ ಹೇಳಿಕೆ ಹೊರಬಿದ್ದಿದೆ.


from India & World News in Kannada | VK Polls https://ift.tt/2OHLXld

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...