
ವಾರಣಾಸಿ: ಧರ್ಮರಾಯ ತನ್ನ ಪತ್ನಿ ದ್ರೌಪದಿಯನ್ನು ಜೂಜಾಟದಲ್ಲಿ ಪಣಕ್ಕಿಟ್ಟು ಸೋತ ಕಥೆ ಮಹಾಭಾರತದಲ್ಲಿ ಬರುತ್ತದೆ. ಆಗ ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸಿದ್ದು, ಶ್ರೀಕೃಷ್ಣ ಆಕೆಯ ಸಹಾಯಕ್ಕೆ ಬಂದಿದ್ದು ಎಲ್ಲರಿಗೂ ಗೊತ್ತಿರುವ ಕಥೆ. ಮತ್ತಿದು ಕಲಿಯುಗದಲ್ಲಿ ನಡೆದ ಕಥೆ. ಆದರೆ ಪಣಕ್ಕಿಟ್ಟವನೇನೂ ಧರ್ಮರಾಯನಂತಹ ಧರ್ಮಾತ್ಮನಲ್ಲ. ಆತನ ಜೂಜಿನ ಹುಚ್ಚಿಗೆ ಅಮಾಯಕ ಪತ್ನಿ ಈಗ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿದ್ದಾಳೆ. ವಾರಾಣಸಿಯಲ್ಲಿ ಈ ಘೋರ ಕೃತ್ಯ ನಡೆದಿದ್ದು, ಜೂಜಾಟ ಮತ್ತು ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ಇಸ್ಪಿಟ್ ಆಟದಲ್ಲಿ ಪತ್ನಿಯನ್ನೇ ಪಣಕ್ಕಿಟ್ಟಿದ್ದ. ಸೋತ ಬಳಿಕ ಆತ ಹಣ ನೀಡಲಿಲ್ಲ ಎಂದು ಆತನ ಪತ್ನಿ ಮೇಲೆ ಗೆದ್ದವರು ಅತ್ಯಾಚಾರ ಮಾಡಿದ್ದಾರೆ. ಗುರುವಾರ ಪೊಲೀಸ್ ಠಾಣೆಗೆ ಬಂದ ಪೀಡಿತೆ ಪತಿ ಸೇರಿದಂತೆ ಮೂವರ ಮೇಲೆ ದೂರು ನೀಡಿದ್ದಾಳೆ. ಒಂದು ತಿಂಗಳ ಹಿಂದೆ ಈ ಕೃತ್ಯ ನಡೆದಿದ್ದು, ಬಹಳ ದಿನಗಳ ಬಳಿಕ ಬೆಳಕಿಗೆ ಬಂದಿದೆ. ಪತಿ ಸದಾ ಕುಡಿತ ಮತ್ತು ಜೂಜಿನಲ್ಲಿ ಮುಳುಗಿರುತ್ತಿದ್ದ. ಸ್ನೇಹಿತರಾದ ಅರುಣ್ ಮತ್ತು ಆತನ ಸಂಬಂಧಿ ಅನಿಲ್ ಜೂಜಾಟಲೆಂದು ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ಕಳೆದ ತಿಂಗಳೊಂದು ದಿನ ಜೂಜಿನಲ್ಲಿ ಹಣವಿಟ್ಟು ಸೋತಿದ್ದ ಪತಿ, ಮತ್ತೆ ಪಣಕ್ಕಿಡಲು ಹಣವಿಲ್ಲದೇ ನನ್ನನ್ನೇ ಇಟ್ಟ. ಆಟದಲ್ಲಿ ಸೋತಾಗ ಅನಿಲ್ ಮತ್ತು ಅರುಣ್ ನನ್ನ ಮೇಲೆ ಅತ್ಯಾಚಾರ ಎಸಗಿದರು. ಒಂದು ತಿಂಗಳ ಬಳಿಕ ಮತ್ತೆ ಇದು ಮರುಕಳಿಸಿದ್ದು, ತಾಳ್ಮೆಗೆಟ್ಟು ನಾನು ಪೊಲೀಸ್ ಠಾಣೆ ಮೆಟ್ಟಿಲೇರಿದೆ ಎಂದು ಹೇಳಿದ್ದಾಳೆ.
from India & World News in Kannada | VK Polls https://ift.tt/2LX0w2b