
ಕೋಲ್ಕತಾ: ಹೌದು, ಇಂತಹದೊಂದು ಪ್ರಶ್ನೆಯೊಂದು ಎದುರಾದಾಗ ಮುಂದೊಂದು ದಿನ ಖಂಡಿತವಾಗಿಯೂ ಟೀಮ್ ಇಂಡಿಯಾದ ಕೋಚ್ ಆಗಲಿದ್ದೇನೆ ಎಂದು ದಾದಾ ಖ್ಯಾತಿಯ ಟೀಮ್ ಇಂಡಿಯಾದ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಕೋಚ್ ಆಗಲು ಇಷ್ಟವಿಲ್ಲ. ಆದರೆ ಖಂಡಿತವಾಗಿಯೂ ಭವಿಷ್ಯದಲ್ಲಿ ಕೋಚ್ ಆಗುವ ಬಯಕೆಯಿದೆ ಎಂದು ಕ್ರಿಕೆಟ್ ಜೀವನದ ಬಳಿಕ ಆಡಳಿತದಲ್ಲೂ ಪ್ರತಿಭೆ ಮೆರೆದಿರುವ ಮಾಜಿ ನಾಯಕ ಮನದಾಳದ ಮಾತನ್ನು ಬಿಚ್ಚಿಟ್ಟರು. ವೆಸ್ಟ್‌ಇಂಡೀಸ್ ಸರಣಿ ಬಳಿಕ ಕೋಚ್ ರವಿಶಾಸ್ತ್ರಿ ಅವಧಿಯು ಮುಗಿಯುತ್ತಿರುವಂತೆಯೇ ಬಿಸಿಸಿಐ ಹೊಸ ಕೋಚ್ ಹುಡುಕಾಟದಲ್ಲಿದೆ. ಈಗಾಗಲೇ ಬಂದಿರುವ ಮಾಹಿತಿಗಳ ಪ್ರಕಾರ 2000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದೆ. 47ರ ಹರೆಯದ ಗಂಗೂಲಿ ಸದ್ಯ ಬಂಗಳಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಹಾಗೆಯೇ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹಾಗಾರನಾಗಿದ್ದಾರೆ. ಅಷ್ಟೇ ಯಾಕೆ ಕ್ರಿಕೆಟ್ ವೀಕ್ಷಣಾ ವಿವರಣೆಯನ್ನು ನಿಭಾಯಿಸುತ್ತಾರೆ. ಸದ್ಯ ಅನೇಕ ಜವಾಬ್ದಾರಿಗಳು ನನ್ನ ಹೆಗಲ ಮೇಲಿದೆ. ಇವೆಲ್ಲವೂ ಸಂಪೂರ್ಣವಾಗಲಿ. ಮುಂದಕ್ಕೆ ಭವಿಷ್ಯದಲ್ಲಿ ಕೋಚ್ ಆಗುವ ಆಸಕ್ತಿಯಿದೆ ಎಂದು ಹೇಳಿದರು. ಏತನ್ಮಧ್ಯೆ ಕಪಿಲ್ ದೇವ್, ಅಂಶುಮನ್ ಗಾಯಕ್‌ವಾಡ್ ಹಾಗೂ ಶಾಂತ ರಂಗಸ್ವಾಮಿ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ನೂತನ ಕೋಚ್ ಆಯ್ಕೆ ಮಾಡಲಿದೆ. ಸದ್ಯ ಇರುವ ಮಾಹಿತಿ ಪ್ರಕಾರ ಎರಡನೇ ಬಾರಿಯೂ ರವಿಶಾಸ್ತ್ರಿ ಅವರೇ ಮುಂದುವರಿಯುವ ಸಾಧ್ಯತೆಯಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3315KPI