
ಹೊಸದಿಲ್ಲಿ: ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗಾಗಿ ಟೀಮ್ ಇಂಡಿಯಾ ಅಮೆರಿಕವನ್ನು ತಲುಪಿದೆ. ಇದರಂತೆ ನಾಯಕ ಸಹ ಆಟಗಾರ ಜತೆಗಿನ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಆಶ್ಚರ್ಯವೆಂಬಂತೆ ಚಿತ್ರದಲ್ಲಿ ಉಪನಾಯಕ ಅವರ ಅನುಪಸ್ಥಿತಿಯು ಎದ್ದು ಕಾಣಿಸುತ್ತಿದೆ. ಇದನ್ನೇ ಬೊಟ್ಟು ಮಾಡಿರುವ ಅಭಿಮಾನಿಗಳು ರೋಹಿತ್ ಎಲ್ಲಿ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಇದರೊಂದಿಗೆ ರೋಹಿತ್ ಹಾಗೂ ವಿರಾಟ್ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಪ್ರಶ್ನೆ ಮತ್ತಷ್ಟು ಜೋರಾಗಿದೆ. ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತ ತಂಡದಲ್ಲಿ ಒಳ ಜಗಳ ಉಂಟಾಗಿದ್ದು, ಎರಡು ಬಣಗಳು ರೂಪುಗೊಂಡಿದೆ ಎಂಬುದರ ಬಗ್ಗೆ ವದಂತಿಗಳು ಹಬ್ಬಿದ್ದವು. ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ ಎಂಬ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಆದರೆ ವಿಂಡೀಸ್ ಪ್ರವಾಸಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಈ ಎಲ್ಲ ಬಗೆಗಿನ ಮಿಥ್ಯಾ ಆರೋಪಗಳನ್ನು ನಾಯಕ ವಿರಾಟ್ ಕೊಹ್ಲಿ ತಳ್ಳಿ ಹಾಕಿದ್ದರು. ಸಾಮಾಜಿಕ ಫ್ಲ್ಯಾಟ್‌ಫಾರ್ಮ್ ಇನ್‌ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾರನ್ನು ರೋಹಿತ ಶರ್ಮಾ ಅನ್‌ಫಾಲೋ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅನುಷ್ಕಾ ಶರ್ಮಾ ಸ್ಟೇಟಸ್ ಹಾಕಿದ್ದರು. ಇದು ಎರಡನೇ ಬಾರಿಗೆ ವಿರಾಟ್ ಕೊಹ್ಲಿ ಹಂಚಿದ ಟೀಮ್ ಇಂಡಿಯಾ ಚಿತ್ರದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯು ಎದ್ದು ಕಾಣಿಸುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಹಂಚಿದ ಚಿತ್ರದಲ್ಲೂ ರೋಹಿತ್ ಶರ್ಮಾ ಸಾನಿಧ್ಯವಿರಲಿಲ್ಲ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2GJGP9M