2018ರಲ್ಲಿ 7ನೇ ಸ್ಥಾನಕ್ಕೆ ಕುಸಿದ ಭಾರತದ ಆರ್ಥಿಕತೆ: ವಿಶ್ವಬ್ಯಾಂಕ್ ವರದಿ

ಹೊಸದಿಲ್ಲಿ: 2018ರ ಜಾಗತಿಕ ಜಿಡಿಪಿ ರ‍್ಯಾಂಕಿಂಗ್‌ನಲ್ಲಿ ಭಾರತ 7ನೇ ಸ್ಥಾನಕ್ಕೆ ಕುಸಿದಿದೆ. ಯುಕೆ ಮತ್ತು ಫ್ರಾನ್ಸ್‌ ಕ್ರಮವಾಗಿ 5 ಮತ್ತು 6ನೇ ಸ್ಥಾನಕ್ಕೆ ಏರಿವೆ. ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ಈ ಮಾಹಿತಿ ಹೊರಬಿದ್ದಿದೆ. 2017ರಲ್ಲಿ ಭಾರತ 6ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿತ್ತು. ಆಗ ಫ್ರಾನ್ಸ್‌ 7ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಅಮೆರಿಕ 20.5 ಟ್ರಿಲಿಯನ್‌ ಡಾಲರ್‌ ಜಿಡಿಪಿಯೊಂದಿಗೆ ಜಗತ್ತಿನ ನಂ.1 ಅರ್ಥವ್ಯವಸ್ಥೆಯಾಗಿ ಉಳಿದಿದೆ. ಚೀನಾ 13.6 ಟ್ರಿಲಿಯನ್ ಜಿಡಿಪಿಯೊಂದಿಗೆ ಎರಡನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿದೆ. 5 ಟ್ರಿಲಿಯನ್ ಡಾಲರ್‌ ಜಿಡಿಪಿಯೊಂದಿಗೆ ಜಪಾನ್ ಮೂರನೇ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿದೆ. ಭಾರತದ ಜಿಡಿಪಿ 2.7 ಟ್ರಿಲಿಯನ್‌ ಡಾಲರ್ ಅರ್ಥವ್ಯವಸ್ಥೆಯಾಗಿದ್ದರೆ, ಯುಕೆ 2.8 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದೆ. 2017ರಲ್ಲಿ ಭಾರತ 2.65 ಟ್ರಿಲಿಯನ್ ಡಾಲರ್, ಯುಕೆ 2.64 ಟ್ರಿಲಿಯನ್ ಡಾಲರ್‌ ಮತ್ತು ಫ್ರಾನ್ಸ್‌ 2.5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯಾಗಿ ಬೆಳೆದಿದ್ದವು. ಆಗ ಜಗತ್ತಿನ 5ನೇ ಅತಿದೊಡ್ಡ ಹಾಗೂ ಏಷ್ಯಾದ 3ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಭಾರತ ಹೊರಹೊಮ್ಮಿತ್ತು. ಪ್ರಸ್ತುತ ಜಾಗತಿಕವಾಗಿ ತಲೆದೋರಿರುವ ಆರ್ಥಿಕ ಏರಿಳಿತಗಳು ಹಾಗೂ ಹಿನ್ನಡೆಗಳಿಂದಾಗಿ ಭಾರತ ಏಳನೇ ಸ್ಥಾನಕ್ಕೆ ಕುಸಿದಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಹಾಗಿದ್ರೂ, ಭಾರತ ಈಗಲೂ ಅತಿ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯೆಂಬ ಖ್ಯಾತಿ ಹೊಂದಿದೆ. ಮಾರ್ಚ್‌ಗೆ ಅಂತ್ಯಗೊಳ್ಳಲಿರುವ ಹಾಲಿ ವಿತ್ತವರ್ಷದಲ್ಲಿ ಶೇ 7ರ ಬೆಳವಣಿಗೆ ದಾಖಲಿಸಬಹುದೆಂದು ಅಂದಾಜಿಸಲಾಗಿದೆ. ಇದೇ ವೇಳೆ ಅಮೆರಿಕದ ಜತೆಗಿನ ವಾಣಿಜ್ಯ ಸಮರದಿಂದಾಗಿ ಚೀನಾದ ಬೆಳವಣಿಗೆ ದರ ಗಣನೀಯವಾಗಿ ಕುಸಿದಿದೆ.


from India & World News in Kannada | VK Polls https://ift.tt/2YBJeJO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...