
ಫ್ಲೋರಿಡಾ: ವೆಸ್ಟ್‌ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಟ್ವೆಂಟಿ-20 ಸರಣಿಗೂ ಮುನ್ನ ಮಿಯಾಮಿಯಲ್ಲಿ ಬಿಡುವಿನ ಸಮಯವನ್ನು ಕಳೆಯುತ್ತಿದೆ. ಈ ನಡುವೆ ನಾಯಕ ಎರಡೆರಡು ಬಾರಿ ಬಿಡುಗಡೆ ಮಾಡಿದ ಚಿತ್ರದಲ್ಲಿ ಉಪನಾಯಕ ಅನುಪಸ್ಥಿತಿಯು ಎದ್ದು ಕಾಣಿಸುತ್ತಿತ್ತು. ಇನ್ನೊಂದೆಡೆ ಅಭಿಮಾನಿಗಳ ಜತೆಗೆ ಹಂಚಿಕೊಂಡಿರುವ ಚಿತ್ರದಲ್ಲಿ ರೋಹಿತ್ ಶರ್ಮಾ ಪ್ರತ್ಯಕ್ಷಗೊಂಡಿದ್ದಾರೆ. ಹಾಗಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜತೆಗೆ ಎಲ್ಲವೂ ಸರಿಯಿಲ್ಲವೇ ಎಂಬುದು ಮತ್ತಷ್ಟು ಊಹಾಪೋಹಾಗಳಿಗೆ ಕಾರಣವಾಗಿದೆ. ವಿಶ್ವಕಪ್ ಬೆನ್ನಲ್ಲೇ ಭಿನ್ನಭಿಪ್ರಾಯದ ಬಗ್ಗೆ ವದಂತಿಗಳು ಹಬ್ಬಿದ್ದವು. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆಯೇ ಇನ್‌ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರನ್ನು ರೋಹಿತ್ ಶರ್ಮಾ ಅನ್ ಫಾಲೋ ಮಾಡಿದ್ದರು. ಆದರೆ ರೋಹಿತ್ ಶರ್ಮಾ ಜತೆಗಿನ ಭಿನ್ನಪ್ರಾಯದ ವದಂತಿಗಳನ್ನು ನಾಯಕ ವಿರಾಟ್ ಕೊಹ್ಲಿ ತಳ್ಳಿ ಹಾಕಿದ್ದರು. ವಿರಾಟ್ ಚಿತ್ರದಲ್ಲಿ ಎರಡೆರಡು ಬಾರಿ ಮಿಸ್ ಶಿಖರ್ ಜತೆಗೆ ರೋಹಿತ್ ಒಡನಾಟ ಯುವ ಆಟಗಾರರ ಧಮಾಲ್
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2SYdgGD