ನಾನು ಏನನ್ನು ಸಾಬೀತು ಮಾಡುವ ಅಗತ್ಯವಿಲ್ಲ: ಕೊಹ್ಲಿ

ಗಯಾನ: ವಿರುದ್ಧ ನಡೆದ ಟ್ವೆಂಟಿ-20 ಸರಣಿಯಲ್ಲಿನ 3-0 ಅಂತರದ ಕ್ಲೀನ್ ಸ್ವೀಪ್ ಗೆಲುವಿನ ಬಳಿಕ ವಿಮರ್ಶಕರ ವಿರುದ್ದ ತಿರುಗಿ ಬಿದ್ದಿರುವ ನಾಯಕ ತಾವೂ ಯಾರಿಗೂ ಏನನ್ನು ಸಾಬೀತು ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾವು ಮೂರನೇ ಪಂದ್ಯದಲ್ಲೂ ಏಳು ವಿಕೆಟ್ ಅಂತರದ ಅಧಿಕಾರಯುತ ಗೆಲುವು ದಾಖಲಿಸಿತ್ತು. ಬ್ಯಾಟ್ ಮೂಲಕ ನಾನು ಏನನ್ನು ಸಾಬೀತು ಮಾಡುವ ಅಗತ್ಯವಿಲ್ಲ. ತಂಡಕ್ಕಾಗಿ ನನ್ನ ಕರ್ತವ್ಯವನ್ನು ನಿಭಾಯಿಸಲು ಬಯಸುತ್ತೇನೆ. ನಾನು ವೈಯಕ್ತಿಕ ನಿರ್ವಹಣೆಗಾಗಿ ಆಡುತ್ತಿಲ್ಲ ಎಂದು ಕೊಹ್ಲಿ ನೇರ ಮಾತುಗಳಲ್ಲಿ ಉತ್ತರಿಸಿದರು. ನಾನು 20, 30, 40, 50 ಎಷ್ಟೇ ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಬೇಕು. ಕಳೆದ 11 ವರ್ಷಗಳಲ್ಲಿ ಅದನ್ನೇ ಮಾಡುತ್ತಿದ್ದೇನೆ. ಇದು ಹೊಸತೇನಲ್ಲ. ಹಾಗಾಗಿ ಯಾವುದೇ ರೀತಿಯ ಒತ್ತಡವಿಲ್ಲ ಎಂದರು. ವಿಶ್ವಕಪ್‌ನಲ್ಲಿ ಸತತ ಐದು ಅರ್ಧಶಕಕಗಳನ್ನು ಬಾರಿಸಿದರೂ ಕೊಹ್ಲಿ ಶತಕದ ಬರ ಎದುರಿಸಿದ್ದರು. ಇದೀಗ ವಿಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಮತ್ತೆ ಲಯ ಕಂಡುಕೊಂಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2GUozdZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...