ಆ್ಯಂಟಿಗುವಾ: ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 318 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಮಾರಕ ದಾಳಿ ಸಂಘಟಿಸಿದ , ಕೇವಲ ಏಳು ರನ್ನಿಗೆ ಐದು ವಿಕೆಟುಗಳನ್ನು ಕಿತ್ತು ಮಿಂಚಿದರು. ಈ ಮೂಲಕ ಅನೇಕ ಸ್ಮರಣೀಯ ದಾಖಲೆಗಳನ್ನು ಬುಮ್ರಾ ಬರೆದಿದ್ದಾರೆ. 7 ರನ್ನಿಗೆ 5 ವಿಕೆಟ್: ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಬೌಲರ್‌ನಿಂದ ದಾಖಲಾದ ಶ್ರೇಷ್ಠ ಐದು ವಿಕೆಟ್ ಸಾಧನೆಯಾಗಿದೆ. ಪ್ರಥಮ ಪ್ರವಾಸದಲ್ಲೇ 5 ವಿಕೆಟ್ ಸಾಧನೆ: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ತಮ್ಮ ಪ್ರಥಮ ಪ್ರವಾಸದಲ್ಲೇ ಐದು ವಿಕೆಟ್ ಸಾಧನೆ ಮಾಡಿದ ಹಿರಿಮೆಗೆ ಬುಮ್ರಾ ಭಾಜನವಾಗಿದ್ದಾರೆ. ಏಷ್ಯಾದ ಮೊದಲ ಬೌಲರ್: ಅಷ್ಟೇ ಅಲ್ಲದೆ ಈ ನಾಲ್ಕು ದೇಶಗಳಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಏಷ್ಯಾ ಮೊದಲ ಬೌಲರ್ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಈ ಮೊದಲು ಟ್ವೆಂಟಿ-20 ಹಾಗೂ ಏಕದಿನ ಸರಣಿಗಳಿಂದ ಬುಮ್ರಾ ವಿಶ್ರಾಂತಿ ಪಡೆದುಕೊಂಡಿದ್ದರು. ಅಲ್ಲದೆ ಟೆಸ್ಟ್ ಸರಣಿಗೆ ಹೆಚ್ಚಿನ ತಾಜಾತನದೊಂದಿಗೆ ಎಂಟ್ರಿ ಕೊಟ್ಟಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZsnPTT