6,6,4,4,6,6: ಪಾಕ್ ಸ್ಪಿನ್ನರ್ ಓವರ‌್‌ವೊಂದರಲ್ಲಿ 32 ರನ್ ಚಚ್ಚಿದ ಗೇಲ್!

ಟೊರಂಟೊ: ಹಲವಾರು ಕಾರಣಗಳಿಂದಾಗಿ ಟೂರ್ನಮೆಂಟ್ ಗಮನ ಸೆಳೆಯುತ್ತಿದೆ. ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ಭಾರತದ ವಿಶ್ವಕಪ್ ಹೀರೊ ಮಾಜಿ ಆಲ್‌ರೌಂಡರ ಯುವರಾಜ್ ಸಿಂಗ್ ಸಾನಿಧ್ಯವೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ. ಕೆಲವು ದಿನಗಳಷ್ಟೇ ಹಿಂದೆಯಷ್ಟೇ 54 ಎಸೆತಗಳಲ್ಲೇ 124 ರನ್ ಚಚ್ಚಿರುವ ಗೇಲ್ ಇದೀಗ, ಪಾಕಿಸ್ತಾನದ ಸ್ಪಿನ್ನರ್ ಶದಬ್ ಖಾನ್ ಓವರ್‌ವೊಂದರಲ್ಲಿ ನಾಲ್ಕು ಸಿಕ್ಸರ್ ಸೇರಿದಂತೆ 32 ರನ್ ಚಚ್ಚುವ ಮೂಲಕ ಮಿಂಚಿದ್ದಾರೆ. ವ್ಯಾಂಕೋವರ್ ನೈಟ್ಸ್ ತಂಡದ ನಾಯಕರೂ ಆಗಿರುವ ಗೇಲ್, ಎಡ್ಮಂಟನ್ ರಾಯಲ್ಸ್ ವಿರುದ್ಧ ಆರು ವಿಕೆಟ್ ಅಂತರದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಕೇವಲ ಆರು ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡ ಗೇಲ್ 44 ಎಸೆತಗಳಲ್ಲೇ 94 ರನ್ ಚಚ್ಚಿದರು. ಈ ಮೂಲಕ ಸತತ ಎರಡನೇ ಶತಕ ಮಿಸ್ ಮಾಡಿಕೊಂಡರು. ಅತ್ತ ಭಾರತ ತಂಡವು ವೆಸ್ಟ್‌ಇಂಡೀಸ್ ವಿರುದ್ದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾಗವಹಿಸುತ್ತಿದೆ. ಆದರೆ ವಿಂಡೀಸ್ ಸರಣಿಯಲ್ಲಿ ಗೇಲ್‌ರನ್ನು ಹೆಸರಿಸಲಾಗಿಲ್ಲ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31cOYeJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...