ತೀರ್ಥಹಳ್ಳಿ (): ಕೃಷಿ ಔಷಧಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವವವರ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮ ಜರುಗಿಸಲಿದೆ ಎಂದು ಗೃಹಸಚಿವ, ಕಾರ್ಯಪಡೆ ಅಧ್ಯಕ್ಷ ಹೇಳಿದರು. ಅವರು ತಾಲೂಕಿನ ಆಗುಂಬೆ ಹೋಬಳಿ ನಾಲೂರು ಗ್ರಾ.ಪಂ. ವ್ಯಾಪ್ತಿಯ ಇಳಿಮನೆ ಗ್ರಾಮ ಸೇರಿದಂತೆ ಅನೇಕ ಕಡೆಗಳ ಎಲೆಚುಕ್ಕೆ ರೋಗ ಪೀಡಿತ ಅಡಕೆ ತೋಟಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ಎಲೆಚುಕ್ಕೆ, ಕೊಳೆರೋಗ ನಿಯಂತ್ರಣದ ಔಷಧವನ್ನು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿರುವ ಸಂಗತಿ ಸರಕಾರದ ಗಮನಕ್ಕೆ ಬಂದಿದೆ. ದರ ನಿಗದಿ ಕುರಿತಂತೆ ಪರಿಶೀಲನೆ ನಡೆಸುವುದು ಅನಿವಾರ‍್ಯವಾಗಲಿದೆ ಎಂದು ಹೇಳಿದರು. ಎಲೆಚುಕ್ಕೆ ರೋಗ ನಿಯಂತ್ರಣ ಸಂಬಂಧ ರೈತರಿಗೆ ಸೂಕ್ತ ಮಾಹಿತಿ ನೀಡುವಂತೆ ಕೃಷಿ ವಿಶ್ವವಿದ್ಯಾನಿಲಯ, ಅಡಕೆ ಸಂಶೋಧನಾ ಕೇಂದ್ರ, ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲೆಚುಕ್ಕೆ ರೋಗ ವ್ಯಾಪಕವಾಗಿ ಹರಡಲು ಕಾರಣವಾದ ಅಂಶಗಳ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ರೈತರು ಧೈರ‍್ಯಗೆಡದೆ ರೋಗ ನಿಯಂತ್ರಣದ ಕಡೆಗೆ ನಿಗಾವಹಿಸಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದರು. ಔಷಧಕ್ಕೆ ಸಬ್ಸಿಡಿ ಅಡಕೆ ಎಲೆಚುಕ್ಕೆ ರೋಗ ನಿಯಂತ್ರಣ ಔಷಧಕ್ಕೆ ಸರಕಾರದಿಂದ ಸಹಾಯಧನ ಒದಗಿಸುವ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ. ರೈತರಿಗೆ ಸಹಾಯಧನ ಒದಗಿಸುವಂತೆ ತೋಟಗಾರಿಕಾ ಸಚಿವರಿಗೆ ಮನವಿ ಮಾಡಲಾಗಿದೆ. ರೈತರ ಜತೆಗೆ ಸರಕಾರ ಇದ್ದು ಸೂಕ್ತ ನೆರವು ನೀಡಲು ಬದ್ಧವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
from India & World News in Kannada | VK Polls https://ift.tt/3D95bog