ಬೆಂಗಳೂರು, ಮಂಗಳೂರಲ್ಲಿ ಮಾತ್ರವೇ ಮೂರಂಕಿ ಸೋಂಕು: 7 ಜಿಲ್ಲೆಗಳಲ್ಲಿ ಶೂನ್ಯಕ್ಕಿಳಿದ ಕೋವಿಡ್‌

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಹೊಸ ಪ್ರಕರಣಗಳ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಇದೆ. ಗುರುವಾರವೂ ರಾಜ್ಯದಲ್ಲಿ 836 ಪ್ರಕರಣಗಳು ದೃಢಪಟ್ಟಿವೆ. ಸಕ್ರಿಯ ಪ್ರಕರಣಗಳಲ್ಲೂ ಇಳಿಕೆ ಕಂಡುಬರುತ್ತಿದೆ. ಇಂದು 852 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 15 ಸೋಂಕಿತರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇ.0.80ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,590ಕ್ಕೆ ಇಳಿಕೆಯಾಗಿದೆ. ಇಂದು 1,45,085ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ ಒಟ್ಟು 29,71,044ಕ್ಕೆ ಏರಿಕೆಯಾಗಿದೆ. ಈ ಪೈಕಿ ಇದುವರೆಗೆ ಒಟ್ಟು 29,19,742 ಮಂದಿ ಗುಣಮುಖರಾಗಿ ಆಸ್ರತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 13,590 ಸಕ್ರಿಯ ಪ್ರಕರಣಗಳಿವೆ. ರಾಜ್ಯಾದ್ಯಂತ ಗುರುವಾರ 1,59,049ಮಂದಿಗೆ ಲಸಿಕೆ ನೀಡಲಾಗಿದೆ. ಪ್ರತಿದಿನ ಸರಾಸರಿ 2 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದುವರೆಗೆ ಒಟ್ಟು 5,39,04,745 ಮಂದಿಗೆ ಲಸಿಕೆ ನೀಡಲಾಗಿದೆ. ಬೆಂಗಳೂರಲ್ಲಿ 310 ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಗುರುವಾರ ಹೊಸದಾಗಿ 310 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, 239 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸೋಂಕಿತ ಸಂಖ್ಯೆ ಹೆಚ್ಚಿದ್ದು, ಇಂದು 106 ಪ್ರಕರಣಗಳು ಪತ್ತೆಯಾಗಿವೆ. ಮೂವರು ಮೃತಪಟ್ಟಿದ್ದಾರೆ. ಜಿಲ್ಲಾವಾರು ಸೋಂಕಿನ ಸಂಖ್ಯೆ: ಬಾಗಲಕೋಟೆ- 1, ಬಳ್ಳಾರಿ- 3 , ಬೆಳಗಾವಿ- 7, ಬೆಂಗಳೂರು ಗ್ರಾಮಾಂತರ- 17, ಬೆಂಗಳೂರು ನಗರ- 310, ಬೀದರ್- 3, ಚಾಮರಾಜನರ- 5, ಚಿಕ್ಕಬಳ್ಳಾಪುರ- 0, ಚಿತ್ರದುರ್ಗ- 2, ಚಿಕ್ಕಮಗಳೂರು- 26, ದಕ್ಷಿಣ ಕನ್ನಡ- 106, ದಾವಣಗೆರೆ- 2, ಧಾರವಾಡ- 3, ಗದಗ- 0, ಹಾಸನ- 47, ಹಾವೇರಿ- 0, ಕಲಬುರಗಿ- 5, ಕೊಡಗು- 37, ಕೋಲಾರ- 15, ಕೊಪ್ಪಳ- 0, ಮಂಡ್ಯ- 18, ಮೈಸೂರು- 78, ರಾಯಚೂರು- 0, ರಾಮನಗರ- 3, ಶಿವಮೊಗ್ಗ- 22, ತುಮಕೂರು- 25, ಉಡುಪಿ- 69, ಉತ್ತರ ಕನ್ನಡ- 32, ವಿಜಯಪುರ- 0, ಯಾದಗಿರಿ- 0 24 ಗಂಟೆಗಳ ಅಂತರದಲ್ಲಿ 1,45,085 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪಾಸಿಟಿವಿಟಿ ದರ 0.57ಕ್ಕೆ ಇಳಿಕೆಯಾಗಿದೆ. ಇಂದು ಒಂದೇ ದಿನ 15 ಮಂದಿ ಸಾವನ್ನಪ್ಪಿದ್ದು, ಸೋಂಕಿನಿಂದ ಸಂಭವಿಸುವ ಮರಣ ಪ್ರಮಾಣ ಶೇ.1.79ರಷ್ಟಿದೆ. ಇದುವರೆಗೆ ಕೋವಿಡ್‌ ಸೋಂಕಿನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 37, 683ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ 7 ದಕ್ಷಿಣ ಕನ್ನಡ 3, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಧಾರವಾಡ, ಮೈಸೂರು, ತುಮಕೂರಿನಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.


from India & World News in Kannada | VK Polls https://ift.tt/3zzIVlh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...