ಪಾಕ್ ಪ್ರಧಾನಿಗೆ ಬೆವರಿಳಿಸಿದ ಭಾರತೀಯ ನಾರಿ..! ಯಾರಿದು ಸ್ನೇಹಾ ದುಬೆ..?

ಆಕೆಗೆ ಸರಿಸುಮಾರು 30 ವರ್ಷ ಇರಬಹುದು.. ಐದೂವರೆ ಅಡಿ ಎತ್ತರದ ಆ ಭಾರತೀಯ ನಾರಿ, ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಚಾಟಿ ಬೀಸಿದ ಪರಿಯನ್ನು ನೋಡಿದಾಗ ಭಾರತೀಯರಲ್ಲಿ ರೋಮಾಂಚನ..! ಅಣ್ವಸ್ತ್ರ ಶಕ್ತ ರಾಷ್ಟ್ರವೊಂದರ ಪ್ರಧಾನಿಗೆ ವಿಶ್ವಸಂಸ್ಥೆಯಲ್ಲಿ ಜಾಗತಿಕ ಮಟ್ಟದಲ್ಲಿ ತರಾಟೆಗೆ ತೆಗೆದುಕೊಂಡ ಆಕೆಯ ಮಾತುಗಳು ಒಂದೂಂದೊ ಮಿಸೈಲ್‌ಗಳೇ..! ಹೌದು..! ಆಕೆ ಸ್ನೇಹಾ ದುಬೆ..! 2012ರ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿ.. ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಅಧಿಕಾರಿ ಅವರ ಪೋಷಕರು ಸಾಮಾನ್ಯ ಭಾರತೀಯ ಮಧ್ಯಮ ವರ್ಗದ ಪ್ರಜೆಗಳು. ಸ್ನೇಹಾ ದುಬೆ ಅವರ ತಂದೆ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೋವಾದಲ್ಲಿ ಶಾಲಾ ವ್ಯಾಸಂಗ ಪೂರ್ಣಗೊಳಿಸಿದ ಸ್ನೇಹಾ ದುಬೆ, ಪುಣೆಯ ಫರ್ಗುಸನ್ ಕಾಲೇಜ್‌ನಲ್ಲಿ ಪದವಿ ವ್ಯಾಸಂಗ ಮಾಡಿದರು. ದಿಲ್ಲಿಯ ಜೆಎನ್‌ಯುನಲ್ಲಿ ಅಂತಾರಾಷ್ಟ್ರೀಯ ಅಧ್ಯಯನ ವಿಷಯದ ಬಗ್ಗೆ ಎಂಫಿಲ್ ಪದವಿ ಪಡೆದರು. ಒಂದೇ ವರ್ಷದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಆಗಿ ಐಎಫ್‌ಎಸ್ ಅಧಿಕಾರಿಯಾದರು. ಐಎಫ್‌ಎಸ್ ಅಧಿಕಾರಿಯಾಗಿ ಸೇವೆಗೆ ಸೇರ್ಪಡೆಯಾದ ಬಳಿಕ ಸ್ನೇಹಾ ದುಬೆ ಅವರು ಮೊದಲಿಗೆ ವಿದೇಶಾಂಗ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿ, ಮ್ಯಾಡ್ರಿಡ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ 3ನೇ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿ ಭಾರೀ ಸುದ್ದಿಯಲ್ಲಿದ್ದಾರೆ..! ವಿಶ್ವಸಂಸ್ಥೆಯಲ್ಲಿ ಪ್ರತಿ ಬಾರಿಯೂ ಅನಗತ್ಯವಾಗಿ ಕಾಶ್ಮೀರದ ಕುರಿತು ಪ್ರಸ್ತಾಪಿಸುವ , ಈ ಬಾರಿಯೂ ಅದೇ ಕೆಲಸ ಮಾಡಿತು. ಆದ್ರೆ, ಈ ಬಾರಿ ಭಾರತದ ಬಳಿ ಬ್ರಹ್ಮಾಸ್ತ್ರವೇ ಸಿದ್ದವಾಗಿತ್ತು..! ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಭಾರತದ ವಿದೇಶಾಂಗ ಸಚಿವಾಲಯದ ಮಹಿಳಾ ಅಧಿಕಾರಿ ಖಡಕ್‌ ತಿರುಗೇಟು ಕೊಟ್ಟರು. ಪ್ರತಿಕ್ರಿಯಿಸುವ ಹಕ್ಕು ಚಲಾಯಿಸಿ ವಿಶ್ವಸಂಸ್ಥೆಯಲ್ಲಿ 25 ನಿಮಿಷ ಮಾತನಾಡಿದ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ, 'ಪಾಕಿಸ್ತಾನವು ಬೆಂಕಿ ಹಚ್ಚಿ ಮಜಾ ನೋಡುವ ಜಾಯಮಾನ ರೂಢಿಸಿಕೊಂಡು ಬಂದಿದೆ. ಆದರೆ ತನ್ನನ್ನು ಅಗ್ನಿಶಾಮಕ ಕಾರ್ಯಕರ್ತರಂತೆ ಬಿಂಬಿಸಿಕೊಳ್ಳುವ ಪಾಕ್‌, ಭಾರತದ ಅವಿಭಾಜ್ಯ ಅಂಗವಾದ ಪಿಒಕೆ ಮತ್ತು ಕಾಶ್ಮೀರದ ವಿಚಾರಗಳಲ್ಲಿಅನಗತ್ಯವಾಗಿ ಪದೇ ಪದೇ ಮೂಗು ತೂರಿಸುತ್ತಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ವಿರುದ್ಧ ಹುಸಿ ಆರೋಪಗಳ ಮೂಲಕ ವಿಷ ಕಾರುವುದು ಪಾಕಿಸ್ತಾನದ ವಿಫಲ ತಂತ್ರವಾಗಿದ್ದು, ಅದನ್ನೇ ಖಾನ್‌ ಮುಂದುವರಿಸಿದ್ದಾರೆ' ಎಂದು ತಿರುಗೇಟು ನೀಡಿದರು. 'ಜಮ್ಮು - ಕಾಶ್ಮೀರ ಮತ್ತು ಲಡಾಕ್‌ ಹಿಂದೆ, ಇಂದು, ಮುಂದೆ, ಎಂದೆಂದೂ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನವು ತಕ್ಷಣವೇ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಿಂದ ಕಾಲು ಕೀಳಬೇಕು' ಎಂದು ಸ್ನೇಹಾ ಆಗ್ರಹಿಸಿದರು. ಪಾಕಿಗಳೇ ಉಗ್ರ ಪೋಷಕರು: 'ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಸಮಯ ಸಿಕ್ಕಾಗೆಲ್ಲ ಪಾಕಿಸ್ತಾನವು, 'ನಾನು ಕೂಡ ಭಯೋತ್ಪಾದನೆಯ ಸಂತ್ರಸ್ತ' ಎಂದು ಮೊಸಳೆ ಕಣ್ಣೀರು ಸುರಿಸುತ್ತದೆ. ಆದರೆ ತನ್ನ ನೆಲದಲ್ಲಿ ಉಗ್ರ ಶಿಬಿರಗಳನ್ನು ಸ್ಥಾಪಿಸಿಕೊಂಡು, ಗುಪ್ತಚರ ಇಲಾಖೆ ಮೂಲಕ ಉಗ್ರರ ಪೋಷಣೆಯಲ್ಲಿ ನಿರತವಾಗಿದೆ. ಪಾಕಿಸ್ತಾನದ ಉಗ್ರ ಪಾಲನೆ ನೀತಿಯಿಂದ ಇಡೀ ಜಗತ್ತು ಆತಂಕದಲ್ಲಿ ಮುಳುಗುವಂತಾಗಿದೆ. ಹೀಗಿದ್ದೂ ಭಾರತ ಮತ್ತು ಇತರ ನೆರೆ ರಾಷ್ಟ್ರಗಳ ಮೇಲೆ ಉಗ್ರರ ಪೋಷಣೆಯ ಹುಸಿ ಆರೋಪವನ್ನು ಹೊರಿಸಿಕೊಂಡು, ತಾನು ಬಚಾವಾಗಲು ಪಾಕ್‌ ಸತತ ಯತ್ನ ನಡೆಸುತ್ತಲೇ ಇದೆ' ಎಂದು ಸ್ನೇಹಾ ಆರೋಪಿಸಿದರು. 'ಧಾರ್ಮಿಕ, ಸಾಂಸ್ಕೃತಿಕ ವೈವಿಧ್ಯತೆ ಎನ್ನುವುದು ಪಾಕಿಸ್ತಾನಕ್ಕೆ ಯಾವತ್ತಿಗೂ ಅರ್ಥ ಆಗುವುದೇ ಇಲ್ಲ. ಹಾಗಾಗಿ ತಮ್ಮ ನೆಲದ ಧಾರ್ಮಿಕ ಅಲ್ಪಸಂಖ್ಯಾತರನ್ನು ನಿತ್ಯ ಹಿಂಸಿಸುತ್ತಿದೆ' ಎಂದು ಸಿಖ್‌, ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಪರೋಕ್ಷವಾಗಿ ಸ್ನೇಹಾ ದುಬೆ ಪ್ರಸ್ತಾಪಿಸಿದರು. ವಿಶ್ವಸಂಸ್ಥೆಯ 76ನೇ ಸಾಮಾನ್ಯ ಅಧಿವೇಶನ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, 370ನೇ ವಿಧಿ ರದ್ದತಿ ಖಂಡಿಸಿದ್ದರು. ಜತೆಗೆ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್‌ ಅಲಿ ಷಾ ಗಿಲಾನಿ ಸಾವಿಗೆ ಸಂತಾಪ ಸೂಚಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಸ್ನೇಹಾ ದುಬೆ ಇದೀಗ ನ್ಯಾಷನಲ್ ಹೀರೋ ಆಗಿದ್ದಾರೆ..! ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಾ ದುಬೆ ಅವರ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಭಾರತದ ಹೆಮ್ಮೆಯ ನಾರಿ ಎಂದು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ.


from India & World News in Kannada | VK Polls https://ift.tt/3CN1l45

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...