ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನ ಆಗಬೇಕು: ಎಸ್‌ಆರ್‌ ಪಾಟೀಲ್‌ ಆಗ್ರಹ

ಸಕ್ಕರೆ ಉತ್ಪಾದನೆಯಲ್ಲಿ ಸಾಧನೆ ಮಾಡಿದ್ದರೆ ಅದರಲ್ಲಿ ಭಾಗದ ಸಕ್ಕರೆ ಕಾರ್ಖಾನೆಗಳ ಪಾತ್ರ ಪ್ರಮುಖವಾಗಿದೆ. ದುಸ್ಥಿತಿಯಲ್ಲಿರುವ ಇವುಗಳ ಪುನಶ್ಚೇತನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್‌ಆರ್ ಪಾಟೀಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯಆಗಬೇಕು. ಇವುಗಳಿಗೆ ಆರ್ಥಿಕ ಸಹಕಾರ ನೀಡುತ್ತಿದ್ದ ಸಹಕಾರಿ ಬ್ಯಾಂಕ್‌ಗಳು ಕೂಡ ದುಸ್ಥಿತಿಯಲ್ಲಿವೆ. ಬ್ಯಾಂಕ್‌ಗಳು, ಕಾರ್ಖಾನೆ ಸುಸ್ಥಿತಿಗೆ ತರುವ ಸಂಬಂಧ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ನಿಯಮ 330ರ ಅಡಿ ವಿಧಾನ ಪರಿಷತ್‌ನಲ್ಲಿ ಸರ್ಕಾರದ ಗಮನ ಸೆಳೆದು ಚರ್ಚೆ ನಡೆಸಿದರು. 87 ಸಕ್ಕರೆ ಕಾರ್ಖಾನೆಗಳು ರಾಜ್ಯದಲ್ಲಿದ್ದು, 22 ಮುಚ್ಚಿವೆ. ಉತ್ತರ ಕರ್ನಾಟಕ ದಲ್ಲಿ 33 ಇವೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚು ಕಾರ್ಖಾನೆ ಇದೆ. ಶೇ.80ರಷ್ಟು ಸಕ್ಕರೆ ಉತ್ಪಾದನೆ ಆಗುತ್ತದೆ. ಇಲ್ಲಿನ ಕಾರ್ಖಾನೆಗಳಲ್ಲಿ ಬರುವ ಆದಾಯ ಬ್ಯಾಂಕ್ ಸಾಲಕ್ಕೆ ಬಡ್ಡಿಕಟ್ಟುವಲ್ಲೇ ವ್ಯಯ ಆಗುತ್ತಿದೆ. ಕೋವಿಡ್‌ನಿಂದಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೈತರು ರಸ್ತೆಗೆ ಬರಬೇಕಾಗುತ್ತದೆ. ಆತಂಕವಾಗುತ್ತಿದ್ದು, ಸರ್ಕಾರ ಸಹಾಯಕ್ಕೆ ಧಾವಿಸಬೇಕು ಎಂದು ಒತ್ತಾಯಿಸಿದರು. ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿವೆ. ವಿದ್ಯುತ್ ಉತ್ಪಾದನೆಗೆ ಪ್ರಥಮ ಆದ್ಯತೆ ನೀಡುತ್ತಾರೆ. ಹೆಚ್ಚಿನ ಬೆಲೆ ನೀಡುತ್ತಾರೆ. ಕಾರ್ಖಾನೆ ಉಳಿವಿಗೆ ಶ್ರಮಿಸುತ್ತಾರೆ. ಆದರೆ, ರಾಜ್ಯದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಉತ್ತೇಜನ ನೀಡಿದರೆ ಮಾತ್ರ ಉಳಿಗಾಲ ಇರಲಿದೆ. ಕಾರ್ಖಾನೆಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡಬೇಕು ಎಂದರು. ಬಿಜೆಪಿ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲೇ 13 ಸಕ್ಕರೆ ಕಾರ್ಖಾನೆ ಇದೆ. ಸಾವಿರಾರು ಮಂದಿಗೆ ಉದ್ಯೋಗ ನೀಡಿದೆ. ಇವು ಸುಸಜ್ಜಿತವಾಗಿ ನಡೆಯಬೇಕು. ಕಬ್ಬು ಹೊರತುಪಡಿಸಿ ಬೇರೆ ರೈತರು ಅಭಿವೃದ್ಧಿ ಹೊಂದಿಲ್ಲ. ಬ್ಯಾಂಕ್‌ಗಳು ನೀಡುವ ಬಡ್ಡಿದರಕ್ಕಿಂತ ಸಹಕಾರಿ ಬ್ಯಾಂಕುಗಳ ಬಡ್ಡಿದರ ಹೆಚ್ಚು. ಸರ್ಕಾರ ಬಡ್ಡಿ ದರ ಕಡಿತಗೊಳಿಸಬೇಕು. ಸರ್ಕಾರ ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನೆ ಆಗುವ ವಿದ್ಯುತ್ ಖರೀದಿಗೆ ಮುಂದಾಗಬೇಕು ಎಂದರು. ಆರ್‌ಬಿ ತಿಮ್ಮಾಪೂರ್ ಮಾತನಾಡಿ, ರನ್ನ ಸಕ್ಕರೆ ಕಾರ್ಖಾನೆ ನಷ್ಟದಿಂದಾಗಿ ಮುಚ್ಚಿದೆ. 17 ವರ್ಷ ಕಾಲಾವಧಿಯಲ್ಲಿ ಆದ ನಷ್ಟ ಈಗ ಈ ಸ್ಥಿತಿಗೆ ತಂದಿದೆ. ಇದನ್ನು ಸುಸ್ಥಿತಿಗೆ ತರುವ ಅವಕಾಶ ಇದ್ದರೂ ಸರ್ಕಾರ ಮಾಡಿಲ್ಲ. 170 ಕೋಟಿ ರೂ. ಹಾನಿಯಲ್ಲಿದೆ. ಆದಷ್ಟು ಬೇಗ ಸರ್ಕಾರ ಇಲ್ಲಿನ ಸಮಸ್ಯೆ ಪರಿಹರಿಸಿ, ಕಾರ್ಖಾನೆ ಮರು ಆರಂಭವಾಗುವಂತೆ ‌ನೋಡಿಕೊಳ್ಳಿ ಎಂದು ಮನವಿ ಮಾಡಿದರು. ಸಚಿವ ಎಸ್‌ಟಿ ಸೋಮಶೇಖರ್ ಉತ್ತರ ನೀಡಿ, ರಾಜ್ಯ ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಸಹಕಾರಿ ಸಂಘದಿಂದ ಸಾಲ ಪಡೆದವರು. ತೀರಿಸಿಲ್ಲ. 34 ಸಕ್ಕರೆ ಕಾರ್ಖಾನೆಗಳಲ್ಲಿ ಅರ್ಧದಷ್ಟು ಮಂದಿ ಮಾತ್ರ ಸರಿಯಾಗಿ ನಡೆದುಕೊಳ್ಳುತ್ತಾರೆ. ಉಳಿದವರಲ್ಲಿ ಕೆಲವರು ಬಡ್ಡಿ ಕಟ್ಟುತ್ತಾರೆ. ಕೆಲ ಶಾಸಕರು ‌ಕಾರ್ಖಾನೆ ಹೊಂದಿದ್ದು, ಅವರು ಇದುವರೆಗೂ ಒಂದು ರೂಪಾಯಿ ಭರಿಸಿಲ್ಲ. ಸಾಲ ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಕ್ಕರೆ ಲಾಬಿ ರಾಜ್ಯದಲ್ಲಿ ಪ್ರಭಲವಾಗಿದೆ ಎಂದರು. ಎಸ್‌ಆರ್ ಪಾಟೀಲ್‌ ಅವರು ಒಪ್ಪಿದರೆ, ಇಂಧನ, ಸಕ್ಕರೆ ಮತ್ತು ಸಹಕಾರ ಸಚಿವರ ಜತೆ ಅಗತ್ಯವಿರುವ ಎಲ್ಲಾ ಸಂಬಂಧಿಸಿದ ಅಧಿಕಾರಿಗಳ ಜತೆ ಅಕ್ಟೋಬರ್ 16ರ ನಂತರ ಸಭೆ ನಡೆಸಿ ಲೋಪ ಸರಿಪಡಿಸಲು ತೀರ್ಮಾನಿಸೋಣ ಎಂದು ಎಸ್‌ಟಿ ಸೋಮಶೇಖರ್‌ ಹೇಳಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್‌ಆರ್ ಪಾಟೀಲ್ ಸಹ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/3EIYuuJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...