Amazon ಈಸ್ಟ್‌ ಇಂಡಿಯಾ ಕಂಪನಿ ಇದ್ದಂತೆ: ಕೆಂಡ ಕಾರಿದ ಆರೆಸ್ಸೆಸ್‌ ಪತ್ರಿಕೆ ಪಾಂಚಜನ್ಯ!

ಹೊಸದಿಲ್ಲಿ: ಕೆಲ ದಿನಗಳ ಹಿಂದಷ್ಟೇ ಭಾರತದ ಟೆಕ್‌ ದಿಗ್ಗಜ ಇನ್ಫೋಸಿಸ್‌ ಅನ್ನು 'ತುಕ್ಡೇ ತುಕ್ಡೇ ಗ್ಯಾಂಗ್‌ ಅನ್ನು ಬೆಂಬಲಿಸುವ ಕಂಪನಿ' ಎಂದು ಹೇಳಿದ್ದ ನಂಟು ಹೊಂದಿರುವ ವಾರ ಪತ್ರಿಕೆ ಇದೀಗ ಆನ್‌ಲೈನ್‌ ಮಾರುಕಟ್ಟೆ ದೈತ್ಯ ಅನ್ನು ಗುರಿಯಾಗಿಸಿ ಟೀಕೆ ಮಾಡಿದೆ. ತನ್ನ ಹೊಸ ಆವೃತ್ತಿಯಲ್ಲಿ ಅಮೆಜಾನ್‌ ವಿರುದ್ಧ ಕೆಂಡ ಕಾರಿರುವ ಪಾಂಚಜನ್ಯ ನಿಯತಕಾಲಿಕೆ, ಅಮೆಜಾನ್‌ ಅನ್ನು ' 2.0' ಎಂದು ಸಂಬೋಧಿಸಿದೆ. ಈ ಬಗ್ಗೆ ಮುಖಪುಟ ಲೇಖನವನ್ನೇ ಪ್ರಕಟ ಮಾಡಿರುವ ಪಾಂಚಜನ್ಯ, 'ಅಮೆಜಾನ್‌ ಕೂಡ ಭಾರತದ ಮಾರುಕಟ್ಟೆಯಲ್ಲಿ ಏಕಾಧಿಪತಿಯಾಗಿ ಮೆರೆಯುವುದಕ್ಕೆ ಹವಣಿಸುತ್ತಿದೆ. ಇದಕ್ಕಾಗಿ ರಾಜಕೀಯ, ಆರ್ಥಿಕ ಹಾಗೂ ಜನರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಬಳಿಸಲು ಮುಂದಾಗಿದೆ' ಎಂದು ಆರೋಪಿಸಿದೆ. ಭಾರತದ ಇ-ಮಾರುಕಟ್ಟೆಯನ್ನು ಕಬಳಿಸಲು ಮುಂದಾಗಿರುವ ಅಮೆಜಾನ್‌, ಇದಕ್ಕಾಗಿ ಲಂಚಕೊಟ್ಟು, ನೀತಿಗಳನ್ನು ತನಗೆ ಬೇಕಾದಂತೆ ಮಾಡಿಸುತ್ತಿದೆ. ವಿಡಿಯೋದಲ್ಲಿ ಭಾರತದ ಸಂಸ್ಕೃತಿಗೆ ವಿರುದ್ಧವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದೆ. ಭಾರತದಲ್ಲಿ ಹೂಡಿಕೆ ಮಾಡುವಾಗ ಸಣ್ಣ ಸಣ್ಣ ವ್ಯಾಪಾರಿಗಳಿಗೆ ತನ್ನ ವೇದಿಕೆ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿತ್ತು. ಆದರೆ ಇದೀಗ ತನ್ನದೇ ಸ್ವಂತ ಕಂಪನಿಗಳಿಗೆ ಮಾತ್ರ ಅವಕಾಶ ನೀಡಿದೆ. ಕ್ಲೌಡ್‌ ಟೈಲ್‌ ಹಾಗೂ ಏಪ್ರಿಯಾದಂಥ ಕಂಪನಿಗಳಿಗೆ ಅಮೆಜಾನ್‌ ಹೆಚ್ಚಿನ ಅವಕಾಶ ನೀಡಿದೆ. ಈ ಎರಡೂ ಕಂಪನಿಗಳು ಅಮೆಜಾನ್‌ನಲ್ಲಿ ಶೇ. 35 ರಷ್ಟು ವ್ಯವಹಾರ ಮಾಡುತ್ತಿವೆ ಎಂದು ಹೇಳಿದೆ. ಅಲ್ಲದೇ ಅಮೆಜಾನ್‌ನ ನೀತಿಗಳನ್ನು ಈಸ್ಟ್‌ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿರುವ ಪಾಂಚಜನ್ಯ, 'ಈಸ್ಟ್‌ಇಂಡಿಯಾ ಕಂಪನಿ ಮೊದಲು ಭಾರತದ ಸಂಸ್ಕೃತಿ ಮೇಲೆ ದಾಳಿ ಮಾಡಿತ್ತು. ಬಳಿಕ ಮತಾಂತರಕ್ಕೆ ಬೆಂಬಲ ನೀಡಿತ್ತು. ಈಗ ಅದನ್ನೇ ಅಮೆಜಾನ್‌ ಮಾಡುತ್ತಿದೆ. ತನ್ನ ಪ್ರೈಮ್‌ ವಿಡಿಯೋದಲ್ಲಿ 'ತಾಂಡವ್‌', 'ಪಾತಾಳ ಲೋಕ' ಮುಂತಾದ ಹಿಂದೂ ವಿರೋಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ. ಈ ಬಗ್ಗೆ ಕೇಂದ್ರ ಹಾಗೂ ಹಲವು ರಾಜ್ಯ ಸರ್ಕಾರಗಳ ಕ್ಷಮೆಯನ್ನೂ ಕೋರಿದೆ. ಪ್ರೈಮ್‌ ವಿಡಿಯೋಗಳು ಹಾಗೂ ಅದರಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಹಿಂದೂ ದೇವರನ್ನು ತಮಾಷೆ ಮಾಡಲಾಗುತ್ತದೆ. ಅದರಿಂದ ಕೌಟುಂಬಿಲ ಮೌಲ್ಯಗಳ ಮೇಲೆ ದಾಳಿಯಾಗುತ್ತಿದೆ ಎಂದು ಹಲವು ಮಂದಿ ವೀಕ್ಷಕರು ದೂರು ನೀಡಿದ್ದಾರೆ' ಎಂದು ಪಾಂಚಜನ್ಯ ಹೇಳಿದೆ. ಅಲ್ಲದೇ ಅಮೆಜಾನ್ ಕ್ರೈಸ್ತ ಧರ್ಮವನ್ನು ಬೆಂಬಲಿಸುತ್ತದೆ. ಕ್ರೈಸ್ತ ಸಂಸ್ಥೆಗಳಿಗೆ ಅಮೆಜಾನ್‌ ದೇಣಿಗೆ ನೀಡುತ್ತದೆ ಎಂದು ಆರೋಪಿಸಿದೆ. ಕೆಲ ದಿನಗಳ ಹಿಂದೆ, ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆಯ ಕುರಿತು ನಾಲ್ಕು ಪುಟಗಳ ಮುಖಪುಟ ವರದಿ ಪ್ರಕಟಿಸಿದ್ದ ಆರೆಸ್ಸೆಸ್ ಮುಖವಾಣಿ ಪತ್ರಿಕೆ, ದೇಶ ವಿರೋಧಿ ಶಕ್ತಿಗಳು ಸಂಸ್ಥೆಯ ಮೂಲಕ ಭಾರತದ ಆರ್ಥಿಕತೆಯ ಹಿತಾಸಕ್ತಿಗಳಿಗೆ ಹಾನಿ ಮಾಡಲು ಪ್ರಯತ್ನಿಸುತ್ತಿವೆಯೇ ಎಂದು ಪ್ರಶ್ನಿಸಿತ್ತು.


from India & World News in Kannada | VK Polls https://ift.tt/3zKNeue

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...