ಮಂಗಳೂರಿನಲ್ಲಿ ಟಿಂಟ್‌ ಪಾರದರ್ಶಕತೆ ಪತ್ತೆಗೆ 'ವಿಂಡೋ ಟಿಂಟ್‌ ರೀಡರ್‌'

ಮಂಗಳೂರು: ಟ್ರಾಫಿಕ್‌ ಪೊಲೀಸರಿಗೆ ನಗರದಲ್ಲಿ ಟಿಂಟ್‌ ಕಾರ್ಯಾಚರಣೆಗೆ '' ಸಾಧನವೊಂದನ್ನು ಬಳಸಲಾಗುತ್ತಿದೆ. ಇದರಿಂದ ವಾಹನದ ಟಿಂಟ್‌ ಪಾರದರ್ಶಕತೆಯನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ನಗರ ಪೊಲೀಸ್‌ ಕಮಿಷನರ್‌ ಮಾಹಿತಿ ನೀಡಿ, ವಾಹನದಲ್ಲಿ ಯಾರಾದರೂ ಟಿಂಟ್‌ ಹಾಕಿದರೆ ಈ ಸಾಧನದಿಂದ ಅದರ ಟಿಂಟ್‌ ಪ್ರಮಾಣವನ್ನು ತಪಾಸಣೆ ನಡೆಸಲಾಗುತ್ತಿದೆ. ಒಂದು ವೇಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಟಿಂಟ್‌ ಇದ್ದರೆ ವಾಹನ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನ್ಯಾಯಾಲಯದ ಸೂಚನೆ ಪ್ರಕಾರ ಯಾವುದೇ ವಾಹನದ ಎದುರು ಮತ್ತು ಹಿಂದಿನ ಗ್ಲಾಸ್‌ ಶೇ.70ರಷ್ಟು ಪಾರದರ್ಶಕವಾಗಿರಬೇಕು. ಬದಿಯ ಗ್ಲಾಸ್‌ಗಳು ಶೇ.40ರಷ್ಟು ಪಾರದರ್ಶಕವಾಗಿರಬೇಕು. ಇದಕ್ಕಿಂತ ಜಾಸ್ತಿ ಇರುವಂತಿಲ್ಲ. ಒಂದು ವೇಳೆ ಯಾವುದೇ ವಾಹನ ಸವಾರರು ನಿಯಮ ಮೀರಿದರೆ ಮೋಟಾರು ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುವುದು ಎಂದು ಕಮಿಷನರ್‌ ತಿಳಿಸಿದ್ದಾರೆ. 6 ದಿನ ಟ್ರಾಫಿಕ್‌ ರೈಡ್‌ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸೆ.27ರಿಂದ ಅ.2ರವರೆಗೆ ವಿಶೇಷ ವಾಹನ ತಪಾಸಣೆ ನಡೆಯಲಿದೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ವಾಹನಗಳಿಗೆ ಗಾಜುಗಳಿಗೆ ನಿಷೇಧಿತ ಕಪ್ಪು ಪಟ್ಟಿ ಅಳವಡಿಸಿರುವುದು, ನಂಬರ್‌ ಪ್ಲೇಟ್‌ ಸರಿಯಾಗಿ ಅಳವಡಿಸದಿರುವುದು, ಹೆಲ್ಮೆಟ್‌ ಧರಿಸದಿರುವುದು, ವಿಮೆ ನವೀಕರಿಸದಿರುವುದು, ಹಳೆಯ ಪ್ರಕರಣಗಳನ್ನು ಬಾಕಿಯಿಟ್ಟಿರುವುದು, ಹೊಗೆ ತಪಾಸಣೆ ಮಾಡದಿರುವ ಬಗ್ಗೆ ವಿಶೇಷ ತಪಾಸಣೆ ಮಾಡಲು ಸೂಚಿಸಲಾಗಿದೆ. ಪ್ರತಿಯೊಂದು ದಿನ ಒಂದೊಂದು ವಿಷಯದ ಮೇಲೆ ಕೇಂದ್ರೀಕರಿಸಿ ತಪಾಸಣೆ ನಡೆಸಿ ವರದಿ ನೀಡಲು ಪೊಲೀಸ್‌ ಕಮಿಷನರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


from India & World News in Kannada | VK Polls https://ift.tt/3uihATx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...